ಚಳಿಗಾಲ ಬರುತ್ತಿದ್ದಂತೆ ಅನೇಕ ಜನರಿಗೆ ಅದರಲ್ಲೂ ಮಹಿಳೆಯರಿಗೆ ತಮ್ಮ ಪಾದಗಳದ್ದೇ ಚಿಂತೆ. ಕೆಲವರಿಗೆ ಕಾಲು ಎಲ್ಲಾ ಸೀಸನ್ ಗಳಲ್ಲೂ ಒಡೆದರೆ ಮತ್ತೆ ಕೆಲವರಿಗೆ ಚಳಿಗಾಲದಲ್ಲಿ ಮಾತ್ರ ಕಾಲು ಒಡೆಯುತ್ತದೆ. ಒಡಕು ಕಾಲನ್ನು ನೋಡಲು ಯಾರು ತಾನೇ ಇಷ್ಟ ಪಡುತ್ತಾರೆ? ಅಷ್ಟೇ ಅಲ್ಲ ಒಡೆದ ಕಾಲುಗಳನ್ನು ನೋವು ಅದನ್ನು ಅನುಭವಿಸಿದವರಿಗಷ್ಟೇ ಗೊತ್ತಿರಲು ಸಾಧ್ಯ. ಆದರೆ, ನೀವು ಈ ಕೆಳಗಿನ ಕೆಲವು ಸಿಂಪಲ್ ಟಿಪ್ಸ್'ಗಳನ್ನು ಅನುಸರಿಸುವ ಮೂಲಕ ಸುಂದರವಾದ ಹಾಗೂ ಆರೋಗ್ಯಕರ ಪಾದಗಳನ್ನು ಪಡೆಯಬಹುದು. 


COMMERCIAL BREAK
SCROLL TO CONTINUE READING

ಚಳಿಗಾಲದಲ್ಲಿ ನಿಮ್ಮ ಕೋಮಲ ಪಾದಗಳ ಆರೈಕೆಗೆ ಸಿಂಪಲ್ ಟಿಪ್ಸ್...


  • ಬಕೆಟ್ ಸ್ವಲ್ಪ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಂಡು ಎರಡು ಟೇಬಲ್ಸ್ಪೂನ್ ಉಪ್ಪು ಹಾಕಿ ಮತ್ತು ಎರಡು ಟೇಬಲ್ಸ್ಪೂನ್ ಗ್ಲಿಸರಿನ್ ಮತ್ತು ಆಲಿವ್ ತೈಲ ಸೇರಿಸಿ. ಪಾದಗಳನ್ನು ಅದರಲ್ಲಿ ಇರಿಸಿ. ಇದರಿಂದ ನಿಮಗೆ ಉತ್ತಮ ಫಲಿತಾಂಶ ಸಿಗುತ್ತದೆ.

  • ಒಂದು ಬಕೆಟ್ನಲ್ಲಿ ನೀವು ತಡೆಯುವಷ್ಟು ಬಿಸಿ ನೀರನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಅರಿಶಿನ, ಉಪ್ಪು, ಶಾಂಪು ಹಾಕಿ ಸ್ವಲ್ಪ ಸಮಯ ನಿಮ್ಮ ಕಾಲನ್ನು ಅದರಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಕಾಲುಗಳು ಕೊಮಳವಾಗುತ್ತದೆ ಮತ್ತು ಪಾದಗಳ ನೋವು ಕಡಿಮೆ ಆಗುತ್ತದೆ.

  • ಹೈ-ಹೀಲ್ಡ್ಸ್ ಚಪ್ಪಲಿಗಳನ್ನು ಬಳಸಬಾರದು. ಇದರಿಂದ ನಿಮಗೆ ಬೆನ್ನು ನೋವು ಬರುವುದಲ್ಲದೆ, ಇತರ ಸಮಸ್ಯೆಗಳೂ ತಲೆದೋರುತ್ತದೆ. ಹಾಗಾಗಿ ನಿಮಗೆ ಆರಾಮದಾಯಕ ಎನಿಸುವ ಚಪ್ಪಲಿಗಳನ್ನು ಬಳಸಿ.

  • ನೀವು ಯಾವುದೇ ಕ್ರೀಂ ಹಚ್ಚಿದ ನಂತರ ಸ್ವಲ್ಪ ಸಮಯದವರೆಗೆ  ಮಸಾಜ್ ಮಾಡಬೇಕು. ಹಾಗೆ ಮಾಡುವುದರಿಂದ, ಕಾಲುಗಳ ಮೇಲೆ ರಕ್ತವನ್ನು ಸರಬರಾಜು ಮಾಡಲಾಗುತ್ತದೆ.

  • ಆಲಿವ್ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಪಾದಗಳು ಮೃದುವಾಗುತ್ತದೆ.

  • ಪಾದಗಳಿಗೆ ಸಂಬಂಧಿಸಿದ ವ್ಯಾಯಾಮವನ್ನು ಕಡ್ಡಾಯವಾಗಿ ಮಾಡಿ.