Spirulina Health Benefits: ಆರೋಗ್ಯ ಸಂಜೀವನಿ `ಸ್ಪಿರುಲಿನಾ` ಬಗ್ಗೆ ನಿಮಗೆಷ್ಟು ಗೊತ್ತು?
Spirulina Health Benefits: ಸ್ಪಿರುಲಿನಾ ಹೆಸರಿನ ಪಾಚಿ ಹಲವು ರೋಗ ಲಕ್ಷಣಗಳನ್ನು ಸುಧಾರಿಸುತ್ತೆ. ಇದರಲ್ಲಿ ಅಂಟಿಅಲರ್ಜಿಕ್, ಅಂಟಿಕ್ಯಾನ್ಸರ್, ಅಂಟಿವೈರಲ್, ಅಂಟಿಟ್ಯೂಮರ್, ಅಂಟಿಡೈಯಾಬಿಬಿಟಿಕ್ ಹಾಗೂ ಜೀವಾಣುವಿರೋಧಿ ಗುಣಗಳಿವೆ. ಹಾಗಾದರೆ ಸ್ಪಿರುಲಿನಾನಿಂದಾಗುವ ಆರೋಗ್ಯ ಲಾಭಗಳ ಕುರಿತು ತಿಳಿದುಕೊಳ್ಳೋಣ ಬನ್ನಿ.
Health Benefits Of Spirulina - ಸ್ಪಿರುಲಿನಾ ಒಂದು ನೀಲಿ-ಹಸಿರು ಬಣ್ಣದ ಪಾಚಿಯಾಗಿದ್ದು, ಇದನ್ನು ಮನುಷ್ಯರಲ್ಲಿ ಯಾವುದೇ ಗಮನಾರ್ಹ ಅಡ್ಡಪರಿಣಾಮಗಳಿಲ್ಲದೆ ಪ್ರೋಟೀನ್ ಮತ್ತು ವಿಟಮಿನ್ ಪೂರಕಗಳ ಮೂಲದ ರೂಪದಲ್ಲಿ ಬಳಸಲಾಗುತ್ತದೆ. ಸ್ಪಿರುಲಿನಾವು ತೇವಾಂಶವುಳ್ಳ ಮಣ್ಣು, ಮಿಶ್ರಲೋಹ ಲವಣಯುಕ್ತ ನೀರು, ಮರಗಳ ತೊಗಟೆ ಮತ್ತು ತೇವಾಂಶವುಳ್ಳ ಗೋಡೆಗಳ ಮೇಲೆ ಹಸಿರು, ಕಂದು ಅಥವಾ ಕೆಲವು ಕಪ್ಪು ಪದರಗಳ ರೂಪದಲ್ಲಿ ಕಂಡುಬರುತ್ತದೆ. ಇದು ಕ್ಷಾರೀಯ ಸರೋವರಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ವಿಶ್ವಾದ್ಯಂತ ಇದನ್ನು ಭಾರತ, ಗ್ರೀಸ್, ಜಪಾನ್, ಅಮೇರಿಕಾ ಮತ್ತು ಸ್ಪೇನ್ ಇತ್ಯಾದಿಗಳಲ್ಲಿ ಮಾತ್ರ ಬೆಳೆಯಲಾಗುತ್ತದೆ. ಸ್ಪಿರುಲಿನಾವು ಅತ್ಯಧಿಕ ಪ್ರೋಟೀನ್ ಅನ್ನು ಹೊಂದಿದೆ, ಸುಮಾರು ಶೇ. 70 ರಷ್ಟು ಪ್ರೋಟೀನ್ ಇರುವ ಇದರಲ್ಲಿ ವಿಟಮಿನ್ ಬಿ 12, ಪ್ರೊವಿಟಮಿನ್ ಎ, ಖನಿಜಗಳು, ಕಬ್ಬಿಣದ ಅಂಶಗಳು ಅತ್ಯಧಿಕ ಪ್ರಮಾಣದಲ್ಲಿ ಕಂಡುಬರುತ್ತವೆ. ಈ ಪಾಚಿ ಅನೇಕ ರೋಗಗಳ ಲಕ್ಷಣಗಳನ್ನು ಸುಧಾರಿಸುತ್ತದೆ. ಇದು ಆಂಟಿಅಲರ್ಜಿಕ್, ಆಂಟಿಕ್ಯಾನ್ಸರ್, ಆಂಟಿವೈರಲ್, ಆಂಟಿಟ್ಯೂಮರ್, ಆಂಟಿಆಕ್ಸಿಡೆಂಟ್, ಆಂಟಿಡಯಾಬಿಟಿಕ್ ಮತ್ತು ಆಂಟಿಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದೆ. ಸ್ಪಿರುಲಿನಾದ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ
ಅಂಟಿಆಕ್ಸಿಡೆಂಟ್ ಹಾಗೂ ಅಂಟಿಇನ್ಫ್ಲೇಮೆಟರಿಗಳ ಆಗರ ಸ್ಪಿರುಲಿನಾ
ಸ್ಪಿರುಲಿನಾದಲ್ಲಿ ಫೈಕೊಸೈನಿನ್ ಎಂಬ ಉತ್ಕರ್ಷಣ ನಿರೋಧಕವಿದೆ. ಇದರಿಂದಲೇ ಸ್ಪಿರುಲಿನಾಗೆ ನೀಲಿ-ಹಸಿರು ಬಣ್ಣವನ್ನು ಇರುತ್ತದೆ. ಅಷ್ಟೇ ಅಲ್ಲ, ಫೈಕೋಸೈನಿನ್ ನಮ್ಮ ದೇಹದಲ್ಲಿ ಇರುವ ರಾಡಿಕಲ್ಗಳೊಂದಿಗೆ ಹೋರಾಡುತ್ತದೆ ಮತ್ತು ನಮ್ಮ ದೇಹಕ್ಕೆ ಆಗುವ ಹಾನಿಯನ್ನು ಸರಿದೂಗಿಸುತ್ತದೆ.
ಬಾಯಿಯ ಕ್ಯಾನ್ಸರ್ ಬರುವ ಅಪಾಯವನ್ನು ಕಡಿಮೆ ಮಾಡುತ್ತದೆ
ಕೆಲವು ಅಧ್ಯಯನಗಳು, ಸ್ಪಿರುಲಿನಾದಲ್ಲಿ ವಿಶೇಷವಾಗಿ ಬಾಯಿಯ ಕ್ಯಾನ್ಸರ್ನಲ್ಲಿ ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ ಎಂದು ಹೇಳಿವೆ. ಬಾಯಿಯ ಸಬ್‌ಮ್ಯೂಕಸ್ ಫೈಬ್ರೋಸಿಸ್ ಅನ್ನು ಎದುರಿಸಲು ಸ್ಪಿರುಲಿನಾದ ಸೇವನೆ ಸಹಾಯ ಮಾಡುತ್ತದೆ ಎಂಬ ಅಂಶವನ್ನು ವಿವಿಧ ಪ್ರಯೋಗಗಳು ಸೂಚಿಸುತ್ತವೆ.
ಇದನ್ನೂ ಓದಿ-ಹೃದಯಾಘಾತದ ಅಪಾಯದಿಂದ ಪಾರಾಗಲು ತಪ್ಪದೇ ಸೇವಿಸಿ ಈ ಡ್ರೈ ಫ್ರೂಟ್
ಹ್ರುದ್ರೋಗವನ್ನು ತಡೆಯುತ್ತದೆ
ತಜ್ಞರ ಪ್ರಕಾರ ಸ್ಪಿರುಲಿನಾ ಹೃದ್ರೋಗವನ್ನೂ ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ ಇದರ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಬಹುದು, ಟ್ರೈಗ್ಲಿಸರೈಡ್ ಗಳನ್ನು ನಿಯಂತ್ರಣದಲ್ಲಿ ಇಡಬಹುದು. ಇದೇ ಕಾರಣದಿಂದಾಗಿ ಸ್ಪಿರುಲಿನಾ ಸೇವನೆ ಹೃದಯರಕ್ತನಾಳದ ಸಮಸ್ಯೆ ನಿವಾರಣೆಗೆ ಸಹಕಾರಿಯಾಗಿದೆ.
ಇದನ್ನೂ ಓದಿ-Heart Attack Risk: ಈ ಸೊಪ್ಪಿನ ಸೇವನೆಯಿಂದ ಕಡಿಮೆ ಆಗುತ್ತೆ ಹೃದಯಾಘಾತದ ಅಪಾಯ
ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ
ಹಲವು ಅಧ್ಯಯನಗಳ ಪ್ರಕಾರ, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸ್ಪಿರುಲಿನಾ ಅತ್ಯುತ್ತಮ ಆಹಾರಗಳಲ್ಲಿ ಒಂದಾಗಿದೆ. ಟೈಪ್-2 ಡಯಾಬಿಟಿಸ್ ರೋಗಿಗಳ ಮೇಲೆ ನಡೆಸಿದ ಅಧ್ಯಯನಗಳು ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸ್ಪಿರುಲಿನಾ ಸಹಾಯಕವಾಗಿದೆ ಎಂದು ದೃಢಪಡಿಸಿವೆ. ಇದರ ಸೇವನೆಯಿಂದ ರಕ್ತದೊತ್ತಡ ಮತ್ತು ರಕ್ತಹೀನತೆಯನ್ನೂ ನಿವಾರಿಸಿಕೊಳ್ಳಬಹುದು.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ