Signs And Symptoms Of Protein Deficiency : ಪ್ರೋಟೀನ್ ನಮ್ಮ ನಿತ್ಯ ಜೀವನದಲ್ಲಿ ಬೇಕಾಗುವ ಅಗತ್ಯ ಸೂಕ್ಷ್ಮ ಪೋಷಕಾಂಶವಾಗಿದೆ.ಇದನ್ನು ಸ್ನಾಯುಗಳು,ಕೂದಲು,ಚರ್ಮ ಮತ್ತು ಹಾರ್ಮೋನುಗಳ ಬಿಲ್ಡಿಂಗ್ ಬ್ಲಾಕ್ಸ್ ಎಂದು ಕರೆಯಲಾಗುತ್ತದೆ. ಸಸ್ಯ ಮತ್ತು ಪ್ರಾಣಿ ಆಧಾರಿತ ಪೋಷಕಾಂಶಗಳನ್ನು ಒಳಗೊಂಡಿರುವ ಪ್ರೋಟೀನ್‌ನ ಮೂಲಗಳು ಅನೇಕ.ದೇಹದಲ್ಲಿ ಪ್ರೋಟಿನ್ ಕೊರತೆಯಾದಾಗ ಹಲವಾರು ರೀತಿಯ ನಷ್ಟವನ್ನು ಅನುಭವಿಸಬೇಕಾಗಬಹುದು.  


COMMERCIAL BREAK
SCROLL TO CONTINUE READING

ಪ್ರೋಟೀನ್ ಕೊರತೆಯ ಲಕ್ಷಣಗಳು : 
1.ಸೌಂದರ್ಯದ ಮೇಲೆ ಪರಿಣಾಮ : 

ನಿಮ್ಮ ಚರ್ಮ,ಕೂದಲು ಮತ್ತು ಉಗುರುಗಳು ಹೆಚ್ಚಾಗಿ ಎಲಾಸ್ಟಿನ್,ಕಾಲಜನ್ ಮತ್ತು ಕೆರಾಟಿನ್ ನಂತಹ ಪ್ರೋಟೀನ್‌ಗಳಿಂದ ಮಾಡಲ್ಪಟ್ಟಿದೆ.ಈ ಪೋಷಕಾಂಶದ ಕೊರತೆ ಎದುರಾದರೆ ಉಗುರುಗಳು ಒಡೆಯಲು ಪ್ರಾರಂಭಿಸುತ್ತವೆ.ಚರ್ಮವು ನಿರ್ಜೀವವಾಗಿ ಕಾಣುತ್ತದೆ ಮತ್ತು ಕೂದಲು ಉದುರಲು ಆರಂಭವಾಗುತ್ತದೆ.  ಇದರರ್ಥ ನಿಮ್ಮ ಸೌಂದರ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.


ಇದನ್ನೂ ಓದಿ : ಚಹಾ ಜೊತೆಗೆ ರಸ್ಕ್ ತಿನ್ನುವ ಅಭ್ಯಾಸ ನಿಮಗೂ ಇದೆಯಾ? ರಸ್ಕ್ ಸೇವಿಸುವುದಕ್ಕೆ ಮುನ್ನ ಈ ವಿಡಿಯೋ ನೋಡಿ !


2.ಸ್ನಾಯು ದೌರ್ಬಲ್ಯ : 
ಸಾಕಷ್ಟು ಪ್ರೋಟೀನ್ ಸೇವನೆಯು ಸ್ನಾಯು ಮತ್ತು ಶಕ್ತಿಯನ್ನು ನಿರ್ಮಿಸಲು ಮತ್ತು ನಿರ್ವಹಿಸಲು ಸಹಾಯ ಮಾಡುತ್ತದೆ.ಸ್ನಾಯುಗಳನ್ನು ಕಾಪಾಡಿಕೊಳ್ಳಲು ಇದು ಮುಖ್ಯವಾಗಿದೆ.ಇದು ಪ್ರೋಟೀನ್ ಕೊರತೆಯ ಮೊದಲ ಲಕ್ಷಣಗಳಲ್ಲಿ ಒಂದಾಗಿದೆ.


3.ಹಸಿವು ಹೆಚ್ಚಾಗಬಹುದು : 
ಪ್ರೋಟೀನ್ ನಿಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.ನಿಮ್ಮ ದೇಹದಲ್ಲಿಯೂ ಅದರ ಕೊರತೆ ಎದುರಾದರೆ ಹಸಿವು ಹೆಚ್ಚಾಗಬಹುದು.ಆದ್ದರಿಂದ ಸಾಕಷ್ಟು ಪ್ರಮಾಣದ ಪ್ರೋಟೀನ್ ಅನ್ನು ಸೇವಿಸಬೇಕು.ಇದು ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.


ಇದನ್ನೂ ಓದಿ : ಸ್ಟೋನ್ ರೂಪ ಪಡೆಯುವ ಮುನ್ನವೇ ಯೂರಿಕ್ ಆಸಿಡ್ ಅನ್ನು ದೇಹದಿಂದ ಹೊರ ಹಾಕುತ್ತದೆ ವೀಳ್ಯದೆಲೆ!ಈ ಹೊತ್ತಿನಲ್ಲಿ ಹೀಗೆಯೇ ಸೇವಿಸಿ !


4.ಎಡಿಮಾ : 
ಎಡಿಮಾ ಕೈ ಮತ್ತು ಕಾಲುಗಳಲ್ಲಿ ಕಂಡುಬರುವ ಅಸಹಜ ಊತವಾಗಿದೆ. ಪ್ರೋಟೀನ್ ಕೊರತೆಯು ಅಂಗಾಂಶಗಳು ಅಥವಾ ದೇಹದ ಅಂಗಗಳಲ್ಲಿ ದ್ರವದ ಧಾರಣವನ್ನು ಉಂಟುಮಾಡಬಹುದು.ಎಡಿಮಾದ ಹಿಂದೆ ಹಲವು ಸಂಭವನೀಯ ಕಾರಣಗಳಿರಬಹುದು.ಆದ್ದರಿಂದ,ನಿಖರವಾದ ಕಾರಣವನ್ನು ಕಂಡುಹಿಡಿಯಲು ಆರೋಗ್ಯ ತಜ್ಞರನ್ನು ಪರೀಕ್ಷಿಸುವುದು ಮುಖ್ಯ. 


5.ಹಾರ್ಮೋನ್ ಅಸಮತೋಲನ : 
ಆಹಾರದಲ್ಲಿ ಪ್ರೋಟೀನ್ ಕೊರತೆಯು ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗಬಹುದು.ಇದು ನಿಮ್ಮ ಮನಸ್ಥಿತಿಯ ಮೇಲೂ ಪರಿಣಾಮ ಬೀರಬಹುದು.ಅನೇಕ ಆರೋಗ್ಯಕರ ಅಭ್ಯಾಸಗಳು ದೇಹದಲ್ಲಿ ಹಾರ್ಮೋನ್ ಸಮತೋಲನವನ್ನು ಹೆಚ್ಚು ಮಾಡುತ್ತದೆ. 


ಇದನ್ನೂ ಓದಿ : ಕರಿಬೇವಿನ ನೀರಿಗೆ ಈ ಹಣ್ಣಿನ ರಸ ಬೆರೆಸಿ ಕುಡಿದರೆ.. ಒಂದು ತಿಂಗಳಲ್ಲಿ ಬೊಜ್ಜು ಕರಗಿ ಶಿಲ್ಪಾ ಶೆಟ್ಟಿಯಂತೆ ಫ್ಲಾಟ್‌ ಟಮ್ಮಿ ಪಡೆಯುವಿರಿ!


ಪ್ರೋಟೀನ್ ನ ಮೂಲಗಳು : 
ಪ್ರೋಟೀನ್ ಕೊರತೆಯನ್ನು ಹೊಂದಿದ್ದರೆ ಆಹಾರದಲ್ಲಿ ಕೆಲವು ಪದಾರ್ಥಗಳನ್ನು ಸೇವಿಸಬಹುದು. ಮೊಟ್ಟೆ,ಕೋಳಿ,ಮೀನು,ಕಾಳುಗಳು,ಬೀಜಗಳು,ಡೈರಿ ಉತ್ಪನ್ನಗಳು ಮತ್ತು ಸೋಯಾ ಉತ್ಪನ್ನಗಳು ಪ್ರೋಟೀನ್ ನ ಉತಮ ಮೂಲವಾಗಿದೆ. ಆದರೆ,ಅಗತ್ಯಕ್ಕೆ ಅನುಸಾರವಾಗಿ ಮಾತ್ರ ಸೇವಿಸಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.