ಈ ಅಭ್ಯಾಸಗಳಿಂದ ದೂರವಿದ್ದರೆ ಕಿಡ್ನಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು
ಒಂದೊಮ್ಮೆ ಮೂತ್ರಪಿಂಡ ವೈಫಲ್ಯವಾದಲ್ಲಿ ಡಯಾಲಿಸಿಸ್ ಮೊರೆ ಹೋಗಬೇಕಾಗುತ್ತದೆ. ನಾವು ಮಾಡುವ ತಪ್ಪುಗಳಿಂದಲೇ ಮೂತ್ರ ಪಿಂಡ ವೈಫಲ್ಯವಾಗುತ್ತದೆ. ನಾವು ಅನುಸರಿಸುವ ಕೆಲವು ಅಭ್ಯಾಸಗಳು ಕಿಡ್ನಿ ಆರೋಗ್ಯ ಹಾಳಾಗಲು ಪ್ರಮುಖವಾಗಿ ಕಾರಣವಾಗುತ್ತದೆ.
ಬೆಂಗಳೂರು : ಈಗ ಪ್ರತಿಯೊಬ್ಬರದ್ದೂ ಬ್ಯುಸಿ ಲೈಫ್. ಈ ಬಿಡುವಿಲ್ಲದ ಜೀವನಕ್ಕೆ ತಕ್ಕಂತೆ ನಮ್ಮ ಜೀವನ ಶೈಲಿ ಕೂಡಾ ಬದಲಾಗಿರುತ್ತದೆ. ಇಲ್ಲಿ ನಾವು ಸೇವಿಸುವ ಆಹಾರದ ಗುಣಮಟ್ಟಕ್ಕೆ ಗಮನ ಕೊಡುವುದಿಲ್ಲ. ಜಂಕ್ ಫುಡ್ ಗಳತ್ತ ಹೆಚ್ಚು ಹೆಚ್ಚು ವಾಲುತ್ತಿದ್ದೇವೆ. ಈ ಎಲ್ಲಾ ಕಾರಣಗಳು ಒಟ್ಟಾಗಿ ನಮ್ಮ ದೇಹದ ಅಂಗಾಗಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಮಗೆ ಗೊತ್ತಿಲ್ಲದಂತೆ ನಾವು ಅನುಸರಿಸುವ ಕೆಲವೊಂದು ಹವ್ಯಾಸಗಳಿಂದ ನಮ್ಮ ಮೂತ್ರ ಪಿಂಡದ ಆರೋಗ್ಯ ಹದಗೆಡುತ್ತದೆ.
ಕಿಡ್ನಿ ನಮ್ಮ ದೇಹದ ಬಹುಮುಖ್ಯ ಅಂಗವಾಗಿದೆ. ನಮ್ಮ ದೇಹದಲ್ಲಿರುವ ಕಲ್ಮಶವನ್ನು ಶೋಧಿಸಿ ದೇಹದಿಂದ ಹೊರ ಹಾಕುವ ಕೆಲಸವನ್ನು ಕಿಡ್ನಿ ಮಾಡುತ್ತದೆ. ಒಂದು ವೇಳೆ ಕಿಡ್ನಿ ಸರಿಯಾಗಿ ಕೆಲಸ ಮಾಡದೇ ಹೋದಲ್ಲಿ ನಮ್ಮ ದೇಹದಲ್ಲಿ ವಿಷಕಾರಿ ಅಂಶಗಳು ಸಂಗ್ರಹಗೊಳ್ಳಲು ಪ್ರಾರಂಭಿಸುತ್ತವೆ. ಇದರಿಂದಾಗಿ ವಿವಿಧ ರೋಗಗಳು ಹರಡುವ ಸಾಧ್ಯತೆ ಕೂಡಾ ಹೆಚ್ಚಾಗುತ್ತದೆ. ಒಂದೊಮ್ಮೆ ಮೂತ್ರಪಿಂಡ ವೈಫಲ್ಯವಾದಲ್ಲಿ ಡಯಾಲಿಸಿಸ್ ಮೊರೆ ಹೋಗಬೇಕಾಗುತ್ತದೆ. ನಾವು ಮಾಡುವ ತಪ್ಪುಗಳಿಂದಲೇ ಮೂತ್ರ ಪಿಂಡ ವೈಫಲ್ಯವಾಗುತ್ತದೆ. ನಾವು ಅನುಸರಿಸುವ ಕೆಲವು ಅಭ್ಯಾಸಗಳು ಕಿಡ್ನಿ ಆರೋಗ್ಯ ಹಾಳಾಗಲು ಪ್ರಮುಖವಾಗಿ ಕಾರಣವಾಗುತ್ತದೆ. ಅವುಗಳೆಂದರೆ :
ಇದನ್ನೂ ಓದಿ : ಸ್ನಾನದ ಬಳಿಕ ಟವಲ್ ಸುತ್ತಿಕೊಳ್ಳುವ ಅಭ್ಯಾಸ ನಿಮಗೂ ಇದೆಯಾ ? ಈ ರೋಗಗಳ ಅಪಾಯ ತಪ್ಪಿದ್ದಲ್ಲ
1. ಮೂತ್ರವನ್ನು ದೀರ್ಘಕಾಲದವರೆಗೆ ಹಿಡಿದಿಟ್ಟುಕೊಳ್ಳುವುದು : ಸಾಮಾನ್ಯವಾಗಿ ನಾವು ಪ್ರಯಾಣ ಮಾಡುವಾಗ ಅಥವಾ ನಿದ್ದೆಯ ಮಧ್ಯೆ ಏಳಲು ಮನಸ್ಸಾಗದೆ ಬಹಳ ಹೊತ್ತಿನವರೆಗೆ ಮೂತ್ರ ಮಾಡುವುದಿಲ್ಲ. ಅಂದರೆ ಮೂತ್ರವನ್ನು ತಡೆದು ನಿಲ್ಲಿಸಿರುತ್ತೇವೆ. ಇನ್ನು ಎಲ್ಲೋ ಹೊರಗೆ ಹೋದಾಗ ಅಲ್ಲಿ ಶೌಚಾಲಯಗಳು ಇಲ್ಲದಿದ್ದರೆ ಬೇರೆ ದಾರಿಯಿಲ್ಲದೆ ಮೂತ್ರ ವಿಸರ್ಜನೆಗೆ ಹೋಗದೆ ತಡೆದು ನಿಲ್ಲಿಸಬೇಕಾಗುತ್ತದೆ. ಆದರೆ ಈ ರೀತಿ ಮಾಡುವುದರಿಂದ ಮೂತ್ರಪಿಂಡದ ಮೇಲೆ ಒತ್ತಡ ಉಂಟಾಗುತ್ತದೆ. ಇದು ಕ್ರಮೇಣ ಮೂತ್ರ ಪಿಂಡದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
2. ಕಡಿಮೆ ನೀರು ಕುಡಿಯುವುದು: ನಮ್ಮ ದೇಹದ ಶೇ ೭೦ ರರಷ್ಟು ಭಾಗ ನೀರಿನಿಂದ ಕೂಡಿದೆ ಎಂದು ಹೇಳಲಾಗುತ್ತದೆ. ಆದ್ದರಿಂದ ದಿನವಿಡೀ ದೇಹವನ್ನು ತೇವಾಂಶದಿಂದ ಇಡುವುದು ಬಹಳ ಮುಖ್ಯ. ದೇಹದಲ್ಲಿ ನೀರಿನ ಪ್ರಮಾಣ ಸರಿಯಾಗಿ ಇದ್ದರೆ ಮಾತ್ರ ಎಲ್ಲಾ ಅಂಗಗಳು ಸರಿಯಾಗಿಕೆಲಸ ಮಾಡುವುದು ಸಾಧ್ಯವಾಗುತ್ತದೆ. ದೇಹದಲ್ಲಿ ನೀರಿನ ಕೊರತೆಯಾದರೆ, ವಿಷಕಾರಿ ಅಂಶಗಳು ಹೊರಬರಲು ಸಾಧ್ಯವಾಗುವುದಿಲ್ಲ. ವಿಷಕಾರಿ ಅಂಶಗಳನ್ನು ಸ್ವಚ್ಚಗೊಳಿಸುವುದು ಕಿಡ್ನಿಗೆ ಕಷ್ಟವಾಗುತ್ತದೆ. ಇದರಿಂದಾಗಿ ಕಿಡ್ನಿ ಸ್ಟೋನ್ ಆಗುವ ಸಾಧ್ಯತೆಯೂ ಹೆಚ್ಚುತ್ತದೆ.
ಇದನ್ನೂ ಓದಿ : ಈ ನಾಲ್ಕು ಸಮಸ್ಯೆ ಇದ್ದವರಿಗೆ ವಿಷವಾಗಿ ಪರಿಣಮಿಸಬಹುದು ನೆಲ್ಲಿಕಾಯಿ.!
3. ಕಿಡ್ನಿ ಆರೋಗ್ಯಕ್ಕೆ ಒಳಿತಲ್ಲ ಎಂದಿರುವ ಆಹಾರಗಳಿಂದ ದೂರವಿರಿ : ಮೂತ್ರಪಿಂಡದ ಆರೋಗ್ಯ ನಾವು ಸೇವಿಸುವ ಆಹಾರದ ಮೇಲೆ ನಿರ್ಧರಿತವಾಗಿರುತ್ತದೆ. ಹಸಿರು ತರಕಾರಿಗಳು, ತಾಜಾ ಹಣ್ಣುಗಳು, ಹಣ್ಣಿನ ರಸಗಳಂತಹ ಆರೋಗ್ಯಕರ ಪದಾರ್ಥಗಳು ಕಿಡ್ನಿ ಆರೋಗ್ಯವನ್ನು ಕಾಪಾಡುತ್ತವೆ. ಅದು ಬಿಟ್ಟು ಸಾಸೇಜ್, ಹಾಟ್ ಡಾಗ್ಸ್, ರೆಡ್ ಮೀಟ್ ಬರ್ಗರ್, ಪಿಜ್ಜಾ ಮತ್ತು ಸಂಸ್ಕರಿಸಿದ ಆಹಾರ ವಸ್ತುಗಳನ್ನು ಸೇವಿಸಿದರೆ, ಅದು ಮೂತ್ರಪಿಂಡಗಳ ಮೇಲೆ ನೇರ ಪರಿಣಾಮ ಬೀರುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.