ಚಳಿಗಾಲದಲ್ಲಿ ನಿಮ್ಮ ಕೋಮಲ ಪಾದಗಳ ಆರೈಕೆ ಹೀಗಿರಲಿ..!
ಚಳಿಗಾಲದಲ್ಲಿ ಕಾಲುಗಳು ಒಡೆಯುವುದು ಸಾಮಾನ್ಯ. ಒಡಕು ಕಾಲನ್ನು ನೋಡಲು ಯಾರು ತಾನೇ ಇಷ್ಟ ಪಡುತ್ತಾರೆ? ಅಷ್ಟೇ ಅಲ್ಲ ಒಡೆದ ಕಾಲುಗಳ ನೋವು ಅದನ್ನು ಅನುಭವಿಸಿದವರಿಗಷ್ಟೇ ಗೊತ್ತು.
ಚಳಿಗಾಲ ಬರುತ್ತಿದ್ದಂತೆ ಅನೇಕ ಜನರಿಗೆ ಅದರಲ್ಲೂ ಮಹಿಳೆಯರಿಗೆ ತಮ್ಮ ಪಾದಗಳದ್ದೇ ಚಿಂತೆ. ಕೆಲವರಿಗೆ ಎಲ್ಲಾ ಸೀಸನ್ ಗಳಲ್ಲೂ ಕಾಲು ಒಡೆದರೆ, ಮತ್ತೆ ಕೆಲವರಿಗೆ ಚಳಿಗಾಲದಲ್ಲಿ ಮಾತ್ರ ಕಾಲು ಒಡೆಯುತ್ತದೆ. ಒಡಕು ಕಾಲನ್ನು ನೋಡಲು ಯಾರು ತಾನೇ ಇಷ್ಟ ಪಡುತ್ತಾರೆ? ಅಷ್ಟೇ ಅಲ್ಲ ಒಡೆದ ಕಾಲುಗಳ ನೋವು ಅದನ್ನು ಅನುಭವಿಸಿದವರಿಗಷ್ಟೇ ಗೊತ್ತಿರಲು ಸಾಧ್ಯ. ಆದರೆ, ನೀವು ಈ ಕೆಲವು ಸಿಂಪಲ್ ಟಿಪ್ಸ್'ಗಳನ್ನು ಅನುಸರಿಸುವ ಮೂಲಕ ಸುಂದರವಾದ ಹಾಗೂ ಆರೋಗ್ಯಕರ ಪಾದಗಳನ್ನು ಪಡೆಯಬಹುದು.
ಚಳಿಗಾಲದಲ್ಲಿ ನಿಮ್ಮ ಕೋಮಲ ಪಾದಗಳ ಆರೈಕೆಗೆ ಇಲ್ಲಿದೆ ಸಿಂಪಲ್ ಟಿಪ್ಸ್...
* ಬಕೆಟ್ ಗೆ ಸ್ವಲ್ಪ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಂಡು ಎರಡು ಟೇಬಲ್ಸ್ಪೂನ್ ಉಪ್ಪು ಹಾಕಿ ಮತ್ತು ಎರಡು ಟೇಬಲ್ಸ್ಪೂನ್ ಗ್ಲಿಸರಿನ್ ಮತ್ತು ಆಲಿವ್ ತೈಲ ಸೇರಿಸಿ. ಪಾದಗಳನ್ನು ಅದರಲ್ಲಿ ಇರಿಸಿ. ಇದರಿಂದ ನಿಮ್ಮ ಪಾದದ ನೋವು ಕಡಿಮೆಯಾಗುವುದಲ್ಲದೆ, ಉತ್ತಮ ಫಲಿತಾಂಶ ಸಿಗುತ್ತದೆ.
* ಒಂದು ಬಕೆಟ್ನಲ್ಲಿ ನೀವು ತಡೆಯುವಷ್ಟು ಬಿಸಿ ನೀರನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಅರಿಶಿನ, ಉಪ್ಪು, ಶಾಂಪು ಹಾಕಿ ಸ್ವಲ್ಪ ಸಮಯ ನಿಮ್ಮ ಕಾಲನ್ನು ಅದರಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಕಾಲುಗಳು ಕೋಮಲವಾಗುತ್ತವೆ ಮತ್ತು ಪಾದಗಳ ನೋವು ಕಡಿಮೆ ಆಗುತ್ತದೆ.
* ಹೈ-ಹೀಲ್ಡ್ಸ್ ಚಪ್ಪಲಿ ಬಳಸದಿರಿ:
ಹೈ-ಹೀಲ್ಡ್ಸ್ ಚಪ್ಪಲಿಗಳನ್ನು ಬಳಸಬಾರದು. ಇದರಿಂದ ನಿಮಗೆ ಬೆನ್ನು ನೋವು ಬರುವುದಲ್ಲದೆ, ಇತರ ಸಮಸ್ಯೆಗಳೂ ತಲೆದೋರುತ್ತದೆ. ಹಾಗಾಗಿ ನಿಮಗೆ ಆರಾಮದಾಯಕ ಎನಿಸುವ ಚಪ್ಪಲಿಗಳನ್ನು ಬಳಸಿ.
* ನೀವು ಯಾವುದೇ ಕ್ರೀಂ ಹಚ್ಚಿದ ನಂತರ ಸ್ವಲ್ಪ ಸಮಯದವರೆಗೆ ಮಸಾಜ್ ಮಾಡಬೇಕು. ಹಾಗೆ ಮಾಡುವುದರಿಂದ, ಕಾಲುಗಳಲ್ಲಿ ರಕ್ತ ಸರಬರಾಜಿಗೆ ಅನುಕೂಲ.
* ಆಲಿವ್ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಪಾದಗಳು ಮೃದುವಾಗುತ್ತದೆ.
* ನೀವು ಬೆರಳುಗಳ ನಡುವೆ ಮತ್ತು ಪಾದದ ಮೇಲೆ ಮಸಾಜ್ ಮಾಡಬೇಕು. ಹಾಗೆ ಮಾಡುವುದರಿಂದ, ಸತ್ತ ಕೋಶಗಳನ್ನು ತೆಗೆದುಹಾಕಲಾಗುತ್ತದೆ. ವಿನೆಗರ್ ಮತ್ತು ಮಸಾಜಿನೊಂದಿಗೆ ಮಸಾಜ್ ಪರಿಣಾಮ ಬೀರುತ್ತದೆ. ಇದರಿಂದಾಗಿ ಕಾಲುಗಳು ಮೃದುವಾಗುತ್ತವೆ.
* ಪಾದಗಳಿಗೆ ಸಂಬಂಧಿಸಿದ ವ್ಯಾಯಾಮವನ್ನು ಕಡ್ಡಾಯವಾಗಿ ಮಾಡಿ.