Skin Care Tips: ಸೋಡಾ ವಾಟರ್ ನಿಂದ ಮುಖ ತೊಳೆಯುವುದರಿಂದಾಗುವ ಈ ಲಾಭ ನಿಮಗೆ ತಿಳಿದಿದೆಯೇ?
Soda Water Benefits: ಸೋಡಾ ವಾಟರ್ ಬಳಸಿಯೂ ಕೂಡ ಹೊಳಪಾದ ತ್ವಚೆಯನ್ನು ಪಡೆಯಬಹುದು ಎಂಬ ಸಂಗತಿ ನಿಮಗೆ ತಿಳಿದಿದೆಯಾ? ಸೋಡಾ ನೀರಿನಿಂದ ಮುಖ ತೊಳೆಯುವುದರಿಂದ ಆಗುವ ಲಾಭಗಳೇನು ಎಂಬುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ
Soda Water Benefits For Face: ಹೊಳಪಾದ ತ್ವಚೆಯನ್ನು ಪಡೆದುಕೊಳ್ಳಲು ಜನರು ದುಬಾರಿ ಸೌಂದರ್ಯವರ್ಧಕಗಳು ಹಾಗೂ ಮನೆಮದ್ದುಗಳನ್ನು ಬಳಸುತ್ತಾರೆ. ಆದರೆ ಸೋಡಾ ನೀರನ್ನು ಬಳಸುವುದರಿಂದಲೂ ಕೂಡ ಹೊಳಪಾದ ತ್ವಚೆಯನ್ನು ಪಡೆಯಬಹುದು ಎಂಬ ಸಂಗತಿ ನಿಮಗೆ ತಿಳಿದಿದೆಯಾ? ಹೌದು, ಸೋಡಾ ನೀರಿನಿಂದ ಮುಖ ತೊಳೆದರೆ ತ್ವಚೆಗೆ ಹೆಚ್ಚಿನ ಲಾಭ ಸಿಗುತ್ತದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಇದು ತ್ವಚೆಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯ ಮಾಡುವುದಲ್ಲದೆ ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ. ಸೋಡಾ ನೀರಿನಿಂದ ಮುಖ ತೊಳೆಯುವುದರಿಂದ ಆಗುವ ಲಾಭಗಳೇನು ತಿಳಿದುಕೊಳ್ಳೋಣ ಬನ್ನಿ?
ಸೋಡಾ ನೀರಿನಿಂದ ಮುಖ ತೊಳೆಯುವುದರಿಂದ ಆಗುವ ಲಾಭಗಳು
ಮೊಡವೆ ಸಮಸ್ಯೆ ನಿವಾರಣೆ
ಸೋಡಾ ನೀರಿನಿಂದ ಮುಖವನ್ನು ತೊಳೆಯುವುದು ಚರ್ಮದ ಮೇಲೆ ಸಂಗ್ರಹವಾಗಿರುವ ಹೆಚ್ಚುವರಿ ಕೊಳೆ, ಎಣ್ಣೆ, ಕಪ್ಪು ತಲೆಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಮೊಡವೆಗಳು ಕ್ರಮೇಣ ಕಡಿಮೆಯಾಗಲು ಪ್ರಾರಂಭಿಸುತ್ತವೆ. ಆದ್ದರಿಂದ ನೀವು ಮೊಡವೆ ಸಮಸ್ಯೆಯಿಂದ ತೊಂದರೆಗೊಳಗಾಗಿದ್ದರೆ ಸೋಡಾ ನೀರಿನಿಂದ ನಿಮ್ಮ ಮುಖವನ್ನು ತೊಳೆಯಬಹುದು.
ಚರ್ಮದ ತೇವಾಂಶ ಕಾಪಾಡುತ್ತದೆ
ಸೋಡಾ ನೀರು ಮುಖದಲ್ಲಿ ತೇವಾಂಶವನ್ನು ಕಾಪಾಡುತ್ತದೆ. ಒಣ ತ್ವಚೆ ಇರುವವರಿಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ. ಏಕೆಂದರೆ, ಇದು ತ್ವಚೆಯ ತೇವಾಂಶವನ್ನು ಲಾಕ್ ಮಾಡುತ್ತದೆ. ಇದರ ಜೊತೆಗೆ ಇದು ತ್ವಚೆಯನ್ನು ಮೃದುವಾಗಿಸುತ್ತದೆ.
ಶುಷ್ಕ ತ್ವಚೆಯನ್ನು ನಿವಾರಿಸುತ್ತದೆ
ಸೋಡಾ ನೀರು ಶುಷ್ಕ ತ್ವಚೆಯನ್ನು ತೊಡೆದುಹಾಕಲು ಸಹ ಸಹಾಯ ಮಾಡುತ್ತದೆ, ಸೋಡಾ ನೆರಿನಿಂದ ನೀವು ನಿಮ್ಮ ಮುಖವನ್ನು ತೊಳೆಯುವಾಗ ನೀವು ಮುಖವನ್ನು ಮೃದುವಾಗಿ ಮಸಾಜ್ ಮಾಡಿದರೆ, ಅದು ನಿಮ್ಮ ಮುಖದ ಸತ್ತ ಚರ್ಮವನ್ನು ಹೋಗಲಾಡಿಸುತ್ತದೆ.
ಇದನ್ನೂ ಓದಿ-Health Tips: ಮೂತ್ರಪಿಂಡಗಳಿಂದ ವಿಷಕಾರಿ ಪದಾರ್ಥಗಳನ್ನು ಹೊರಹಾಕಲು ಈ ಡ್ರಿಂಕ್ ಬಳಸಿ
ಮುಖದಲ್ಲಿ ಹೊಳಪು ಬರುತ್ತದೆ
ಇದು ಮೊಡವೆ ಮತ್ತು ಮುಖದ ಮೇಲಿನ ಕಲೆಗಳ ಮೊಂಡುತನದ ಗುರುತುಗಳನ್ನು ತೆಗೆದುಹಾಕಲು ಕೂಡ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ಪ್ರತಿದಿನ ಸೋಡಾ ನೀರಿನಿಂದ ಮುಖ ತೊಳೆದರೆ ಮುಖ ಕಾಂತಿಯುತವಾಗಿ ಕಲೆಗಳ ಸಮಸ್ಯೆ ನಿವಾರಣೆಯಾಗುತ್ತದೆ.
ಇದನ್ನೂ ಓದಿ-ಕಿಡ್ನಿ ವೈಫಲ್ಯವನ್ನು ಸೂಚಿಸುತ್ತದೆ ದೇಹ ನೀಡುವ ಈ ಸಂಕೇತಗಳು
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.