Soaked Dry Fruits Benefits: ಒಣ ಹಣ್ಣುಗಳು ಅಥವಾ ಡ್ರೈ ಫ್ರೂಟ್ ಗಳು ನಮ್ಮ ದೇಹಕ್ಕೆ ತುಂಬಾ ಲಾಭಕಾರಿಯಾಗಿವೆ ಎಂಬ ಸಂಗತಿ ಎಲ್ಲರಿಗೂ ತಿಳಿದೇ ಇದೆ. ಅವುಗಳಲ್ಲಿರುವ ಪೋಷಕಾಂಶಗಳು ನಮ್ಮ ದೇಹವನ್ನು ಫಿಟ್ ಆಗಿ ಇಡುತ್ತವೆ. ಹೀಗಿರುವಾಗ ಯಾವ ಒಣ ಹಣ್ಣುಗಳನ್ನು ನೆನೆ ಹಾಕಿ ಸೇವಿಸಬೇಕು ಮತ್ತು ಯಾವ ಡ್ರೈ ಫ್ರೂಟ್ ಗಳನ್ನು ನೆನೆಹಾಕಿ ಸೇವಿಸಬಾರದು ಎಂಬುದನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯ. ನೆನೆಸಿದ ಬಾದಾಮಿ ಮತ್ತು ಒಣದ್ರಾಕ್ಷಿಗಳು ಹಲವು ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತವೆ ಎಂಬುದನ್ನು ನಾವು ಕೇಳಿದ್ದೇವೆ.  ಹಾಗಾದರೆ ಯಾವ ಒಣ ಹಣ್ಣುಗಳನ್ನು ನೆನೆಸಿ ಸೇವಿಸುವುದರಿಂದ ನಮ್ಮ ಆರೋಗ್ಯವು ಫಿಟ್ ಆಗಿರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,

COMMERCIAL BREAK
SCROLL TO CONTINUE READING

ಈ ಒಣ ಹಣ್ಣುಗಳನ್ನು ನೆನೆಸಿ ತಿನ್ನಿ
ನೆನೆಸಿದ ಎಲ್ಲಾ ಒಣ ಹಣ್ಣುಗಳನ್ನು ಸೇವಿಸುವುದು ಪ್ರಯೋಜನಕಾರಿಯಲ್ಲ. ಏಕೆಂದರೆ ಎಲ್ಲಾ ಒಣ ಹಣ್ಣುಗಳನ್ನು ನೆನೆಸಿ ಸೇವಿಸುವುದರಿಂದ ಆರೋಗ್ಯಕರ ಲಾಭಗಳನ್ನು ನೀಡುತ್ತವೆ ಎಂಬುದು ಅನಿವಾರ್ಯವಲ್ಲ. ಒಣ ಹಣ್ಣುಗಳಾದ ಬಾದಾಮಿ, ಒಣದ್ರಾಕ್ಷಿ ಮತ್ತು ಪ್ಲಮ್‌ಗಳನ್ನು ನೆನೆಸುವುದು ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ.

ಯಾವ ಒಣ ಹಣ್ಣುಗಳನ್ನು ನೆನೆಸಿ ಸೇವಿಸಬಾರದು  ಎಂಬುದನ್ನು ತಿಳಿಯೋಣ ಬನ್ನಿ 
ಒಣ ಹಣ್ಣುಗಳಾದ ಗೋಡಂಬಿ, ವಾಲ್ನಟ್, ಶೇಂಗಾ ಅಥವಾ ಕಡಲೆ ಬೀಜ, ಪಿಸ್ತಾ ಮತ್ತು ಖಾರಿಕ್ ಅನ್ನು ನೀವು ನೆನೆ ಹಾಕದೆಯೇ ಸೇವಿಸಬಹುದು. ಕೆಲ ಒಣ ಹಣ್ಣುಗಳು ಮತ್ತು ಬೀಜಗಳು ಅದರಲ್ಲಿಯೂ ವಿಶೇಷವಾಗಿ ವಾಲ್‌ನಟ್‌ಗಳು ದೇಹಕ್ಕೆ ಅಗತ್ಯವಾಗಿರುವ ಕೊಬ್ಬಿನಾಮ್ಲಗಳನ್ನು ಹೊಂದಿರುತ್ತವೆ, ರಾತ್ರಿಯಲ್ಲಿ ಅವುಗಳನ್ನು ನೆನೆಹಾಕಿದರೆ ಈ ಕೊಬ್ಬಿನಾಮ್ಲಗಳು ಅದರಿಂದ ಮಾಯವಾಗುತ್ತವೆ. ಹೀಗಾಗಿ ಅವುಗಳನ್ನು ನೆನೆಸಿ ತಿನ್ನುವುದನ್ನು ತಪ್ಪಿಸಿ. ಆದರೆ, ನೀವು ಖರ್ಜೂರ ಅಥವಾ ಒಣದ್ರಾಕ್ಷಿಗಳನ್ನು ನೀವು ಎರಡೂ ರೀತಿಯಲ್ಲಿ ಸೇವಿಸಬಹುದು, ನೀವು ಅವುಗಳನ್ನು ನೆನೆಸಿ ತಿನ್ನಬಹುದು ಮತ್ತು ಒಣಗಿದ ರೂಪದಲ್ಲಿಯೂ ಸೇವಿಸಬಹುದು.


ಇದನ್ನೂ ಓದಿ-Moringa Leaves: ನಿಮ್ಮ ಡಯಟ್ ನಲ್ಲಿರಲಿ ನುಗ್ಗೆಸೊಪ್ಪು, ಸಕ್ಕರೆ ಕಾಯಿಲೆ ಇರುವವರಿಗೂ ಕೂಡ ಲಾಭಕಾರಿ

ಒಣ ಹಣ್ಣುಗಳನ್ನು ನೆನೆಸಿ ಏಕೆ ತಿನ್ನಬೇಕು?
>> ಡ್ರೈ ಫ್ರೂಟ್ಸ್ ಗಳನ್ನು ನೆನೆ ಹಾಕಿದರೆ ಅದು ಅವುಗಳಲ್ಲಿ ಮೊಳಕೆಯೊಡೆಯಲು ಕಾರಣವಾಗುತ್ತದೆ, ಇದು ಜೀರ್ಣಕಾರಿ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
>> ಇದಲ್ಲದೆ, ಒಣ ಹಣ್ಣುಗಳನ್ನು ನೆನೆಹಾಕುವ ಪ್ರಕ್ರಿಯೆಯಲ್ಲಿ, ಅವುಗಳ ಹೊರ ಪದರಗಳಲ್ಲಿರುವ ಫೈಟೇಟ್ ಮತ್ತು ಆಕ್ಸಲೇಟ್‌ಗಳಂತಹ ಆಂಟಿನ್ಯೂಟ್ರಿಯಂಟ್ಸ್ ಗಳು ಹೊರಟುಹೋಗುತ್ತವೆ .
>> ಪ್ರಿಸರ್ವೆಂಟ್ಸ್ ಗಳನ್ನು ಬಳಸಬಹುದಾದಂತಹ ದ್ರಾಕ್ಷಿಯಂತಹ ಒಣ ಹಣ್ಣುಗಳನ್ನು ನೆನೆಸುವುದರಿಂದ ಅವುಗಳಲ್ಲಿನ ಹಾನಿಕಾರಕ ಸಂರಕ್ಷಕಗಳನ್ನು ತೆಗೆದುಹಾಕಲು ಸಹಾಯವಾಗುತ್ತದೆ.
>> ಇದರೊಂದಿಗೆ ಬಾದಾಮಿ ಸಿಪ್ಪೆಯಲ್ಲಿ ಟ್ಯಾನಿನ್ ಎಂಬ ಅಂಶವಿದ್ದು, ಬಾದಾಮಿಯನ್ನು ನೇರವಾಗಿ ಸೇವಿಸಿದರೆ ಜೀರ್ಣವಾಗುವುದು ಕಷ್ಟ. ಟ್ಯಾನಿನ್ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ. ಆದ್ದರಿಂದ ನೆನೆಸಿದ ಬಾದಾಮಿಯನ್ನು ತಿಂದರೆ ಅದರ ಸಿಪ್ಪೆ ಸುಲಭವಾಗಿ ಉದುರಿಹೋಗುತ್ತದೆ.


ಇದನ್ನೂ ಓದಿ-Healthy Foods: ಈ ಆಹಾರಗಳು ನಿಮ್ಮ ಆರೋಗ್ಯಕ್ಕೆ ಲಾಭಕಾರಿಯಾಗಿವೆ, ಇಂದೇ ನಿಮ್ಮ ಡಯಟ್ ನಲ್ಲಿ ಸೇರಿಸಿ

(Disclaimer:ಇಲ್ಲಿ ನೀಡಲಾಗಿರುವ ಮಾಹಿತಿ ಮನಮದ್ದು ಹಾಗೂ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.