SputnikV Precaution Dose: ದೇಶಾದ್ಯಂತ ಕೊರೊನಾ ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚಾಗುತ್ತಿವೆ. ಹೀಗಾಗಿ ತ್ವರಿತ ವ್ಯಾಕ್ಸಿನೇಷನ್ಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದೀಗ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ ಸ್ಪುಟ್ನಿಕ್ ವಿ ಲಸಿಕೆ ಬಗ್ಗೆ ನಿರ್ಧಾರ ಕೈಗೊಂಡಿದೆ. ಇದರಲ್ಲಿ ಸ್ಪುಟ್ನಿಕ್ ವಿ ಅನ್ನು ಕರೋನಾ ತಡೆಗಟ್ಟುವ ಡೋಸ್ ಆಗಿ ತೆಗೆದುಕೊಳ್ಳಬಹುದು ಎಂದು ಹೇಳಲಾಗಿದೆ, ಆದರೆ ಈಗಾಗಲೇ ಯಾವ ಲಸಿಕೆಯನ್ನು ಮೊದಲನೆಯ ಲಸಿಕೆಯಾಗಿ ಬಳಸಲಾಗಿದೆಯೋ ಅದನ್ನೇ ಮೂರನೇ ಡೋಸ್ ಆಗಿ ಬಳಸಲಾಗುತ್ತದೆ. ಅಂದರೆ, ಎರಡು ಡೋಸ್ ಸ್ಪುಟ್ನಿಕ್ ತೆಗೆದುಕೊಂಡವರಿಗೆ ಮೂರನೇ ಡೋಸ್ ಕೂಡ ಸ್ಪುಟ್ನಿಕ್ ಆಗಿರಬೇಕು.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Covid 19 Booster Dose: April 10 ರಿಂದ 18+ ಎಲ್ಲರಿಗೂ ಕೂಡ Booster Dose ಲಸಿಕೆಯ ಅಭಿಯಾನ ಆರಂಭ, ಆದರೆ ಈ ಷರತ್ತು ಅನ್ವಯಿಸಲಿದೆ

ಸ್ಪುಟ್ನಿಕ್ ತೆಗೆದುಕೊಳ್ಳುವ ಜನರಿಗೆ ತೊಂದರೆ
ಸ್ಪುಟ್ನಿಕ್ ಲಸಿಕೆ ತೆಗೆದುಕೊಂಡ ಜನರಲ್ಲಿ ಮೂರನೇ ಡೋಸ್ ಬಗ್ಗೆ ಇದುವರೆಗೆ ಗೊಂದಲವಿತ್ತು. ಏಕೆಂದರೆ ಕೋವಿನ್ ಆ್ಯಪ್‌ನಲ್ಲಿ ಮುನ್ನೆಚ್ಚರಿಕೆ ಡೋಸ್‌ಗಾಗಿ ಸ್ಪುಟ್ನಿಕ್ ಆಯ್ಕೆ ಕಾಣಿಸಿಕೊಂಡಿರಲಿಲ್ಲ. ಕಳೆದ ವರ್ಷ ರಷ್ಯಾದ ಲಸಿಕೆ ಸ್ಪುಟ್ನಿಕ್‌ನ ಎರಡೂ ಡೋಸ್‌ಗಳನ್ನು ಪಡೆದ ಲಕ್ಷಾಂತರ ಜನರು ಮೂರನೇ ಡೋಸ್ ವಿಷಯದಲ್ಲಿ ಗೊಂದಲಕ್ಕೆ ಒಳಗಾಗಿದ್ದರು. ಏಕೆಂದರೆ ಸ್ಪುಟ್ನಿಕ್‌ನ ಎರಡು ಡೋಸ್‌ಗಳ ನಡುವಿನ ವ್ಯತ್ಯಾಸವು ಸುಮಾರು 30 ದಿನಗಳದ್ದಾಗಿದೆ, ಆದ್ದರಿಂದ ಜನರು ಎರಡನ್ನೂ ಒಂದು ತಿಂಗಳ ಅವಧಿಯಲ್ಲಿ ತೆಗೆದುಕೊಂಡಿದ್ದರು.


ಇದನ್ನೂ ಓದಿ-Covid-19 Vaccination: ಅಗತ್ಯ ಬಿದ್ದರೆ ರಾತ್ರಿ 10ಗಂಟೆಯವರೆಗೆ ವ್ಯಾಕ್ಸಿನ್ ಕೇಂದ್ರಗಳನ್ನು ತೆರೆಯಲಾಗುವುದು

ಬೂಸ್ಟರ್ ಡೋಸ್ ಅಂತರ ಕಡಿಮೆಯಾಗಲಿಲ್ಲ
ಕರೋನಾ ಎರಡನೇ ಮತ್ತು ಮೂರನೇ ಡೋಸ್ ನಡುವಿನ ವ್ಯತ್ಯಾಸವನ್ನು ಕಡಿಮೆ ಮಾಡಲು ಈ ಸಭೆಯಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ. ಬೂಸ್ಟರ್ ಡೋಸ್ ತೆಗೆದುಕೊಳ್ಳುವ ನಡುವಿನ ಅಂತರವನ್ನು ಕಡಿಮೆಯಾಗಬಹುದು ಎಂದು ಈ ಮೊದಲು ನಿರೀಕ್ಷಿಸಲಾಗುತ್ತಿತ್ತು. ಏಕೆಂದರೆ ಕೊರೊನಾ ಮೂರನೇ ಡೋಸ್ ಅನ್ನು ಎರಡನೇ ಡೋಸ್ ತೆಗೆದುಕೊಂಡ 9 ತಿಂಗಳ ನಂತರ ಪಡೆಯಬಹುದು ಎಂದು ಸರ್ಕಾರ ಈ ಹಿಂದೆ ನಿರ್ದೇಶಿಸಿತ್ತು. ಇದು ಬಹಳ ದೊಡ್ಡ ಅಂತರವಾಗಿದ್ದ ಕಾರಣ ಎಲ್ಲಾ ತಜ್ಞರು ಅದನ್ನು ಕಡಿಮೆ ಮಾಡಲು ಒತ್ತಾಯಿಸಿದ್ದರು. ಸೀರಮ್ ಇನ್‌ಸ್ಟಿಟ್ಯೂಟ್ ಸಿಇಒ ಆದರ್ ಪೂನಾವಾಲಾ ಅವರು ಅಂತರವನ್ನು ಕಡಿಮೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಇದರಲ್ಲಿ ಎರಡು ಲಸಿಕೆ ಪ್ರಮಾಣಗಳ ನಡುವಿನ ವ್ಯತ್ಯಾಸವನ್ನು 9 ತಿಂಗಳಿಂದ 6 ತಿಂಗಳವರೆಗೆ ಇಳಿಕೆ ಮಾಡಬೇಕು ಎಂದು ಅವರು ಸರ್ಕಾರವನ್ನು ಕೋರಿದ್ದರು. 


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.