Side Effects of Ginger: ಅತಿಯಾದ ಶುಂಠಿ ಟೀ ನಿಮ್ಮ ಆರೋಗ್ಯಕ್ಕೆ ಹಾನಿಕಾರಕ
Side Effects of Ginger: ಚಹಾ ಮೂಡ್ ಫ್ರೆಶರ್ ಎಂಬುದರಲ್ಲಿ ಸಂಶಯವಿಲ್ಲ. ಆದರೆ, ಅತಿಯಾದರೆ ಅಮೃತವೂ ವಿಷ ಎಂಬಂತೆ, ಯಾವುದೇ ಆದರೂ ಅತಿಯಾದರೆ ಹಾನಿಕಾರಕವೇ. ಇದಕ್ಕೆ ಶುಂಠಿ ಟೀ ಹೊರತೇನಲ್ಲ. ಶುಂಠಿ ಆರೋಗ್ಯಕ್ಕೆ ಒಳ್ಳೆಯದು. ಅದನ್ನು ಚಹಾದಲ್ಲಿ ಬೆರೆಸಿದರೆ ಚಹಾದ ರುಚಿ ಇಮ್ಮಡಿಗೊಳ್ಳುತ್ತದೆ. ಆದರೆ, ಆತಿಯಾದ ಶುಂಠಿ ಟೀ ಸೇವನೆ ನಿಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟು ಮಾಡಬಹುದು ಎಂದು ನಿಮಗೆ ತಿಳಿದಿದೆಯೇ?
ಶುಂಠಿ ಟೀ ಅಡ್ಡಪರಿಣಾಮಗಳು: ನಮ್ಮಲ್ಲಿ ಬಹುತೇಕ ಜನರು ಚಹಾ ಪ್ರಿಯರು. ಅದರಲ್ಲೂ, ಕೆಲವರಿಗೆ ಶುಂಠಿ ಟೀ ಎಂದರೆ ಆಹಾ..! ಹೆಸರು ಕೇಳಿದರೆ ಒಂದು ಸಿಪ್ ಕುಡಿಯಲೇಬೇಕು ಎಂದು ಬಾಯಲ್ಲಿ ನೀರೂರಿಸುತ್ತಾರೆ. ಶುಂಠಿ ಆರೋಗ್ಯಕ್ಕೆ ಒಳ್ಳೆಯದು. ಅದನ್ನು ಚಹಾದಲ್ಲಿ ಬೆರೆಸಿದರೆ ಚಹಾದ ರುಚಿ ಇಮ್ಮಡಿಗೊಳ್ಳುತ್ತದೆ. ಹಾಗಾಗಿಯೇ, ಹಲವರು ಶುಂಠಿ ಚಹಾವನ್ನು ಇಷ್ಟಪಡುತ್ತಾರೆ.
ಶೀತ, ನೆಗಡಿ, ಕೆಮ್ಮು, ಜ್ವರ ಇದ್ದಾಗ ಶುಂಠಿ ಟೀ ಸೇವಿಸುವುದರಿಂದ ಆರೋಗ್ಯವು ಸುಧಾರಿಸುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ, ಅತಿಯಾದರೆ ಅಮೃತವೂ ವಿಷ ಎಂಬಂತೆ, ಯಾವುದೇ ಆದರೂ ಅತಿಯಾದರೆ ಹಾನಿಕಾರಕವೇ. ಇದಕ್ಕೆ ಶುಂಠಿ ಟೀ ಹೊರತೇನಲ್ಲ. ಅತಿಯಾದ ಶುಂಠಿ ಟೀ ಸೇವನೆಯು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂದು ಸಾಬೀತುಪಡಿಸಬಹುದು.
ಅತಿಯಾದ ಶುಂಠಿ ಟೀ ಸೇವನೆಯಿಂದ ಆಗುವ ಅಡ್ಡಪರಿಣಾಮಗಳ ಬಗ್ಗೆ ತಿಳಿಯೋಣ...
ಎದೆಯುರಿ:
ಶುಂಠಿ ಟೀಯನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ, ಅದರಿಂದ ಅನೇಕ ಪ್ರಯೋಜನಗಳಿವೆ. ಆದರೆ, ಇದು ಅತಿಯಾದರೆ ಎದೆಯುರಿ ಸಮಸ್ಯೆ ನಿಮ್ಮನ್ನು ಕಾಡಬಹುದು.
ಇದನ್ನೂ ಓದಿ- ಡಯಾಬಿಟಿಸ್ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ ಅರಿಶಿನ
ರಕ್ತಸ್ರಾವ:
ಸಾಮಾನ್ಯವಾಗಿ, ಮಳೆಗಾಲ ಮತ್ತು ಚಳಿಗಾಲದಲ್ಲಿ ಹೆಚ್ಚಾಗಿ ಶುಂಠಿಯನ್ನು ಬಳಸಲಾಗುತ್ತದೆ. ಏಕೆಂದರೆ ಶುಂಠಿ ಬಿಸಿ ಸ್ವಭಾವದ್ದಾಗಿರುತ್ತದೆ. ಇದು ಆಂಟಿ ಪ್ಲೇಟ್‌ಲೆಟ್‌ಗಳನ್ನು ಹೊಂದಿರುತ್ತದೆ. ಶುಂಠಿಯ ಈ ಗುಣಲಕ್ಷಣಗಳು ರಕ್ತಸ್ರಾವಕ್ಕೆ ಕಾರಣವಾಗಬಹುದು. ಇದಲ್ಲದೆ, ಅನೇಕ ಜನರು ಕರಿಮೆಣಸು, ಲವಂಗದಂತಹ ಮಸಾಲೆಗಳೊಂದಿಗೆ ಶುಂಠಿಯನ್ನು ತಿನ್ನುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಈ ಅಪಾಯವು ಇನ್ನಷ್ಟು ಹೆಚ್ಚಾಗುತ್ತದೆ.
ಅತಿಸಾರ:
ಶುಂಠಿಯನ್ನು ಅತಿಯಾಗಿ ಸೇವಿಸುವುದರಿಂದ ನಿಮ್ಮ ಕರುಳಿನ ಮೇಲೂ ಪರಿಣಾಮ ಬೀರಬಹುದು. ಇದರಿಂದ ಅತಿಸಾರ ಉಂಟಾಗಬಹುದು. ಅತಿಯಾದ ಶುಂಠಿಯ ಸೇವನೆಯು ಜಠರಗರುಳಿನ ಕಾಯಿಲೆಗಳಿಗೂ ಕಾರಣವಾಗಬಹುದು.
ಇದನ್ನೂ ಓದಿ- ಟೊಮ್ಯಾಟೊ-ಬದನೆ-ಪಾಲಕ್ ಸೊಪ್ಪು ಸೇವನೆಯಿಂದ ಕಿಡ್ನಿ ಸ್ಟೋನ್ ಸಮಸ್ಯೆ ಉಂಟಾಗುತ್ತಾ?
ಹೊಟ್ಟೆ ಉರಿ:
ಶುಂಠಿಯನ್ನು ಮಿತವಾಗಿ ಮತ್ತು ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ, ಅದು ಜೀರ್ಣಕಾರಿ ಶಕ್ತಿಯನ್ನು ಹೆಚ್ಚಿಸುತ್ತದೆ. ಆದರೆ, ಅದನ್ನು ಅತಿಯಾಗಿ ಸೇವಿಸಿದರೆ ಜೀರ್ಣಕ್ರಿಯೆ ಹದಗೆಡಬಹುದು. ಅತಿಯಾದ ಶುಂಠಿ ಸೇವನೆಯು ಉದರ ಸಂಬಂಧಿತ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.