ಬೆಂಗಳೂರು: ಖರ್ಬೂಜ ಹಣ್ಣು(Kharbooja) ನಿಮಗಂತೂ ಗೊತ್ತೇ ಇರುತ್ತದೆ. ಬೇಸಿಗೆಯಲ್ಲಂತೂ ಈ ಹಣ್ಣಿಗೆ ಭಾರೀ ಡಿಮ್ಯಾಂಡ್ ಇರುತ್ತದೆ. ಈ ಹಣ್ಣು ಸ್ವಾದಿಷ್ಟವೂ ಹೌದು. ಆರೋಗ್ಯಕ್ಕೆ (Health) ಹಿತಕಾರಿಯೂ ಹೌದು. ಖರ್ಬೂಜಾ ಹಣ್ಣು ಬೇಸಿಗೆಯಲ್ಲಿ ನಮ್ಮ ದೇಹವನ್ನು ಹೈಡ್ರೇಟ್ ಆಗಿ ಇಡುತ್ತದೆ. ಅಂದರೆ, ದೇಹದಲ್ಲಿ ನೀರಿನ  ಅಂಶ ಕಡಿಮೆಯಾಗದಂತೆ ಕಾಪಾಡಿಕೊಂಡು ಬರುತ್ತದೆ. ಆದರೆ ಎಷ್ಟೋ ಸಲ ಖರ್ಬೂಜಾವನ್ನು ಖರೀದಿಸುವಾಗ  ಎಡವಟ್ಟು ಮಾಡಿರುತ್ತೇವೆ. ತುಂಬಾ ಚೆನ್ನಾಗಿದೆ ಎಂದುಕೊಂಡು ಖರ್ಬೂಜಾವನ್ನು ಖರೀದಿಸುತ್ತೇವೆ. ಆದರೆ, ಕತ್ತರಿಸಿದಾಗ ಅದು ಸಪ್ಪೆ ಆಗಿರುತ್ತದೆ. ಸಿಹಿ ಇರೋದೇ ಇಲ್ಲ. ತುಂಬಾ ನಿರಾಶೆಯಾಗಿರುತ್ತದೆ. ಹೀಗಿರುವಾಗ ಇವತ್ತು ನೀವು ಖರ್ಬೂಜಾ ಖರೀದಿಸುವಾಗ ನೆನಪಿನಲ್ಲಿಡಬೇಕಾದ ಕೆಲವು ಅಂಶಗಳ ಬಗ್ಗೆ ತಿಳಿಸಿಕೊಡುತ್ತೇವೆ.


COMMERCIAL BREAK
SCROLL TO CONTINUE READING

ಸ್ವಾದಿಷ್ಟ ಖರ್ಬೂಜಾ ಖರೀದಿಸುವುದು ಹೇಗೆ..?


ಇದನ್ನೂ ಓದಿ : Health Tips: ಶರೀರದಲ್ಲಿ Oxygen ಮಟ್ಟವನ್ನು ಹೆಚ್ಚಿಸಲು ಬಹಿರಂಗವಾಗಿ ನಕ್ಕು ನಲಿಯಿರಿ, ಇಲ್ಲಿವೆ Laughing Therapy ಲಾಭಗಳು


1. ಖರ್ಬೂಜಾದ (Kharbooja) ಮೇಲಿನ ಭಾಗವು ಒಳಗೆ ಒತ್ತಿಕೊಂಡಿದ್ದರೆ ಖರ್ಬೂಜಾವು ಒಳಗೆ ಮಾಗಿದೆ ಎಂದರ್ಥ.  ಇದು ತಿನ್ನಲು ಸಿಹಿಯಾಗಿರುತ್ತದೆ. ಮೇಲಿನ ಭಾಗದಲ್ಲಿ ಒಂದು ವೇಳೆ ಹೆಚ್ಚು ರಂದ್ರಗಳಿದ್ದರೆ ಅಥವಾ ಒತ್ತಿದಾಗ ಹಿಸುಕಿದಂತಿದ್ದರೆ ಖರೀದಿಸಬೇಡಿ


2.  ಮೇಲಿನ ಭಾಗ ಅಂದರೆ ಮೇಲ್ಮೈ ಪರದೆ ಹಳದಿಯಾಗಿದ್ದು ಅದರಲ್ಲಿ ಹಸಿರು ಪಟ್ಟಿಗಳಿದ್ದರೆ (green strips) ಖರ್ಬೂಜಾ ಸಿಹಿಯಾಗಿರುತ್ತದೆ


3. ಮೇಲೆ ಹಸಿರು ಬಣ್ಣ ಇದ್ದರೆ ಆ ಖರ್ಬೂಜಾ ( Muskmelon) ಅಷ್ಟೊಂದು ಚೆನ್ನಾಗಿರಲ್ಲ


ಇದನ್ನೂ ಓದಿ : Medicine For Covid-19 Treatment: ಕೊರೊನಾ ಚಿಕಿತ್ಸೆಗಾಗಿ Natco Pharma ಕಂಪನಿಯ Baricitinib ಮಾತ್ರೆಯ ತುರ್ತು ಬಳಕೆಗೆ ಅನುಮತಿ


4. ಖರ್ಬೂಜಾದ ಕೆಳಗಿನ ಬಣ್ಣವು ಡಾರ್ಕ್ ಆಗಿದ್ದರೆ, ಅದು ಸಿಹಿಯಾಗಿರುತ್ತದೆ. ಅಂದರೆ ಪ್ರಾಕೃತಿಕವಾಗಿ ಪಕ್ವವಾಗಿರುತ್ತದೆ


5.  ಖರ್ಬೂಜಾದಿಂದ ತೀಕ್ಷ್ಣ ವಾಸನೆ (Smell) ಬರುತ್ತಿದ್ದರೆ ಖರ್ಬೂಜಾ ಸಿಹಿಯಾಗಿರುತ್ತದೆ


6. ತುಂಬಾ ಭಾರ  ಇದ್ದರೆ ಒಳಗಡೆ ತುಂಬಾ ಬೀಜ (Seeds) ಇದೆ ಎಂದರ್ಥ. ಇದು ಚೆನ್ನಾಗಿ ಪಕ್ವವಾಗಿರಲ್ಲ
7. ತುಂಬಾ ಮೆದುವಾಗಿರುವ ಖರ್ಬೂಜಾವನ್ನು ಖರೀದಿಸಬೇಡಿ. ಇದು ಒಳಗೆ ಹಾಳಾಗಿರುತ್ತದೆ. 


ಇದನ್ನೂ ಓದಿ : Tomato Juice : ಕೊರೋನಾದಿಂದ ರಕ್ಷಿಸಲು-ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ ಟೊಮೆಟೊ ಜ್ಯೂಸ್!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.