ನಗರ ಜೀವನದ ಸಂಕೀರ್ಣತೆಗಳಿಂದಾಗಿ ನಾವು ಸಂಪೂರ್ಣವಾಗಿ ದಣಿದಿರುತ್ತೇವೆ. ಹೀಗಾಗಿ ನಾವು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಖಿನ್ನರಾಗುತ್ತೇವೆ. ನಮ್ಮಲ್ಲಿ ಮತ್ತು ನಮ್ಮ ಯೋಗಕ್ಷೇಮಕ್ಕಾಗಿ ನಾವು ಸ್ವಲ್ಪ ಸಮಯವನ್ನು ನೀಡದಿರುವುದರಿಂದ ದಿನೇ-ದಿನೇ ನಮ್ಮ ಆರೋಗ್ಯವು ಕ್ಷೀಣಿಸುತ್ತಿದೆ.


COMMERCIAL BREAK
SCROLL TO CONTINUE READING

ನಮ್ಮ ದೇಹ, ಮನಸ್ಸು ಮತ್ತು ಆತ್ಮದ ನಿಯಂತ್ರಣವನ್ನು ಪಡೆದುಕೊಳ್ಳಲು, ಬಿಡುವಿಲ್ಲದ ಈ ಜೀವನ ಜಂಜಾಟದಲ್ಲಿ  ವಿಶ್ರಾಂತಿ ಪಡೆಯಲು ನಮ್ಮ ವೇಳಾಪಟ್ಟಿಯಲ್ಲಿ ಸ್ವಲ್ಪ ಸಮಯ ಮೀಸಲಿಡುವುದು ಮುಖ್ಯ.


ಉತ್ತಮ ಆರೋಗ್ಯ ಮತ್ತು ಮನಸ್ಸನ್ನು ಪಡೆಯಲು ಉತ್ತಮ ಮಾರ್ಗವೆಂದರೆ ಧ್ಯಾನ ಮಾಡುವುದು. ಹಾಗಂತ ಧ್ಯಾನ ಮಾಡುವುದು ಒಂದು ಕಪ್ ಚಹಾ ಕುಡಿದಂತೆಯೂ ಅಲ್ಲ, ಹಾಗೆಯೇ ರಾಕೆಟ್ಯಾ ವಿಜ್ಞಾನದಂತೆ ಕಷ್ಟವೂ ಅಲ್ಲ. ಯಾರಾದರೂ ಧ್ಯಾನ ಮಾಡಬಹುದು. 


ಧ್ಯಾನ ಮಾಡುವುದು ಹೇಗೆ ಎಂಬುದನ್ನು ಈ ಸರಳ ಹಂತಗಳಿಂದ ತಿಳಿಯೋಣ:


* ನೀವು ದಿನನಿತ್ಯ ಏಳುವ ಸಮಯಕ್ಕಿಂತ  ಅರ್ಧ ಘಂಟೆ ಮೊದಲು ಎದ್ದೇಳಿ.


* ನಿಮ್ಮ ಮನೆಯಲ್ಲಿ ಸ್ನೇಹಶೀಲ ಮೂಲೆಯನ್ನು ಆಯ್ಕೆಮಾಡಿ. ನೀವು ದೀಪಗಳನ್ನು ಆನ್ ಮಾಡಬೇಕಿಲ್ಲ. ಧ್ಯಾನಕ್ಕೆ ಮಬ್ಬಾದ ಅಥವಾ ಮಂದ ಬೆಳಕಿರುವ ವಾತಾವರಣವು ಬೇಕಾಗುತ್ತದೆ. ಒಂದು ಮಣ್ಣಿನ ದೀಪ ಮತ್ತು ಸೌಮ್ಯವಾದ ಧೂಪದ್ರವ್ಯ ಕಟ್ಟಿ ಬೆಳಕು ಪಡೆಯಿರಿ. ಸುವಾಸನೆ ನಿಮಗೆ ಸಹಾಯ ಮಾಡುತ್ತದೆ ಮತ್ತು ವಿಶ್ರಾಂತಿ ನೀಡುತ್ತದೆ.


* ನೆಲದ ಮೇಲೆ ಚಾಪೆ ಹಾಸಿ ಮತ್ತು ಕಣ್ಣು ಮುಚ್ಚಿ ಪದ್ಮಾಸನ ಭಂಗಿಯಲ್ಲಿ ಕುಳಿತುಕೊಳ್ಳಿ.


* ನಿಮ್ಮ ಫೋನ್ ಅಥವಾ ಸೌಂಡ್ ಸಿಸ್ಟಮ್ನಲ್ಲಿ 'ಓಂಕಾರ'ವನ್ನು ಹಾಕಿ. ಆದರೆ, ಧ್ವನಿಯನ್ನು ಕಡಿಮೆ ಮಾಡಿ. 


* ದೀರ್ಘವಾದ ಉಸಿರನ್ನು ತೆಗೆದುಕೊಂಡು ಹಾಗೆಯೇ ನಿಧಾನವಾಗಿ ಉಸಿರು ಬಿಡುವ ಪ್ರಕ್ರಿಯೆಯನ್ನು ಆರಂಭಿಸಿ. ನಿಮ್ಮ ದೇಹದಲ್ಲಿನ ಗಾಳಿಯನ್ನು ನಿಮ್ಮ ಮೂಗು ಹೊಟ್ಟೆಗಳ ಮೂಲಕ ಶ್ವಾಸಕೋಶಗಳಿಗೆ ಮತ್ತು ನಂತರ ಹಿಮ್ಮುಖವಾಗಿ ಬರುವತನಕ ಪುನರಾವರ್ತಿಸಿ.


* ನೀವು ಎಲ್ಲಿಯವರೆಗೆ ನಿಮ್ಮ ಉಸಿರನ್ನು ಹಿಡಿದಿಟ್ಟುಕೊಳ್ಳುತ್ತೀರೋ ಅಲ್ಲಿಯವರೆಗೆ ಹಾಗೆಯೇ 'ಓಂಕಾರ' ಹೇಳಿ. ನೀವು ಉಸಿರುಗಟ್ಟಿಲ್ಲ ಎಂಬುದನ್ನು ನೀವೇ ಖಚಿತಪಡಿಸಿಕೊಳ್ಳಿ. ನಿಮ್ಮನ್ನು ನೀವು ಆಂತರಿಕ ಸ್ವಯಂ ಸಂಪರ್ಕಿಸಲು ಪ್ರಯತ್ನಿಸುವಾಗ ನಿಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಮರೆಯುವ ಈ ಧ್ಯಾನದಲ್ಲಿ ಮಗ್ನರಾಗಿ.