ನವದೆಹಲಿ: ಅಯೋಧ್ಯೆ ಭಗವಾನ್ ರಾಮನ ಜನ್ಮಸ್ಥಳ ಎಂಬುದು ಹಿಂದೂಗಳ ನಂಬಿಕೆಯಾಗಿದೆ ಮತ್ತು ಅದು ಎಷ್ಟು ತರ್ಕಬದ್ಧವಾಗಿದೆ ಎಂಬುದನ್ನು ಒರೆಗೆ ಹಚ್ಚಲು ಹೋಗಬಾರದು ಎಂದು ರಾಮ್ ಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣದ ವಿಚಾರಣೆ ವೇಳೆ ರಾಮ್ ಲಲ್ಲಾ ವಿರಾಜ್ಮನ್ ಸುಪ್ರೀಂಕೋರ್ಟ್ ಗೆ ಸಲಹೆ ನೀಡಿದೆ.


COMMERCIAL BREAK
SCROLL TO CONTINUE READING

'ಭಗವಾನ್ ರಾಮ್ ಅವರ ಜನ್ಮಸ್ಥಳ ಅಯೋಧ್ಯೆ ಎಂದು ಹೇಳುವುದು ಹಿಂದೂಗಳ ನಂಬಿಕೆಯಾಗಿದೆ ಮತ್ತು ನ್ಯಾಯಾಲಯವು ಅದು ಎಷ್ಟು ತರ್ಕಬದ್ಧವಾಗಿದೆ ಎಂಬುದನ್ನು ಒರೆಗೆ ಹಚ್ಚಲು ಹೋಗಬಾರದು' ಎಂದು ವಕೀಲ ವೈದ್ಯನಾಥ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐದು ನ್ಯಾಯಾಧೀಶರ ಸಂವಿಧಾನ ಪೀಠದ ಮುಂದೆ ವಾದ ಮಂಡಿಸಿದರು.


ರಾಮನು ಕೂಡ ದೇವರು ಆಗಿರುವುದರಿಂದ ಅಯೋಧ್ಯೆಯಲ್ಲಿನ 2.77 ಎಕರೆ ವಿವಾದಿತ ಭೂಮಿಯಲ್ಲಿ ಮುಸ್ಲಿಮರು ಹಕ್ಕು ಪಡೆಯಲು ಸಾಧ್ಯವಿಲ್ಲ ಎಂದು ಹಿರಿಯ ವಕೀಲರು ಮಂಗಳವಾರ ನ್ಯಾಯಾಲಯಕ್ಕೆ ತಿಳಿಸಿದ್ದರು. ಒಂದು ವೇಳೆ ಈ ಆಸ್ತಿಯನ್ನು ವಿಭಜನೆ ಮಾಡಿದ್ದಲ್ಲಿ ಅದು ದೇವರನ್ನೇ ನಾಶ ಮಾಡಿದ ಹಾಗೆ ಎಂದು ಅವರು ಅಭಿಪ್ರಾಯಪಟ್ಟಿದ್ದರು. ವಿವಾದಿತ ರಾಮ ಜನ್ಮಭೂಮಿ-ಬಾಬರಿ ಮಸೀದಿ ತಾಣವನ್ನು ಹಿಂದೂಗಳು ಮತ್ತು ಮುಸ್ಲಿಮರು ಜಂಟಿಯಾಗಿ ಹೊಂದಿದ್ದರೆ, ಮುಸ್ಲಿಮರನ್ನು ಹೇಗೆ ಉಚ್ಚಾಟಿಸಬೇಕು ಎಂದು ನ್ಯಾಯಪೀಠ ಕೇಳಿದ ಪ್ರಶ್ನೆಗೆ ಈ ಮೇಲಿನ ರೀತಿ ಉತ್ತರಗಳು ಬಂದವು.


ಅಯೋಧ್ಯೆಯಲ್ಲಿನ 2.77 ಎಕರೆ ಭೂಮಿಯನ್ನು ಮೂರು ಪಕ್ಷಗಳ ನಡುವೆ ಸಮಾನವಾಗಿ ವಿಭಜಿಸಬೇಕು ಎಂದು 2010ರ ಅಲಹಾಬಾದ್ ಹೈಕೋರ್ಟ್ ತೀರ್ಪಿನ ವಿರುದ್ಧ ಹದಿನಾಲ್ಕು ಮೇಲ್ಮನವಿ ಸಲ್ಲಿಸಲಾಗಿದೆ.