Effective home remedies for sore throat : ಋತು ಬದಲಾದಂತೆ ಗಂಟಲು ನೋವು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಹೀಗೆ ಗಂಟಲು ನೋವು ಕಾಣಿಸಿಕೊಂಡಾಗ ತಿನ್ನುವುದು, ನುಂಗುವುದು ಬಹಳ ಕಷ್ಟವಾಗುತ್ತದೆ. ಕೆಲವೊಮ್ಮೆ ಮಾತನಾಡುವುದು ಕೂಡಾ ಸಾಧ್ಯವಾಗುವುದಿಲ್ಲ. ಕೆಲವರು ಹೀಗಾದಾಗ ತಕ್ಷಣ ಮಾತ್ರೆ, ಸಿರಪ್ ಗಳ ಮೊರೆ  ಹೋಗುತ್ತಾರೆ. ಆದರೆ, ಈ ಸಮಸ್ಯೆ ಕಾಣಿಸಿಕೊಂಡಾಗಲೇ ಮನೆಯಲ್ಲಿಯೇ ಕೆಲವು ಸುಲಭವಾದ ಪರಿಹಾರಗಳನ್ನು ತೆಗೆದುಕೊಳ್ಳಬಹುದು. ಹೀಗೆ ಮಾಡುವುದರಿಂದ ಮಾತ್ರೆ ಸಿರಪ್ ಇಲ್ಲದೆಯೇ ಸಮಸ್ಯೆಗೆ ಪರಿಹಾರವನ್ನು ಕೂಡಾ ಕಂಡುಕೊಳ್ಳಬಹುದು.  


COMMERCIAL BREAK
SCROLL TO CONTINUE READING

1. ಬಿಸಿ ನೀರಿಗೆ ಉಪ್ಪು ಹಾಕಿ ಗಾರ್ಗಲ್ ಮಾಡುವುದು : 
ಉಪ್ಪು ನೀರಿನಿಂದ ಗಾರ್ಗ್ಲ್ ಮಾಡುವುದರಿಂದ ಗಂಟಲು ಊದಿಕೊಂಡಿರುವುದರಿಂದ  ಪರಿಹಾರ ಸಿಗುತ್ತದೆ. ಅಲ್ಲದೆ ಗಂಟಲಿನಲ್ಲಿ ಸಿಕ್ಕಿ ಹಾಕಿಕೊಂಡಿರುವ ಕಫ ಕೂಡಾ ಕರಗುತ್ತದೆ. ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಒಂದು ಟೀಚಮಚ ಉಪ್ಪನ್ನು ಬೆರೆಸಿ ಈ ನೀರಿನೊಂದಿಗೆ ಸುಮಾರು 30 ಸೆಕೆಂಡುಗಳ ಕಾಲ ಗಾರ್ಗಲ್ ಮಾಡಬೇಕು. ಉತ್ತಮ ಫಲಿತಾಂಶಗಳಿಗಾಗಿ ಈ ವಿಧಾನವನ್ನು ದಿನಕ್ಕೆ  ಮೂಉರು ನಾಲ್ಕು ಬಾರಿ ಪುನರಾವರ್ತಿಸಬೇಕು. 


ಇದನ್ನೂ ಓದಿ : Heart disease: ಹೃದಯ ಸಂಬಂಧಿ ರೋಗಕ್ಕೆ ತುತ್ತಾಗುವ ಮೊದಲು ಈ ಸುದ್ದಿ ಓದಿ..!


2. ಜೇನುತುಪ್ಪ ಮತ್ತು ನಿಂಬೆ : 
ಜೇನುತುಪ್ಪದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಕಂಡುಬರುತ್ತವೆ.  ಜೇನು ತುಪ್ಪದೊಂದಿಗೆ ನಿಂಬೆ ರಸ ಬೆರೆಸಿ ಸೇವಿಸಿದರೆ ಗಂಟಲು ನೋವಿನಿಂದ ತ್ವರಿತ ಪರಿಹಾರ ಸಿಗುತ್ತದೆ. ಇದನ್ನೂ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಸೇವಿಸಬಹುದು. 


3. ಸ್ಟೀಮ್ : 
ಗಂಟಲು ಕೆರೆತ, ಗಂಟಲು ಕಿರಿಕಿರಿ, ಮುಂತಾದ ಸಮಸ್ಯೆಗಳನ್ನು ಬಗೆಹರಿಸಲು ಸ್ಟೀಮ್ ತೆಗೆದುಕೊಳ್ಳಬಹುದು. ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ, ಆ ನೀರಿನಿಂದ ಹೊರ ಬರುವ ಸ್ಟೀಮ್ ಅನ್ನು ತೆಗೆದುಕೊಳ್ಳಬೇಕು. ಈ ನೀರಿಗೆ ನೀಲಗಿರಿ ಎಣ್ಣೆ, ಪುದೀನಾ ಮುಂತಾದ ಸಾರಭೂತ ತೈಲಗಳ ಕೆಲವು ಹನಿಗಳನ್ನು  ಸೇರಿಸಿದರೆ ಇನ್ನಷ್ಟು ಬೇಗನೆ ಪರಿಹಾರ ಸಿಗುತ್ತದೆ. 


ಇದನ್ನೂ ಓದಿ : ಈ 5 ಅದ್ಭುತ ಪ್ರಯೋಜನಗಳನ್ನು ಪಡೆಯಲು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ತಿನ್ನಲೇಬೇಕು ಬೆಳ್ಳುಳ್ಳಿ ಎಸಳು


4. ಗಿಡಮೂಲಿಕೆ ಚಹಾ : 
ಕ್ಯಾಮೊಮೈಲ್, ಪುದೀನಾ ಮತ್ತು ಶುಂಠಿಯಂತಹ ಕೆಲವು ಗಿಡಮೂಲಿಕೆ ಚಹಾಗಳು ಉರಿಯೂತದ  ಗುಣಲಕ್ಷಣಗಳನ್ನು ಹೊಂದಿದ್ದು ಗಂಟಲು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ನಿಮ್ಮ ನೆಚ್ಚಿನ ಗಿಡಮೂಲಿಕೆ ಚಹಾವನ್ನು ಆಗಾಗ ಕುಡಿಯುವುದರಿಂದ ಗಂಟಲು ನೋವು ಮಾಯವಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.