ಬೆಂಗಳೂರು : ಮಧುಮೇಹ ಅಂದರೆ ರಕ್ತದಲ್ಲಿ ಗ್ಲೂಕೋಸ್, ಅಥವಾ ಸಕ್ಕರೆ ಮಟ್ಟ  ಅಧಿಕವಾದಾಗ ಕಾಣಿಸಿಕೊಳ್ಳುವ ಕಾಯಿಲೆ. ವ್ಯಕ್ತಿಯ ಶರೀರ ಸಾಕಷ್ಟು ಇನ್ಸುಲಿನ್ ಹಾರ್ಮೋನ್ ಉತ್ಪಾದಿಸದಿದ್ದರೆ ಅಥವಾ ದೇಹವು ಇನ್ಸುಲಿನ್-ಗೆ ಸರಿಯಾಗಿ  ಪ್ರತಿಕ್ರಿಯೆ ನೀಡದಿದ್ದಲ್ಲಿ ಮಧುಮೇಹ  ಸಮಸ್ಯೆ ಕಾಡುತ್ತದೆ. ಮಧುಮೇಹದಲ್ಲಿ ಎರಡು ಸಾಮಾನ್ಯ ವಿಧಗಳಿವೆ. ಟೈಪ್ ಒನ್ ಮಧುಮೇಹದಲ್ಲಿ ಮೇದೋಜೀರಕ ಗ್ರಂಥಿಯು ಇನ್ಸುಲಿನ್ ಉತ್ಪಾದಿಸುವಲ್ಲಿ ವಿಫಲವಾಗುತ್ತದೆ. ಟೈಪ್  2 ಡಯಾಬಿಟಿಸ್ ನಲ್ಲಿ  ದೇಹವು ಇನ್ಸುಲಿನ್ ಗೆ ಸರಿಯಾಗಿ  ಪ್ರತಿಕ್ರಿಯಿಸುವುದಿಲ್ಲ.  ಹೀಗಾಗಿ ಮೇದೋಜೀರಕ ಗ್ರಂಥಿಗೆ ದೇಹಕ್ಕೆ ಅವಶ್ಯವಾದ ಪ್ರಮಾಣದಲ್ಲಿ ಇನ್ಸುಲಿನ್ ಉತ್ಪಾದಿಸಲು ಸಾಧ್ಯವಾಗದಿದ್ದಾಗ ರಕ್ತದಲ್ಲಿ ಸಕ್ಕರೆಯ ಮಟ್ಟ ಅಧಿಕವಾಗುತ್ತದೆ. ಬಹುತೇಕ ಮಂದಿ ಟೈಪ್ 2 ಡಯಾಬಿಟೀಸ್ ನಿಂದಲೇ ಬಳಲುತ್ತಿರುತ್ತಾರೆ.


COMMERCIAL BREAK
SCROLL TO CONTINUE READING

ಮೊದಲೇ ಹೇಳಿದಂತೆ ಮಧುಮೇಹ ರೋಗಿಗಳಲ್ಲಿ ದೇಹದಲ್ಲಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ ದೇಹದ ಅನೇಕ ಭಾಗಗಳು ಮತ್ತು ಅಂಗಗಳಲ್ಲಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ.   ಮಧುಮೇಹ ನಿಯಂತ್ರಣದಲ್ಲಿಲ್ಲದಿದ್ದರೆ, ದೇಹದ ವಿವಿಧ ಅಂಗಗಳಲ್ಲಿ ಕೆಲವು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಮಧುಮೇಹವು ಪಾರ್ಶ್ವವಾಯು ಅಪಾಯವನ್ನು ಕೂಡಾ ಹೆಚ್ಚಿಸುತ್ತದೆ. ಮೆದುಳಿಗೆ ಸಾಕಷ್ಟು ಪ್ರಮಾಣದಲ್ಲಿ ರಕ್ತ ಸಂಚಾರ ಆಗದೆ ಹೋದಾಗ ಅದು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಇದನ್ನು ಸ್ಟ್ರೋಕ್ ಎಂದು ಕರೆಯಲಾಗುತ್ತದೆ.


ಇದನ್ನೂ ಓದಿ :  ಚರ್ಮವನ್ನು ಕಾಂತಿಯುವಾಗಿ ಮಾಡಲು ಇಲ್ಲಿವೆ ಟೊಮೇಟೊ ಫೇಸ್‌ ಮಾಸ್ಕ್‌ಗಳು.!


ಇತ್ತೀಚೆಗೆ ಪ್ರಕಟವಾದ ಅಧ್ಯಯನದ ಪ್ರಕಾರ, ಮಧುಮೇಹ ರೋಗಿಗಳನ್ನು ಕಾಡುವ ಅತ್ಯಂತ ಅಪಾಯಕಾರಿ ಅಂಶ ಪಾರ್ಶ್ವವಾಯು ಆಗಿದೆ. ಮಧುಮೇಹವು ರಕ್ತನಾಳಗಳ ಮುಚ್ಚುವಿಕೆ, ಸೆರೆಬ್ರಲ್ SVD ಮತ್ತು ಕಾರ್ಡಿಯಾಕ್ ಎಂಬಾಲಿಸಮ್ ಮತ್ತು ರಕ್ತಕೊರತೆಯಿಂದ ಉಂಟಾಗುವ  ಸ್ಟ್ರೋಕ್ ಗೆ ಕಾರಣವಾಗುತ್ತದೆ ಎನ್ನುವುದು ಅಧ್ಯಯನದಲ್ಲಿ ಸಾಬೀತಾಗಿದೆ. ಮಧುಮೇಹಿಗಳನ್ನು ಪಾರ್ಶ್ವವಾಯುವಿನ ಅಪಾಯ ಹೆಚ್ಚಾಗಿ ಕಾಡುತ್ತದೆ ಎನ್ನುವುದು ಈ ಅಧ್ಯಯನದಿಂದ ತಿಳಿದು ಬಂದಿದೆ. 


1. ಮಧುಮೇಹಿಗಳು ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಹೆಚ್ಚಾಗಿ ಎದುರಿಸುತ್ತಾರೆ. ಈ ರೀತಿ ಹೆಪ್ಪುಗಟ್ಟಿದ ರಕ್ತ ಮೆದುಳಿಗೆ ತಲುಪಬಹುದು. ಹೀಗಾದಾಗ ಇದು ರಕ್ತದ ಹರಿವನ್ನು ನಿರ್ಬಂಧಿಸುವ ಸಾಧ್ಯತೆ ಹೆಚ್ಚಿರುತ್ತದೆ. ಇದು ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ. ಇದರ ಜೊತೆಗೆ, ಮಧುಮೇಹವು ರಕ್ತನಾಳಗಳಲ್ಲಿ ಬದಲಾವಣೆಗಳನ್ನು ಉಂಟುಮಾಡುತ್ತದೆ. 


ಇದನ್ನೂ ಓದಿ : Gain Weight: ಈ 4 ಕಾರಣಗಳಿಂದ ನಿಮ್ಮ ತೂಕ ಹೆಚ್ಚಾಗುತ್ತಿಲ್ಲ! ಏನೆಂದು ತಿಳಿಯಿರಿ


2. ಇನ್ನು ರಕ್ತ ಹೆಪ್ಪುಗಟ್ಟುವಿಕೆಯ ಕಾರಣ ಅಪಧಮನಿಗಳಲ್ಲಿ ಬ್ಲಾಕೆಜ್ ಕಾಣಿಸಿಕೊಳ್ಳುತ್ತದೆ. ಇದನ್ನು ಅಪಧಮನಿಕಾಠಿಣ್ಯ ಎಂದು ಕರೆಯಲಾಗುತ್ತದೆ. ಇದು ಅಪಧಮನಿಗಳು ಕಿರಿದಾಗಲು ಮತ್ತು ಗಟ್ಟಿಯಾಗಲು ಕಾರಣವಾಗುತ್ತದೆ. ಮಧುಮೇಹ ರೋಗಿಗಳಲ್ಲಿ ಅಪಧಮನಿಕಾಠಿಣ್ಯದ ಬೆಳವಣಿಗೆಯ ಅಪಾಯ ಕೂಡಾ ಹೆಚ್ಚಾಗಿರುತ್ತದೆ. ಇದು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ.


3. ಅಧಿಕ ರಕ್ತದೊತ್ತಡವು ಪಾರ್ಶ್ವವಾಯುವಿನ ಮತ್ತೊಂದು ಬಹು ಮುಖ್ಯ ಕಾರಣವಾಗಿದೆ. ಮಧುಮೇಹಿಗಳನ್ನು ಸಾಮಾನ್ಯವಾಗಿ  ಅಧಿಕ ರಕ್ತದೊತ್ತಡ ಸಮಸ್ಯೆ ಕೂಡಾ ಬಾಧಿಸುತ್ತದೆ. ಅಧಿಕ ರಕ್ತದ ಸಕ್ಕರೆ ಮತ್ತು ಅಧಿಕ ರಕ್ತದೊತ್ತಡದ ಒಟ್ಟಿಗೆ ಕಾಣಿಸಿಕೊಂಡಾಗ ಮೆದುಳಿನಲ್ಲಿನ ರಕ್ತನಾಳಗಳು ಹಾನಿಗೊಳಗಾಗುತ್ತವೆ. ಇದು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ.


ಇದನ್ನೂ ಓದಿ : ಅನ್ನದ ಬದಲು ಚಪಾತಿ ತಿನ್ನುತ್ತಿರಾ? ಹಾಗಿದ್ದರೆ ದಿನಕ್ಕೆ ಇಷ್ಟೇ ಚಪಾತಿ ತಿನ್ನಬೇಕು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.