Diabetes symptoms in leg : ಮಧುಮೇಹ ಕಾಯಿಲೆ ನಮ್ಮನ್ನು ಬಾಧಿಸಲು ಆರಂಭವಾದರೆ ಆರೋಗ್ಯದ ಬಗ್ಗೆ ಬಹಳಷ್ಟು ಕಾಳಜಿ ವಹಿಸಬೇಕು. ಈ ಸ್ಥಿತಿಯಲ್ಲಿ ತೋರುವ ಅಸಡ್ಡೆ ಮಾರಣಾಂತಿಕವಾಗಿ ಪರಿಣಮಿಸಬಹುದು. ಮಧುಮೇಹ ರೋಗಿಗಳು ಎದುರಿಸುವ ಅಪಾಯಗಳು ಮತ್ತು ರೋಗಲಕ್ಷಣಗಳ ಬಗ್ಗೆ ಮಾಹಿತಿ ಇಲ್ಲಿದೆ. 


COMMERCIAL BREAK
SCROLL TO CONTINUE READING

ಯಾವುದೇ ಕಾಯಿಲೆ ನಮ್ಮ ದೇಹದಲ್ಲಿ ಕಾಣಿಸಿಕೊಂಡಾಗ ದೇಹ ಅದರ ಮುನ್ಸೂಚನೆಯನ್ನು ನೀಡಲು ಆರಂಭಿಸುತ್ತದೆ. ನಾವು ಅದನ್ನು ಅರ್ಥ ಮಾಡಿಕೊಳ್ಳಬೇಕು. ಮಧುಮೇಹದ ಆರಂಭದ ಹಂತದಲ್ಲಿಯೇ ಪಾದಗಳಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅವುಗಳನ್ನು ಸರಿಯಾಗಿ ಸಮಯಕ್ಕೆ ಗುರುತಿಸಬೇಕು. ಇಲ್ಲದಿದ್ದರೆ ರಕ್ತದಲ್ಲಿನ ಸಕ್ಕರೆಯ ಮಟ್ಟವು ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ. 


ಮಧುಮೇಹದಲ್ಲಿ ಕಾಲುಗಳಲ್ಲಿ ಕಾಣಿಸಿಕೊಳ್ಳುತ್ತದೆ ಈ ಲಕ್ಷಣ : 
1. ಪಾದಗಳಲ್ಲಿ ನೋವು:

ಮಧುಮೇಹದಲ್ಲಿ ನರಗಳು ಹಾನಿಗೊಳಗಾಗುತ್ತವೆ. ಇದರಿಂದಾಗಿ ಕಾಲುಗಳು  ಊದಿಕೊಳ್ಳಬಹುದು.ಕೆಲವೊಮ್ಮೆ ಕಾಲುಗಳು ಮರಗಟ್ಟಿದರೆ, ಕೆಲವೊಮ್ಮೆ ಇದ್ದಕ್ಕಿದ್ದಂತೆ ಬಲ ಇಲ್ಲದಂತೆ ಆಗಿ ಬಿಡುತ್ತದೆ.  


ಇದನ್ನೂ ಓದಿ : Child Mortality: ಪ್ರತಿ 14 ಸೆಕೆಂಡಿಗೆ ನವಜಾತ ಶಿಶುಗಳ ಸಾವು..! ಈ ಸಾವಿಗೆ ಇಲ್ಲಿವೆ ಪ್ರಮುಖ ಕಾರಣಗಳು 


2. ಉಗುರಿನ ಬಣ್ಣದಲ್ಲಿ ಬದಲಾವಣೆ:
ಮಧುಮೇಹ ಬಂದಾಗ, ಕಾಲ್ಬೆರಳ ಉಗುರುಗಳ ಬಣ್ಣ ಬದಲಾಗುತ್ತದೆ.  ಸಾಮಾನ್ಯವಾಗಿ ಗುಲಾಬಿ ಬಣ್ಣದಲ್ಲಿರುವ ನಮ್ಮ ಉಗುರುಗಳು ಇದ್ದಕ್ಕಿದ್ದಂತೆ ಕಪ್ಪಾಗಲು ಪ್ರಾರಂಭಿಸುತ್ತವೆ.  ಉಗುರಿನ ಬಣ್ಣ ಬದಲಾಗುತ್ತಿದ್ದರೆ ಈ ಲಕ್ಷಣವನ್ನು  ಲಘುವಾಗಿ ತೆಗೆದುಕೊಳ್ಳಬೇಡಿ. 


3. ಚರ್ಮ ಗಟ್ಟಿಯಾಗುವುದು:
ಮಧುಮೇಹ ಇದ್ದಾಗ, ಪಾದಗಳು ಮತ್ತು ಅಡಿಭಾಗದ ಚರ್ಮವು ಗಟ್ಟಿಯಾಗಲು ಪ್ರಾರಂಭಿಸುತ್ತದೆ. ಕೆಲವೊಮ್ಮೆ ಚಪ್ಪಲಿ ಕಾರಣದಿಂದಲೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದರೆ ಪಾದಗಳ ಮತ್ತು ಅಡಿಭಾಗದ ಚರ್ಮ ಗಟ್ಟಿಯಾಗುತ್ತಿದ್ದರೆ ರಕ್ತದಲ್ಲಿನ ಸಕ್ಕರೆ ಪರೀಕ್ಷೆಯನ್ನು ಮಾಡಿಸುವುದು ಸೂಕ್ತ . 


ಇದನ್ನೂ ಓದಿ : Relationship Tips: ನಿಮ್ಮ ಸಂಗಾತಿ ಏಕಾಏಕಿ ಕೊಪಿಸಿಕೊಳ್ಳುತ್ತಾರೆಯೇ ? ಇಲ್ಲಿವೆ ತಣ್ಣಗಾಗಿಸುವ ವಿಧಾನಗಳು


4. ಪಾದಗಳಲ್ಲಿ ಹುಣ್ಣು:
 ಫುಟ್ ಅಲ್ಸರ್ ಕಾಣಿಸಿಕೊಂಡಾಗ ಪಾದಗಳಲ್ಲಿ ಗಾಯಗಳು ಏಳಲು ಶುರುವಾಗುತ್ತದೆ. ಹೀಗಾದಾಗ ಕೆಲವೊಮ್ಮೆ ಚರ್ಮವು ಕೂಡಾ ಕಿತ್ತು ಬರುತ್ತದೆ. ಈ ರೋಗವು ಮಿತಿ ಮೀರಿ ಮುಂದುವರಿದರೆ, ಕಾಲು ಕತ್ತರಿಸಬೇಕಾಡ ಪ್ರಮೇಯ ಕೂಡಾ ಎದುರಾಗಬಹುದು. ಹೀಗಾಗಿ ಸಮಯಕ್ಕೆ ಸರಿಯಾಗಿ ಮಧುಮೇಹವನ್ನು ಗುರುತಿಸುವುದು ಬಹಳ ಮುಖ್ಯ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.