Weight lose Tips : ನಾವು ಸೇವಿಸುವ ಆಹಾರ ಪದ್ಧತಿಗಳು ನಮ್ಮ ಹೊಟ್ಟೆ ಮತ್ತು ಸೊಂಟದ ಸುತ್ತ ಕೊಬ್ಬನ್ನು ಹೆಚ್ಚಿಸುವುದಕ್ಕೆ ಕಾರಣವಾಗುತ್ತದೆ.ಹೀಗೆ ದೇಹದಲ್ಲಿ ಬೊಜ್ಜು ಹೆಚ್ಚಾಗುತ್ತಿದ್ದಾರೆ ದೇಹದ ಆಕಾರವೇ ಕೆಡುತ್ತದೆ. ಇದು ನಮ್ಮ ಸೌಂದರ್ಯದ ಮೇಲೆ ಪರಿಣಾಮ ಬೀರುತ್ತದೆ.ದೇಹ ಸೌಂದರ್ಯವನ್ನು ಕಾಪಾಡಿಕೊಳ್ಳಲು ಬೆಳಿಗ್ಗೆ ಮತ್ತು ಸಂಜೆ ವಾಕಿಂಗ್, ಜಾಗಿಂಗ್ ಅಥವಾ ಜಿಮ್‌ಗೆ ಹೋಗಿ ಬೆವರು ಹರಿಸುವುದು ಎಲ್ಲರಿಗೂ ಸಾಧ್ಯವಾಗದ ಮಾತು. ಅಲ್ಲದೆ, ಹಗಲಿರುಳು ಆಹಾರ ತಜ್ಞರ ಕಣ್ಗಾವಲಿನಲ್ಲಿರುವುದು ಸಾಧ್ಯವಾಗದ ಮಾತು. ಹೀಗಾಗಿ ತೂಕ ಇಳಿಸಿಕೊಳ್ಳಬೇಕಾದರೆ ನಿತ್ಯ ಬೆಳಿಗ್ಗೆ ಕೆಲವು ಪಾನೀಯಗಳನ್ನು  ಸೇವಿಸಬೇಕು. 


COMMERCIAL BREAK
SCROLL TO CONTINUE READING

ತೂಕ ಇಳಿಸಿಕೊಳ್ಳಲು ಸೇವಿಸಿ ಈ ಪಾನೀಯ : 
1. ಗ್ರೀನ್ ಟೀ :
 
ಹಾಲು ಮತ್ತು ಸಕ್ಕರೆ ಚಹಾಕ್ಕೆ ಅತ್ಯುತ್ತಮ ಪರ್ಯಾಯವೆಂದರೆ ಗ್ರೀನ್ ಟೀ. ನೀವು ಫಿಟ್ ಆಗಿರಬೇಕಾದರೆ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಕಪ್ ಗ್ರೀನ್ ಟೀ  ಕುಡಿಯಬೇಕು.ಇದರ ರುಚಿ ನಾಲಗೆಗೆ ಹಿಡಿಸದಿದ್ದರೂ ತೂಕ ನಷ್ಟಕ್ಕೆ ಇದು ಸಹಕಾರಿಯಾಗಿದೆ. 


ಇದನ್ನೂ ಓದಿ : ನಿಮ್ಮ ಮಕ್ಕಳು ಹಾಲು/ಹಾಲಿನ ಉತ್ಪನ್ನಗಳನ್ನು ಇಷ್ಟಪಡುವುದಿಲ್ಲವೇ? ಕ್ಯಾಲ್ಸಿಯಂಗಾಗಿ ಈ ಸೂಪರ್‌ಫುಡ್‌ಗಳನ್ನು ಟ್ರೈ ಮಾಡಿ


2. ನಿಂಬೆ ನೀರು : 
ನಿಂಬೆ ನೀರು ತೂಕ ನಷ್ಟಕ್ಕೆ ಇರುವ ಬ್ನೆಸ್ಟ್ ಆಯ್ಕೆ. ಬೆಳಗ್ಗೆ ಎದ್ದ ನಂತರ ಒಂದು ಲೋಟ ಕುದಿಸಿದ ನೀರಿನಲ್ಲಿ ನಿಂಬೆಹಣ್ಣನ್ನು ಹಿಂಡಿ ಅದಕ್ಕೆ ಬ್ಲಾಕ್ ಸಾಲ್ಟ್ ಬೆರೆಸಿ ಕುಡಿಯಬೇಕು. ಈ ನೀರನ್ನು ನಿಯಮಿತವಾಗಿ ಸೇವಿಸುವುದರಿಂದ ಹೊಟ್ಟೆ ಮತ್ತು ಸೊಂಟದ ಭಾಗದ ಬೊಜ್ಜು ಕರಗಿ ತೂಕ ನಷ್ಟವಾಗುವುದು. 


3. ಓಮ ಕಾಳಿನ ನೀರು :
ಓಮ ಕಾಳು ಪ್ರತಿ ಅಡುಗೆಮನೆಯಲ್ಲಿ ಕಂಡುಬರುವ ಮಸಾಲೆಯಾಗಿದೆ. ಇದನ್ನು ಕ್ಯಾರಮ್ ಸೀಡ್ಸ್ ಎಂದೂ ಕರೆಯಲಾಗುತ್ತದೆ.ಇದನ್ನು ಸೇವಿಸುವುದರಿಂದ ಚಯಾಪಚಯ ದರವು ಹೆಚ್ಚಾಗುತ್ತದೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಓಮ ಕಾಳನ್ನು ರಾತ್ರಿಯಿಡೀ ಒಂದು ಲೋಟ ನೀರಿನಲ್ಲಿ ಹಾಕಿ ನೆನೆಸಿಡಬೇಕು. ಬೆಳಿಗ್ಗೆ ಈ ನೀರನ್ನು ಕುಡಿಯಬೇಕು. 


ಇದನ್ನೂ ಓದಿ : ಬೇಸಿಗೆಯಲ್ಲಿ ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಲು 5 ಸಿಂಪಲ್ ಟಿಪ್ಸ್


4.  ಸೊಂಫು ನೀರು : 
ಸೊಂಫನ್ನು ಸಾಮಾನ್ಯವಾಗಿ ಊಟದ ನಂತರ ಅಗಿಯಲಾಗುತ್ತದೆ. ಏಕೆಂದರೆ ಇದನ್ನು ನೈಸರ್ಗಿಕ ಮೌತ್ ಫ್ರೆಶ್ನರ್ ಆಗಿ ಬಳಸಲಾಗುತ್ತದೆ.ಒಂದು ಟೀಚಮಚ ಸೊಂಫನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ ರಾತ್ರಿಯಿಡೀ ನೆನೆಸಿಡಬೇಕು. ಬೆಳಿಗ್ಗೆ ಇದನ್ನು ಸೋಸಿ ಕುಡಿಯಿರಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.