ಪಾಟ್ನಾ: ಬಿಹಾರದ ಮುಜಾಫರಪುರ ಜಿಲ್ಲೆಯಲ್ಲಿ ಮೆದುಳು ಜ್ವರದಿಂದ ಮತ್ತೆ 6 ಮಕ್ಕಳು ಮೃತಪಟ್ಟಿದ್ದು, ಸಾವಿನ ಸಂಖ್ಯೆ 83ಕ್ಕೆ ಏರಿಕೆಯಾಗಿದೆ. 


COMMERCIAL BREAK
SCROLL TO CONTINUE READING

ಮುಜಾಫರಪುರ ಜಿಲ್ಲಾಡಳಿತ ಈ ಬಗ್ಗೆ ಹೇಳಿಕೆ ನೀಡಿದ್ದು, ಶುಕ್ರವಾರ ಸಂಜೆ SKMCH ಆಸ್ಪತ್ರೆಯಲ್ಲಿ 6 ಮಕ್ಕಳು ಮೃತಪಟ್ಟಿದ್ದು, ಮೂರೂ ಮಕ್ಕಳು ಕೇಜ್ರಿವಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿಸಿದೆ. ಬಿಹಾರ ರಾಜ್ಯದಲ್ಲಿ ಮೆದುಳು ಜ್ವರಕ್ಕೆ ಬಲಿಯಾದ ಮಕ್ಕಳ ಸಂಖ್ಯೆ ಮುಜಾಫರಪುರದಲ್ಲಿ ಹೆಚ್ಚಾಗಿದೆ. ವೈಶಾಲಿಯಲ್ಲಿ ಮೆದುಳು ಜ್ವರದಿಂದ ಬಳಲುತ್ತಿರುವ ಹತ್ತು ಹೊಸ ಪ್ರಕರಣಗಳು ವರದಿಯಾಗಿವೆ.


hypoglycemia ದಿಂದ ರಕ್ತದಲ್ಲಿ ಸಕ್ಕರೆ ಅಂಶ ಅತ್ಯಂತ ಕಡಿಮೆ ಪ್ರಮಾಣಕ್ಕೆ ಇಳಿಯುವುದು ಮತ್ತು ಇಲೆಕ್ಟ್ರೋಲೈಟ್‌ ಅಸಮತೋಲನ ಉಂಟಾಗುವುದರಿಂದ ಸಾವುಗಳು ಸಂಭವಿಸುತ್ತಿವೆ ಎಂದು ರಾಜ್ಯದ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.


ಬಿಹಾರ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಂಜಯ್ ಕುಮಾರ್ ಅವರ ಪ್ರಕಾರ, ಈ ರೋಗವು 12 ಜಿಲ್ಲೆಗಳ 222 ಬ್ಲಾಕ್‌ಗಳಲ್ಲಿ ವಿಶೇಷವಾಗಿ ಮುಜಾಫರ್ಪುರ್, ವೈಶಾಲಿ, ಶಿಯೋಹರ್ ಮತ್ತು ಪೂರ್ವ ಚಂಪಾರನ್ ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ.


ಮುಜಫರ್ಪುರದ ಶ್ರೀ ಕೃಷ್ಣ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (ಎಸ್‌ಕೆಎಂಸಿಎಚ್)ಗೆ ರಾಜ್ಯ ಆರೋಗ್ಯ ಸಚಿವ ಮಂಗಲ್ ಪಾಂಡೆ ಶುಕ್ರವಾರ ಭೇಟಿ ನೀಡಿದ್ದು ಮಕ್ಕಳ ಆರೋಗ್ಯ ಸ್ಥಿತಿ, ನೀಡುತ್ತಿರುವ ಚಿಕಿತ್ಸೆ ಬಗ್ಗೆ ವಿಚಾರಣೆ ನಡೆಸಿದ್ದಾರೆ.