Side Effects of Pineapple:ನಿಮಗೂ ಈ ಅಲರ್ಜಿ ಇದ್ದರೆ, ಪೈನಾಪಲ್ ಎಂದಿಗೂ ಸೇವಿಸಬೇಡಿ
Side Effects of Pineapple: ಪೈನಾಪಲ್ ಅನ್ನು ವಿಟಮಿನ್ ಸಿ ಮತ್ತು ಫೈಬರ್‌ನ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ, ಆದರೆ ಅನಾನಸ್ ತಿನ್ನುವುದರಿಂದಾಗುವ ಪ್ರಯೋಜನಗಳ ಜೊತೆಗೆ, ಅದು ಕೆಲವು ಅಡ್ಡ ಪರಿಣಾಮಗಳನ್ನು ಕೂಡ ಉಂಟು ಮಾಡುತ್ತದೆ.
Pineapple ತಿನ್ನುವುದರಿಂದ ಹಲವು ಪ್ರಯೋಜನಗಳಿವೆ. ಇದು ಕಡಿಮೆ ಕ್ಯಾಲೋರಿ ಮತ್ತು ವಿಟಮಿನ್ ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. Pineapple ಅನ್ನು ವಿಟಮಿನ್ ಸಿ ಮತ್ತು ಫೈಬರ್‌ನ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ. ಇದು ತೂಕವನ್ನು ಕಡಿಮೆ ಮಾಡುವುದರೊಂದಿಗೆ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಆದರೆ Pineapple ತಿನ್ನುವುದರಿಂದಾಗುವ ಪ್ರಯೋಜನಗಳ ಜೊತೆಗೆ, ಇದು ಕೆಲವು ಅಡ್ಡ ಪರಿಣಾಮಗಳನ್ನು ಕೂಡ ಹೊಂದಿದೆ ಎಂಬುದು ನಿಮಗೆ ತಿಳಿದಿರಲಿ.
ತುರಿಕೆ ಹಾಗೂ ಬಾವು ಸಮಸ್ಯೆ
Pineapple ತಿಂದ ನಂತರ ಕೆಲವರಿಗೆ ತುರಿಕೆ ಮತ್ತು ಊತದ ಸಮಸ್ಯೆ ಎದುರಾಗುತ್ತದೆ. ಇದು ಲ್ಯಾಟೆಕ್ಸ್ ಅಲರ್ಜಿಯಿಂದಾಗಿ ಉಂಟಾಗುತ್ತದೆ. ಪೈನಾಪಲ್ ನೈಸರ್ಗಿಕ ರಬ್ಬರ್ ಲ್ಯಾಟೆಕ್ಸ್‌ನ ಅತ್ಯುತ್ತಮ ಮೂಲವಾಗಿದೆ. ನಿಮಗೆ ಲ್ಯಾಟೆಕ್ಸ್ ಅಲರ್ಜಿ ಇದೆ ಎಂದು ನಿಮಗೆ ಈಗಾಗಲೇ ತಿಳಿದಿದ್ದರೆ, Pineapple ತಿನ್ನಬೇಡಿ.
ಡಯೋರಿಯಾ ಮತ್ತು ವಾಂತಿ ಸಮಸ್ಯೆ
ಅನಾನಸ್ ನಲ್ಲಿರುವ Bromelain ಹೆಸರಿನ ಪದಾರ್ಥ ಡಯೋರಿಯಾ ಹಾಗೂ ವಾಂತಿಗೆ ಕಾರಣವಾಗುತ್ತದೆ. Bromelain ಪ್ರತಿ ಸೆನ್ಸಿಟಿವ್ ಇರುವವರು ಹೆಚ್ಚಿನ ಪ್ರಮಾಣದಲ್ಲಿ Pineapple ಸೇವಿಸಿದರೆ ಅವರಿಗೆ ತೊಂದರೆ ಎದುರಾಗುವ ಸಾಧ್ಯತೆ ಇದೆ.
ಇದನ್ನೂ ಓದಿ-Glowing Skin tips: ಚರ್ಮದ ಈ ಸಮಸ್ಯೆಗಳನ್ನು ನಿವಾರಿಸುತ್ತೆ ಕೊತ್ತಂಬರಿ ಸೊಪ್ಪು
ಬಾಯಿ ಹಾಗೂ ತುಟಿಗಳಲ್ಲಿ ನೋವು
Pineapple ಅನ್ನು ಅಧಿಕ ಪ್ರಮಾಣದಲ್ಲಿ ಸೇವಿಸುವುದರಿಂದ ಬಾಯಿ, ನಾಲಿಗೆ ಮತ್ತು ತುಟಿಗಳಲ್ಲಿ ಟೆಂಡರ್ನೆಸ್ ಸಮಸ್ಯೆ ಎದುರಾಗಿ ನೋವು ಕಾಣಿಸಿಕೊಳ್ಳಬಹುದು. ಬ್ರೋಮೆಲಿನ್ ಅಂತಹ ಗುಣಲಕ್ಷಣಗಳನ್ನು ಹೊಂದಿದೆ, ಇದರಿಂದಾಗಿ ಇದು ಸಂಭವಿಸುತ್ತದೆ. ತಜ್ಞರ ಪ್ರಕಾರ, ನೀವು ಅನಾನಸ್ ಬೇಯಿಸಿ ತಿಂದರೆ, ಈ ಅಡ್ಡ ಪರಿಣಾಮಗಳನ್ನು ಕಡಿಮೆ ಮಾಡಲು ಇದು ನಿಮಗೆ ಸಹಾಯ ಮಾಡುತ್ತದೆ. ಕಾಂಡ ಮತ್ತು ಕೋರ್ ಬಳಿ ಹಸಿಯಾಗಿರುವ ಅನಾನಸ್ ತಿನ್ನುವುದನ್ನು ತಪ್ಪಿಸಿ ಏಕೆಂದರೆ ಇದರಲ್ಲಿ ಹೆಚ್ಚಿನ ಪ್ರಮಾಣದ ಬ್ರೊಮೆಲಿನ್ ಇರುತ್ತದೆ.
ಇದನ್ನೂ ಓದಿ-Unhealthy Foods For Liver : ಆರೋಗ್ಯಕರ ಲಿವರ್ ಗಾಗಿ ಈ ಆಹಾರ ವಸ್ತುಗಳಿಂದ ದೂರವಿರಿ
ರಕ್ತಸ್ರಾವ
Bromelain, Anti-Coagulant ರೀತಿ ಕೆಲಸ ಮಾಡುತ್ತದೆ ಹಾಗೂ ಇದು ರಕ್ತವನ್ನು ತೆಳ್ಳಗೆ ಮಾಡಿ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ಇದರಿಂದ ರಕ್ತ ಶ್ರಾವ ಅತಿ ಹೆಚ್ಚಾಗಬಹುದು.
ಇದನ್ನೂ ಓದಿ -Benefits of Bottle Gourd: ನಿಮ್ಮ ಡಯಟ್ನಲ್ಲಿ ಸೋರೆಕಾಯಿ ಸೇರಿಸಿ, ಈ ಸಮಸ್ಯೆಗಳಿಂದ ಪರಿಹಾರ ಪಡೆಯಿರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.