Nutrients of Spinach: ಚಳಿಗಾಲದ ಕಾಲ ಬಂತೆಂದರೆ ಸಾಕು ಮಾರುಕಟ್ಟೆಗಳಲ್ಲಿ ಸಾಕಷ್ಟು ಹಸಿರು ತರಕಾರಿಗಳು ಲಗ್ಗೆ ಇಡುತ್ತವೆ. ಈ ಋತುವಿನಲ್ಲಿ ಸಾಮಾನ್ಯವಾಗಿ ಪಾಲಕ ತರಕಾರಿಯನ್ನು ನೀವು ಎಲ್ಲೆಡೆ ಕಾಣಬಹುದು. ಕೆಲವರಿಗೆ ಪಾಲಕ್ ಸೊಪ್ಪು ತಿನ್ನಲು ಇಷ್ಟವಾಗುವುದಿಲ್ಲ. ಪಾಲಕ್ ಅಥವಾ ಪಾಲಕ್ ಸೊಪ್ಪಿನ ರಸವನ್ನು ಚಳಿಗಾಲದಲ್ಲಿ ಸೇವಿಸುವುದರಿಂದ ನೀವು ಹಲವಾರು ಗಂಭೀರ ಕಾಯಿಲೆಗಳ ಅಪಾಯವನ್ನು ತಪ್ಪಿಸಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ, ಮೆಗ್ನೀಸಿಯಮ್, ಮ್ಯಾಂಗನೀಸ್ ಮತ್ತು ಕಬ್ಬಿಣದಂತಹ ಆಂಟಿ-ಆಕ್ಸಿಡೆಂಟ್‌ಗಳು ಇದರಲ್ಲಿ ಹೇರಳ ಪ್ರಮಾಣದಲ್ಲಿ ಕಂಡುಬರುತ್ತವೆ. ಪಾಲಕ್ ಸೊಪ್ಪನ್ನು ತಿನ್ನುವುದರಿಂದ ದೃಷ್ಟಿ ಚುರುಕಾಗುತ್ತದೆ ಮತ್ತು ಇದರಲ್ಲಿರುವ ವಿಟಮಿನ್ ಸಿ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.


COMMERCIAL BREAK
SCROLL TO CONTINUE READING

ಪಾಲಕ ಸೊಪ್ಪಿನ ಇತರ ಪ್ರಯೋಜನಗಳು


1. ಚಳಿಗಾಲದಲ್ಲಿ ಪಾಲಕ್ ಸೊಪ್ಪನ್ನು ಬಳಸುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದರಲ್ಲಿ ಹೇರಳ ಪ್ರಮಾಣದಲ್ಲಿ ಕ್ಯಾಲ್ಸಿಯಂ, ಸೋಡಿಯಂ, ಕ್ಲೋರಿನ್, ರಂಜಕ, ಪ್ರೋಟೀನ್ ಮತ್ತು ಕಬ್ಬಿಣ ಇರುತ್ತದೆ. ಪಾಲಕ್ ರಸವು ಅನೇಕ ಗಂಭೀರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ನಾರಿನಂಶವೂ ಹೆಚ್ಚಾಗಿದ್ದು, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ದೂರ ಮಾಡುತ್ತದೆ. ಇದು ಮಲಬದ್ಧತೆ, ಅಜೀರ್ಣ ಮತ್ತು ಹೊಟ್ಟೆ ನೋವಿನಿಂದಲೂ ಪರಿಹಾರ ನೀಡುತ್ತದೆ.


2. ಇದರಲ್ಲಿರುವ ಕಬ್ಬಿಣಾಂಶವು ದೇಹದಲ್ಲಿ ರಕ್ತವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪಾಲಕ್ ರಸವು ರಕ್ತಹೀನತೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಇದರ ರಸವು ಸ್ಮರಣಶಕ್ತಿಯನ್ನು ಸುಧಾರಿಸಿ ಅದನ್ನು ತೀಕ್ಷ್ಣಗೊಳಿಸುತ್ತದೆ. ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿರುವವರು ಪಾಲಕ್ ಸೊಪ್ಪಿನ ರಸವನ್ನು ಕುಡಿಯಬೇಕು. ಇದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಇದರಲ್ಲಿರುವ ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸುತ್ತದೆ.


ಇದನ್ನೂ ಓದಿ-Winter Health Tips : ಚಳಿಗಾಲದಲ್ಲಿ ಸೇವಿಸಿ ಶುಂಠಿ ಕಷಾಯ : ಈ ರೋಗಗಳಿಂದ ಪರಿಹಾರ ಸಿಗುತ್ತದೆ!


3. ಪಾಲಕ್ ರಸವು ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ, ದೇಹದಲ್ಲಿ ಕೊಬ್ಬು ಸಂಗ್ರಹವಾಗುವುದಿಲ್ಲ ಮತ್ತು ತೂಕವು ವೇಗವಾಗಿ ಇಳಿಕೆಯಾಗಲು ಪ್ರಾರಂಭಿಸುತ್ತದೆ. ನೀವು ಪಾಲಕ್ ರಸವನ್ನು ಕಪ್ಪು ಜೀರಿಗೆ ಪುಡಿ ಮತ್ತು ಉಪ್ಪಿನೊಂದಿಗೆ ಸೇವಿಸಬಹುದು.


ಇದನ್ನೂ ಓದಿ-Dry Dates Benefits : ಚಳಿಗಾಲದಲ್ಲಿ ತಪ್ಪದೆ ಸೇವಿಸಿ ಎರಡು ಖರ್ಜೂರ : ಇದರಿಂದ ಬೆಚ್ಚಗಿರುತ್ತೆ ದೇಹ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.