Side effects of using Laptop on lap : ಇಂದು ಲ್ಯಾಪ್‌ಟಾಪ್ ನಮ್ಮ ದೈನಂದಿನ ಜೀವನದ ಒಂದು ಭಾಗವಾಗಿದೆ. ಅಗತ್ಯಕ್ಕೆ ತಕ್ಕಷ್ಟು ಬಳಸಿದರೂ ಸರಿಯಾಗಿ ಬಳಸದಿದ್ದರೆ ವಾಸಿಯಾಗದ ಕಾಯಿಲೆಗಳು ಕಾಡುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಆರೋಗ್ಯ ತಜ್ಞರ ಪ್ರಕಾರ ಪುರುಷರು ತಮ್ಮ ತೊಡೆಯ ಮೇಲೆ ಗಂಟೆಗಟ್ಟಲೆ ಲ್ಯಾಪ್ ಟಾಪ್ ಇಟ್ಟುಕೊಂಡು ಕೆಲಸ ಮಾಡುವುದು ಅವರ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎನ್ನಲಾಗುತ್ತದೆ. 


COMMERCIAL BREAK
SCROLL TO CONTINUE READING

ಶಾಖಕ್ಕೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ ವೃಷಣಗಳಲ್ಲಿನ ಉಷ್ಣತೆಯು ಹೆಚ್ಚಾಗುತ್ತದೆ. ಅಲ್ಲದೆ ಪುರುಷರ ವೀರ್ಯಾಣುಗಳ ಸಂಖ್ಯೆಯೂ ಕಡಿಮೆಯಾಗುತ್ತದೆ. ವೀರ್ಯದ ಗುಣಮಟ್ಟವೂ ಬಹಳ ಮಟ್ಟಿಗೆ ಕಡಿಮೆಯಾಗುತ್ತದೆ. ಏಕೆಂದರೆ ಪುರುಷ ಸಂತಾನೋತ್ಪತ್ತಿ ವ್ಯವಸ್ಥೆಯು ಹೆಚ್ಚಿನ ತಾಪಮಾನ ತಡೆದುಕೊಳ್ಳುವುದಿಲ್ಲ. ವೀರ್ಯ ಉತ್ಪಾದನೆ ಮತ್ತು ಕಾರ್ಯನಿರ್ವಹಣೆಗೆ ತಂಪಾದ ವಾತಾವರಣ ಅತ್ಯಗತ್ಯ ಎನ್ನುತ್ತಾರೆ ತಜ್ಞರು. 


ಇದನ್ನೂ ಓದಿ:ರಾತ್ರಿ ಮಾಡಿಟ್ಟ ಚಪಾತಿಯನ್ನು ಬೆಳಗ್ಗೆ ಇದರ ಜೊತೆ ತಿಂದರೆ ನಿಯಂತ್ರಣಕ್ಕೆ ಬರುವುದು ಬ್ಲಡ್ ಶುಗರ್ !


ಲ್ಯಾಪ್‌ಟಾಪ್ ಅನ್ನು ಮಡಿಲಲ್ಲಿ ಇರಿಸಿದಾಗ, ಅದರಿಂದ ಬರುವ ಶಾಖವು ವೃಷಣದ ತಾಪಮಾನವನ್ನು ಹೆಚ್ಚಿಸುತ್ತದೆ. ಇದು ‘ಸ್ಕ್ರೋಟಲ್ ಹೈಪರ್ ಥರ್ಮಿಯಾ’ ಎಂಬ ಸಮಸ್ಯೆಗೆ ಕಾರಣವಾಗುತ್ತದೆ. ಇದು ಫಲೀಕರಣಕ್ಕೆ ಅಡ್ಡಿಪಡಿಸುತ್ತದೆ. ಅಲ್ಲದೆ ವೀರ್ಯಾಣು ಉತ್ಪಾದನೆಯು ಬಹಳ ಕಡಿಮೆಯಾಗುತ್ತದೆ. ಇದಲ್ಲದೆ, ಲ್ಯಾಪ್ಟಾಪ್ಗಳು ಸಾಮಾನ್ಯವಾಗಿ ವಿದ್ಯುತ್ಕಾಂತೀಯ ಅಲೆಗಳನ್ನು ಹೊರಸೂಸುತ್ತವೆ. ಇದು ವೀರ್ಯದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.