Fungal Infection: ಮಳೆಗಾಲದಲ್ಲಿ ಪಾದಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಏಕೆಂದರೆ ಈ ಮಳೆಗಾಲದ ಋತುವಿನಲ್ಲಿ ಹೆಚ್ಚಿನ ಜನರು ಫಂಗಸ್ ಮತ್ತು ಬ್ಯಾಕ್ಟೀರಿಯಾಗಳಿಂದ ಬರುವ ಪಾದಗಳ ಸೋಂಕಿಗೆ ಗುರಿಯಾಗುತ್ತಾರೆ. ಏಕೆಂದರೆ ಮಳೆಯಲ್ಲಿ ತೊಯ್ದ ಅಥವಾ ರಸ್ತೆಯಲ್ಲಿ ಶೇಖರಣೆಯಾದ ಮತ್ತು ಕೊಳಕು ನೀರಿನಲ್ಲಿ ಅಡ್ಡಾಡಿ ಹೆಚ್ಚು ಹೊತ್ತು  ಪಾದರಕ್ಷೆ ಧರಿಸುವುದರಿಂದ ಪಾದಗಳಲ್ಲಿ ಫಂಗಲ್ ಸೋಂಕಿನ ಸಮಸ್ಯೆ ಉಂಟಾಗುತ್ತದೆ. ನಿಮಗೂ ಕೂಡ ಒಂದು ವೇಳೆ ಫಂಗಲ್ ಸೋಂಕಿದ್ದರೆ ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಉಪ್ಪಿನ ಬಳಕೆ
ಉಪ್ಪಿನಲ್ಲಿ ಆಂಟಿಬ್ಯಾಕ್ಟೀರಿಯಲ್ ಮಿಸ್ಸಿಂಗ್  ಕಂಡುಬರುತ್ತದೆ, ಇದರಿಂದಾಗಿ ಇದು ಪಾದಗಳಲ್ಲಿ ಶಿಲೀಂಧ್ರಗಳ ಸೋಂಕನ್ನು ತಡೆಯುತ್ತದೆ. ಪಾದಗಳಲ್ಲಿ ಯಾವುದೇ ರೀತಿಯ ಸೋಂಕನ್ನು ತಪ್ಪಿಸಲು, ಒಂದು ಟಬ್ನಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ 2 ಚಮಚ ಉಪ್ಪು ಬೆರೆಸಿ, ನಂತರ ನಿಮ್ಮ ಪಾದಗಳನ್ನು ಅದರಲ್ಲಿ ಇರಿಸಿ ಮತ್ತು 20 ನಿಮಿಷಗಳ ಕಾಲ ಕುಳಿತುಕೊಳ್ಳಿ. ಹೀಗೆ ಮಾಡುವುದರಿಂದ ಪಾದಗಳಲ್ಲಿ ಫಂಗಸ್ ಮತ್ತು ಸೋಂಕು ನಿವಾರಣೆಯಾಗುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ಹಿಮ್ಮಡಿಗಳು ಕೂಡ ಸ್ವಚ್ಛವಾಗಿರುತ್ತವೆ.

ಬರಿಗಾಲಲ್ಲಿ ನಡೆದಾದಬೇಡಿ
ಮಾರ್ನಿಂಗ್ ವಾಕ್ ಮಾಡುವಾಗ ಹಲವು ಬಾರಿ ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯುತ್ತೇವೆ, ಹೀಗೆ ಮಾಡುವುದರಿಂದ ಸಾಕಷ್ಟು ಸಮಾಧಾನ ಸಿಗುತ್ತದೆ. ಆದರೆ ಮಳೆಗಾಲದಲ್ಲಿ ಬರಿಗಾಲಿನಲ್ಲಿ ನಡೆಯುವುದನ್ನು ಆದಷ್ಟು ತಪ್ಪಿಸಿ. ಏಕೆಂದರೆ ಈ ಋತುವಿನಲ್ಲಿ ಬರಿಗಾಲಿನಲ್ಲಿ ನಡೆಯುವುದು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಇದನ್ನು ಮಾಡುವುದನ್ನು ಸಾಧಯ್ವಾದಷ್ಟು ತಪ್ಪಿಸಿ.

ಉಗುರುಗಳನ್ನು ಚಿಕ್ಕದಾಗಿ ಇರಿಸಿ
ಪಾದಗಳಲ್ಲಿನ ನಿರಂತರ ತೇವದಿಂದಾಗಿ, ಮಳೆಗಾಲದಲ್ಲಿ ಉಗುರುಗಳು ಸ್ವಲ್ಪ ದುರ್ಬಲವಾಗುತ್ತವೆ, ಇದರಿಂದಾಗಿ ಈ ಋತುವಿನಲ್ಲಿ ಉಗುರುಗಳು ಶೀಳುವ ಅಪಾಯವಿರುತ್ತದೆ. ಇದರಿಂದ ಸೋಂಕು ತಗಲುವ ಅಪಾಯವಿರುತ್ತದೆ. ಆದ್ದರಿಂದ ಈ ಋತುವಿನಲ್ಲಿ ನಿಮ್ಮ ಕಾಲ್ಬೆರಳ ಉಗುರುಗಳನ್ನು ಆದಷ್ಟು ಟ್ರಿಮ್ ಗೊಳಿಸಲು ಪ್ರಯತ್ನಿಸಿ.


ಇದನ್ನೂ ಓದಿ-Men Health Tips: ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿಪಡೆಯಲು ಬಯಸುವ ಪುರುಷರು ಈ ಉಪಾಯಗಳನ್ನು ಅನುಸರಿಸಿ

ಋತುವಿನ ಪ್ರಕಾರ ಶೂಗಳನ್ನು ಧರಿಸಿ
ಮಾನ್ಸೂನ್ ಸೀಸನ್ ನಲ್ಲಿ ಯಾವಾಗ ಮಳೆ ಬರುತ್ತೆ ಅಂತ ಯಾರಿಗೂ ಗೊತ್ತಾಗುವುದಿಲ್ಲ, ಈ ಸೀಸನ್ ನಲ್ಲಿ ಪಾದಗಳು ಪೂರ್ತಿಯಾಗಿ ಮುಚ್ಚದೇ ಇರುವಂತಹ ಪಾದರಕ್ಷೆಗಳನ್ನು ಧರಿಸಿ. ಏಕೆಂದರೆ ಮುಚ್ಚಿದ ಶೂಗಳಲ್ಲಿ ಪಾದಗಳಿಗೆ ಸಾಕಷ್ಟು ಗಾಳಿ ಸಿಗುವುದಿಲ್ಲ ಅದರಿಂದಲೂ ಕೂಡ ಫಂಗಲ್ ಇನ್ಫೆಕ್ಷನ್ ಉಂಟಾಗುವ ಸಾಧ್ಯತೆ ಇರುತ್ತದೆ.


ಇದನ್ನೂ ಓದಿ-Weight Loss Tips: ವೇಗವಾಗಿ ತೂಕ ಇಳಿಕೆ ಮಾಡಿಕೊಳ್ಳಬೇಕೆ? ಈ ಒಂದು ಸಂಗತಿ ನಿಮ್ಮ ಆಹಾರದಲ್ಲಿರಲಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.