Harmful Diet For Male Fertility : ನೀವು ವಿವಾಹಿತ ಪುರುಷನಾಗಿದ್ದರೆ, ತಪ್ಪದೆ ಈ ಸುದ್ದಿ ಓದಿ. ನೀವು ತಂದೆಯಾಗುವ ಕನಸು ಕಾಣುತ್ತಿದ್ದಾರೆ. ನಿಮ್ಮ ಫಲವತ್ತತೆಗೆ ಹಾನಿ ಮಾಡುವ ಕೆಲವು ಆಹಾರ ಅಥವಾ ಅಭ್ಯಾಸಗಳಿವೆ, ಅವುಗಳನ್ನು ಸಾಧ್ಯವಾದಷ್ಟು ಬೇಗ ಬಿಟ್ಟು ಬಿಡುವುದು ಬಹಳ ಒಳ್ಳೆಯದು. ಏಕೆಂದರೆ ಭವಿಷ್ಯದಲ್ಲಿ ನೀವು ತುಂಬಾ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.


COMMERCIAL BREAK
SCROLL TO CONTINUE READING

ಈ 3 ವಿಧದ ಆಹಾರಗಳು ವೀರ್ಯದ ಸಂಖ್ಯೆ ಕಡಿಮೆ ಮಾಡುತ್ತವೆ


ಪುರುಷರ ವೀರ್ಯದ ಎಣಿಕೆ ಮತ್ತು ವೀರ್ಯಾಣು ಗುಣಮಟ್ಟವು ಕೆಟ್ಟದಾಗಿ ಪರಿಣಾಮ ಬೀರುವ ಅನೇಕ ರೀತಿಯ ಆಹಾರಗಳಿವೆ, ಇದರಿಂದ ಪುರುಷರು ಬಂಜೆತನಕ್ಕೆ ಕಾರಣರಾಗುತ್ತಾರೆ. ವಿವಾಹಿತ ಪುರುಷನು ಯಾವ ಆಹಾರಗಳನ್ನು ಬಿಡಬೇಕು ಎಂಬುದನ್ನು ಇಲ್ಲಿ ತಿಳಿಯಿರಿ.


ಇದನ್ನೂ ಓದಿ : Flaxseed Raita : ಬೇಸಿಗೆಯಲ್ಲಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಅಗಸೆ ಬೀಜ!


ಕೊಬ್ಬಿನ ಡೈರಿ ಉತ್ಪನ್ನಗಳು


ಹಾಲನ್ನು ಸಂಪೂರ್ಣ ಆಹಾರವೆಂದು ಪರಿಗಣಿಸಲಾಗುತ್ತದೆ ಏಕೆಂದರೆ ಅದು ಎಲ್ಲಾ ರೀತಿಯ ಪೋಷಕಾಂಶಗಳನ್ನು ಹೊಂದಿರುತ್ತದೆ, ಅದಕ್ಕಾಗಿಯೇ ಆರೋಗ್ಯ ತಜ್ಞರು ಇದರ ಸೇವನೆ ಮಾಡಲು ಹೇಳುತ್ತಾರೆ. ಆದರೆ ಹೆಚ್ಚಿನ ಕೊಬ್ಬಿನ ಹಾಲಿನ ಉತ್ಪನ್ನಗಳನ್ನು ತಿನ್ನುವುದರಿಂದ ಪುರುಷರ ವೀರ್ಯದ ಗುಣಮಟ್ಟ ಹದಗೆಡುತ್ತದೆ ಎಂದರೆ ನಂಬುತ್ತೀರಾ? ಹೌದು ನಂಬಲೇಬೇಕು, ಕೆಲವೊಮ್ಮೆ ಪ್ರಾಣಿಗಳಿಗೆ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಸ್ಟೀರಾಯ್ಡ್‌ಗಳನ್ನು ನೀಡಲಾಗುತ್ತದೆ, ಇದು ವೀರ್ಯದ ಆರೋಗ್ಯಕ್ಕೆ ಉತ್ತಮವಲ್ಲ, ಆದ್ದರಿಂದ ಹಾಲಿನ ಉತ್ಪನ್ನಗಳನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿ, ವಿಶೇಷವಾಗಿ ಅದರಲ್ಲಿ ಹೆಚ್ಚಿನ ಕೊಬ್ಬು ನಿಮ್ಮ ಪುರುಷತ್ವಕ್ಕೆ ಹಾನಿ ಮಾಡುತ್ತದೆ.


ಸಂಸ್ಕರಿಸಿದ ಮಾಂಸ


ನೀವು ಬೆಲ್ಲಿ ಪ್ಲ್ಯಾನಿಂಗ್ ಮಾಡುತ್ತಿದ್ದರೆ ಮತ್ತು ಮುಂದಿನ ಒಂದು ವರ್ಷದೊಳಗೆ ತಂದೆಯಾಗಲು ಬಯಸಿದರೆ, ಇಂದೆ ಸಂಸ್ಕರಿಸಿದ ಮಾಂಸದ ಸೇವನೆಯನ್ನು ಕಡಿಮೆ ಮಾಡಿ. ಇದನ್ನು ತಿನ್ನುವುದರಿಂದ ಪ್ರೋಟೀನ್ ಸಿಗಬಹುದು, ಆದರೆ ಇದು ವೀರ್ಯದ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಮತ್ತು ಹಾಗೆ, ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಸೃಷ್ಟಿಸುತ್ತದೆ. ವೀರ್ಯ ಚಲನಶೀಲತೆಯನ್ನು ಹೆಚ್ಚಿಸಲು, ಈ ರೀತಿಯ ಮಾಂಸವನ್ನು ದೈನಂದಿನ ಆಹಾರದಿಂದ ದೂರವಿಡಿ. ಅಲ್ಲದೆ, ಮಾರುಕಟ್ಟೆಯಲ್ಲಿ ಲಭ್ಯವಿರುವ ಮಾಂಸಾಹಾರಿ ಆಹಾರಗಳಿಂದ ದೂರವಿರಿ, ಏಕೆಂದರೆ ಅವುಗಳನ್ನು ಹೆಚ್ಚಾಗಿ ಸಂಸ್ಕರಿಸಬಹುದು.


ಇದನ್ನೂ ಓದಿ : ಬಹು ಬೇಗನೇ ತೂಕ ಇಳಿಸಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ ಈ ಹಣ್ಣು ..!


ಧೂಮಪಾನ ಮತ್ತು ಮಧ್ಯಪಾನ


ಭಾರತದಲ್ಲಿ, ಅನೇಕ ಜನ ಸಿಗರೇಟ್ ಮತ್ತು ಮಧ್ಯಪಾನದ ದಾಸರಾಗಿದ್ದಾರೆ. ಇದರಲ್ಲಿ ಪುರುಷರ ಸಂಖ್ಯೆ ತುಲನಾತ್ಮಕವಾಗಿ ಹೆಚ್ಚು. ಆರೋಗ್ಯ ತಜ್ಞರ ಪ್ರಕಾರ, ನೀವು ನಿಯಮಿತವಾಗಿ ಸಿಗರೇಟ್ ಮತ್ತು ಮದ್ಯಪಾನ ಮಾಡುತ್ತಿದ್ದರೆ, ಅದು ಟೆಸ್ಟೋಸ್ಟೆರಾನ್ ಹಾರ್ಮೋನ್ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಮತ್ತು ತಂದೆಯಾಗುವ ಕನಸು ಅಪೂರ್ಣವಾಗಿ ಉಳಿಯಬಹುದು. ಇದು ನಿಮ್ಮ ಪುರುಷತ್ವಕ್ಕೆ ತುಂಬಾ ಹಾನಿ ಉಂಟು ಮಾಡುತ್ತದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.