ನವದೆಹಲಿ : Side Effects Of Eating Clove : ಲವಂಗವನ್ನು ಸಾಮಾನ್ಯವಾಗಿ ಮಸಾಲೆ ಮತ್ತು ಮೌತ್ ಫ್ರೆಶ್ನರ್ ಆಗಿ ಬಳಸಲಾಗುತ್ತದೆ. ಲವಂಗದ ವೈಜ್ಞಾನಿಕ ಹೆಸರು ಸೀಜೀಯಮ್ ಆರೊಮ್ಯಾಟಿಕಮ್ (Syzygium aromaticum). ಲವಂಗವನ್ನು ಆಯುರ್ವೇದದಲ್ಲಿಔಷಧವಾಗಿಯೂ ಬಳಸಲಾಗುತ್ತದೆ. ಲವಂಗಗಳಲ್ಲಿ ಆಂಟಿ-ಆಕ್ಸಿಡೆಂಟ್, ಆಂಟಿ-ಮೈಕ್ರೊಬಿಯಲ್, ಆಂಟಿ-ವೈರಲ್ ಮತ್ತು ನೋವು ನಿವಾರಕ ಸತ್ವಗಳು, ಖನಿಜಗಳು ಮತ್ತು ಇತರ ಪೌಷ್ಟಿಕ ಅಂಶಗಳು ಕಂಡುಬರುತ್ತವೆ.  ಇದು ದೇಹವನ್ನು ಅನೇಕ ರೋಗಗಳಿಂದ ದೂರವಿರಿಸಲು ಸಹಾಯ ಮಾಡುತ್ತದೆ. ಲವಂಗವನ್ನು (CLove) ಮಸಾಲೆಯಾಗಿ ಆರೋಗ್ಯ ಮತ್ತು ಸೌಂದರ್ಯ ವೃದ್ದಿಗಾಗಿಯೂ  ಬಳಸಲಾಗುತ್ತದೆ. ಲವಂಗದ ಹಲವು ಪ್ರಯೋಜನಗಳನ್ನು ಹೊಂದಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇದರ ಅತಿಯಾದ ಸೇವನೆಯಿಂದ  ಕೆಲವು ಸಮಸ್ಯೆಗಳು ಕೂಡಾ ಎದುರಾಗುತ್ತವೆ. 


COMMERCIAL BREAK
SCROLL TO CONTINUE READING

ಲವಂಗವನ್ನು ತಿನ್ನುವುದರಿಂದಾಗುವ ಅನಾನುಕೂಲಗಳು :  
1. ರಕ್ತ ತೆಳ್ಳಗಾಗುತ್ತದೆ : ಲವಂಗವನ್ನು (Clove )ಅತಿಯಾಗಿ ಸೇವಿಸುವುದರಿಂದ ರಕ್ತ ತೆಳುವಾಗಬಹುದು. ಹಿಮೋಫಿಲಿಯಾದಂತಹ ಬ್ಲೀಡಿಂಗ್ ಡಿಸ್ ಆರ್ಡರ್  ಕಾಯಿಲೆ ಇರುವ ಜನರು ಲವಂಗವನ್ನು ಹೆಚ್ಚು ಸೇವಿಸಬಾರದು. ಅದು ಅವರ ಆರೋಗ್ಯಕ್ಕೆ ಹಾನಿ ಮಾಡುತ್ತದೆ.


ಇದನ್ನೂ ಓದಿ : ಡಯಾಬಿಟಿಸ್ ರೋಗಿಗಳಾಗಿದ್ದರೆ ಈ ವಸ್ತುವನ್ನು ಹೀಗೆ ಸೇವಿಸಿ ನಿಯಂತ್ರಣದಲ್ಲಿರುತ್ತದೆ ಶುಗರ್


2. ಕಣ್ಣುಗಳಲ್ಲಿ ಉರಿ ಉಂಟು ಮಾಡುತ್ತದೆ : ಲವಂಗದಲ್ಲಿ ತೀವ್ರವಾದ ಸುಗಂಧವನ್ನು ಹೊಂದಿರುತ್ತದೆ.  ಲವಂಗವನ್ನು ಅತಿಯಾಗಿ ಬಳಸುವುದರಿಂದ ಕಣ್ಣುಗಳಲ್ಲಿ ಕಿರಿಕಿರಿ ಉಂಟಾಗುತ್ತದೆ. ಲವಂಗ ಸೇವನೆಯಿಂದಾಗಿ ಕಣ್ಣುಗಳಲ್ಲಿ ಉರಿಯುತ್ತಿದೆಯೆಂದನಿಸಿದರೆ  ಲವಂಗವನ್ನು ಹೆಚ್ಚು ಸೇವಿಸಬೇಡಿ, ಇದು ಕಣ್ಣುಗಳಿಗೆ ಹಾನಿಕಾರಕವಾಗಿದೆ.


3. ಹೊಟ್ಟೆಗೆ : ಲವಂಗವನ್ನು ಹೊಟ್ಟೆಗೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಆದರೆ, ಇದನ್ನು ಅಧಿಕವಾಗಿ ಸೇವಿಸುವುದರಿಂದ ಮೂತ್ರಪಿಂಡ (Kidney) ಮತ್ತು ಪಿತ್ತಜನಕಾಂಗಕ್ಕೂ ಹಾನಿಯಾಗುತ್ತದೆ. ಲವಂಗವು ಉಷ್ಣ ಗುಣವನ್ನು ಹೊಂದಿರುವುದರಿಂದ ಹೊಟ್ಟೆಯ ಸಮಸ್ಯೆಗೆ ಕಾರಣವಾಗುತ್ತದೆ.  


4.ಗರ್ಭಾವಸ್ಥೆಯಲ್ಲಿ ಸಮಸ್ಯೆ : ಗರ್ಭಿಣಿಯರು ಲವಂಗವನ್ನು ಬಹಳ ಮಿತವಾಗಿ ಸೇವಿಸಬೇಕು. ಲವಂಗವು ಉಷ್ಣ ಗುಣವನ್ನು ಹೊಂದಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಗರ್ಭಾವಸ್ಥೆಯಲ್ಲಿ ಲವಂಗವನ್ನು (Side effects of clove) ಅತಿಯಾಗಿ ಸೇವಿಸುವುದರಿಂದ ಆರಂಭಿಕ ದಿನಗಳಲ್ಲಿ ರಕ್ತಸ್ರಾವವಾಗುವ ಸಾಧ್ಯತೆಯಿರುತ್ತದೆ.


ಇದನ್ನೂ ಓದಿ : How To Make Milk Conditioner: ಕೂದಲಿನ ಆರೈಕೆಗಾಗಿ ಹಾಲಿನಿಂದ ಮನೆಯಲ್ಲೇ ತಯಾರಿಸಿ ಹೇರ್ ಕಂಡಿಷನರ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ