ನವದೆಹಲಿ: ದೇಶಕ್ಕೆ ಬೇಸಿಗೆಯ ಬಿಸಿ ತಟ್ಟಿದೆ. ಹೀಗಾಗಿ ಜನರ ದಿನಚರಿಯಲ್ಲಿ ಬದಲಾವಣೆಯಾಗಿದೆ. ಬಟ್ಟೆಯಿಂದ ಹಿಡಿದು ಸೇವಿಸುವ ಆಹಾರದವರೆಗೆ ಎಲ್ಲವೂ ಋತುಮಾನಕ್ಕೆ ತಕ್ಕಂತೆ ಬದಲಾಗಿದೆ. ಬೇಸಿಗೆಯಲ್ಲಿ ತಂಪು ಆಹಾರಗಳು ಪ್ರತಿಯೊಬ್ಬರಿಗೂ ಆರಾಮ ನೀಡುತ್ತವೆ. ಈ ಋತುವಿನಲ್ಲಿ ನೀವು ಆರೋಗ್ಯವಾಗಿರುವುದು ಸವಾಲೇ ಸರಿ. ಹೀಗಾಗಿಯೇ ಪ್ರತಿಯೊಬ್ಬರೂ ಹೆಚ್ಚಾಗಿ ಆರೋಗ್ಯಕರ ಆಹಾರಗಳನ್ನು ಆಶ್ರಯಿಸುತ್ತಾರೆ. ಬೇಸಿಗೆಯಲ್ಲಿ ಪ್ರತಿದಿನವೂ ಮಜ್ಜಿಗೆಯನ್ನು ಕುಡಿಯುವುದರಿಂದ ದೇಹವನ್ನು ನಿರ್ಜಲೀಕರಣದಿಂದಿಟ್ಟುಕೊಳ್ಳಬಹುದು. ಇದು ಹೊಟ್ಟೆಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳಿಗೆ ತುಂಬಾ ಒಳ್ಳೆಯದು.


COMMERCIAL BREAK
SCROLL TO CONTINUE READING

ಬೇಸಿಗೆಯಲ್ಲಿ ಮಜ್ಜಿಗೆಯ ಸೇವನೆಯು ನಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿ. ಹಾಲಿನಿಂದ ತಯಾರಿಸಿದ ಮಜ್ಜಿಗೆ ನಮ್ಮ ಆರೋಗ್ಯಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಇದರ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಿರಿ.


ಇದನ್ನೂ ಓದಿ: ಈ ಒಂದು ಪಾನೀಯ ಸಾಕು ಮಧುಮೇಹವನ್ನು ಬುಡದಿಂದ ಶಮನಗೊಳಿಸಲು !


1) ನಿರ್ಜಲೀಕರಣ ತಪ್ಪಿಸುತ್ತದೆ


ಬೇಸಿಗೆ ಕಾಲದಲ್ಲಿ ದೇಹದಲ್ಲಿ ನೀರಿನ ಕೊರತೆ ಹೆಚ್ಚಾಗಿ ಇರುತ್ತದೆ. ಇದರಿಂದಾಗಿ ನಿರ್ಜಲೀಕರಣದ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಬೇಸಿಗೆಯಲ್ಲಿ ನಿರ್ಜಲೀಕರಣದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಹೆಚ್ಚು ಮಜ್ಜಿಗೆಯನ್ನು ಸೇವಿಸಬೇಕು. ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಮಜ್ಜಿಗೆಯನ್ನು ಉಪ್ಪು, ಸಕ್ಕರೆ ಮತ್ತು ಪುದೀನಾ ಸೇರಿಸಿ ಕುಡಿಯುವುದರಿಂದ ನಿರ್ಜಲೀಕರಣ, ಅತಿಸಾರ ಇತ್ಯಾದಿ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.


2) ಅಸಿಡಿಟಿಗೆ ಪರಿಣಾಮಕಾರಿ


ಬೇಸಿಗೆ ಕಾಲದಲ್ಲಿ ಜನರು ಸಾಮಾನ್ಯವಾಗಿ ಅಸಿಡಿಟಿಗೆ ಬಲಿಯಾಗುತ್ತಾರೆ. ಅದರಲ್ಲೂ ಬೇಸಿಗೆಯಲ್ಲಿ ಹೆಚ್ಚು ಎಣ್ಣೆ ಮತ್ತು ಸಾಂಬಾರ ಪದಾರ್ಥಗಳನ್ನು ಸೇವಿಸುವುದರಿಂದ ಜನರ ಜೀರ್ಣಕ್ರಿಯೆ ಹಾಳಾಗುತ್ತದೆ. ಈ ಕಾರಣದಿಂದ ಅನೇಕ ಬಾರಿ ಆಮ್ಲೀಯತೆ ಉಂಟಾಗುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ನೀವು ಮಜ್ಜಿಗೆ ಸೇವಿಸಬಹುದು.


ಇದನ್ನೂ ಓದಿ: Tea Without Sugar: ಚಹಾಕ್ಕೆ ಸಕ್ಕರೆ ಬದಲು ಇದನ್ನು ಬೆರೆಸಿ ಸೇವಿಸಿದ್ರೆ ಅದ್ಭುತ ಆರೋಗ್ಯ ಪ್ರಯೋಜನ


3) ತ್ವಚೆಯ ಆರೈಕೆಗೆ


ಉಪಯುಕ್ತವಾದ ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ, ವಿಟಮಿನ್ ಎ ಮುಂತಾದ ಗುಣಗಳಿಂದ ಸಮೃದ್ಧವಾಗಿರುವ ಮಜ್ಜಿಗೆ ನಿಮ್ಮ ತ್ವಚೆಗೆ ತುಂಬಾ ಪ್ರಯೋಜನಕಾರಿ. ನಿಮ್ಮ ತ್ವಚೆಯ ಆರೋಗ್ಯ ಕಾಪಾಡಿಕೊಳ್ಳಲು ಮಜ್ಜಿಗೆ ಸೇವನೆಯು ನಿಮಗೆ ಪ್ರಯೋಜನಕಾರಿ. ಪ್ರತಿದಿನ ಒಂದು ಲೋಟ ಮಜ್ಜಿಗೆ ಕುಡಿಯುವುದರಿಂದ ನಿಮ್ಮ ತ್ವಚೆಯನ್ನು ಆರೋಗ್ಯವಾಗಿಡಬಹುದು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.