ನವದೆಹಲಿ:  ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಸಮಯ ಕಳೆಯುವವರಿಗೆ ಈಗ ಗುಡ್ ನ್ಯೂಸ್.!. ಹೌದು, ನೀವು ಹೆಚ್ಚು ಸಮಯವನ್ನು ಇಂತಹ ವೇದಿಕೆಗಳಲ್ಲಿ ಕಳೆದದ್ದೇ ಆದಲ್ಲಿ ಅದು ನಿಮ್ಮ ಯೋಗ ಕ್ಷೇಮಕ್ಕೆ ನೆರವಾಗಲಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. 


COMMERCIAL BREAK
SCROLL TO CONTINUE READING

ಈ ಅಧ್ಯಯನದ ಪ್ರಕಾರ ಪ್ರಮುಖವಾಗಿ ವಾಟ್ಸಪ್ ನಮ್ಮ ಯೋಗ ಕ್ಷೇಮಕ್ಕೆ ನೆರವಾಗಲಿದೆ ಎಂದು ಈ ಅಧ್ಯಯನ ತಿಳಿಸಿದೆ. ಈ ಅಧ್ಯಯನವನ್ನು 'ಇಂಟರ್ನ್ಯಾಷನಲ್ ಜರ್ನಲ್ ಆಫ್ ಹ್ಯೂಮನ್-ಕಂಪ್ಯೂಟರ್ ಸ್ಟಡೀಸ್' ನಲ್ಲಿ ಪ್ರಕಟಿಸಲಾಗಿದೆ. ಸೈಕಾಲಜಿಯ ಹಿರಿಯ ಉಪನ್ಯಾಸಕ ಡಾ.ಲಿಂಡಾ ಕೇಯ್ ಬಳಕೆದಾರರಿಗೆ ಗ್ರೂಪ್  ಚಾಟ್ ವೈಶಿಷ್ಟ್ಯವನ್ನು ನೀಡುವ ಪಠ್ಯ ಆಧಾರಿತ ಮೆಸೇಜಿಂಗ್ ಅಪ್ಲಿಕೇಶನ್ ಮಾನಸಿಕ ಯೋಗಕ್ಷೇಮದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಕಂಡುಹಿಡಿದಿದೆ.


ವಾಟ್ಸಪ್ ನಲ್ಲಿ ಹೆಚ್ಚಿನ ಸಮಯವನ್ನು ಕಳೆಯುವುದರಿಂದಾಗಿ ಸ್ನೇಹಿತರ ಜೊತೆ ಹಾಗೂ ಕುಟುಂಬದ ಸದಸ್ಯರ ಜೊತೆ ಹೆಚ್ಚು ಸಮಯವನ್ನು ಕಳೆಯಬಹುದು, ಇದು ಅವರ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ ಎಂದು ಸಂಶೋಧನೆಯು ತಿಳಿಸಿದೆ. ಈಗ ತಮ್ಮ ಸಂಶೋಧನೆ ಬಗ್ಗೆ ಪ್ರತಿಕ್ರಿಯಿಸಿರುವ ಡಾ.ಕೇಯ 'ಸೋಶಿಯಲ್ ಮೀಡಿಯಾದಲ್ಲಿ ಸಮಯ ಕಳೆಯುವುದು ನಮ್ಮ ಯೋಗ ಕ್ಷೇಮಕ್ಕೆ ಕೆಟ್ಟದ್ದೇ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ, ಆದರೆ ನಾವು ಅಂದುಕೊಂಡಷ್ಟು ಕೆಟ್ಟದ್ದಲ್ಲ ಎನ್ನುವ ಅಂಶ ಈಗ ನಮ್ಮ ಸಂಶೋಧನೆಯಿಂದ ತಿಳಿದುಬಂದಿದೆ ಎಂದು ಹೇಳಿದ್ದಾರೆ.