ಬೆಂಗಳೂರು : ಸಿಹಿತಿಂಡಿ ಇಲ್ಲದೆ ದೀಪಾವಳಿ ಹಬ್ಬ ಅಪೂರ್ಣ. ಆದರೆ ಮಧುಮೇಹ ರೋಗಿಗಳು ದೀಪಾವಳಿ ಸಡಗರವನ್ನುಸಿಹಿ ತಿಂಡಿ ಜೊತೆಗೆ ಸಂಭ್ರಮಿಸುವುದು ಕಷ್ಟವಾಗುತ್ತದೆ. ಸಿಹಿ ತಿಂದರೆ ಈ ಕಾಯಿಲೆ ಹೆಚ್ಚಾಗುವ ಅಪಾಯ ಇರುತ್ತದೆ. 


COMMERCIAL BREAK
SCROLL TO CONTINUE READING

ಸಿಹಿತಿಂಡಿಗಳನ್ನು ಬುದ್ಧಿವಂತಿಕೆಯಿಂದ ಆರಿಸಿದರೆ, ಮಧುಮೇಹದ ಹೊರತಾಗಿಯೂ ಹಬ್ಬವನ್ನು ಪೂರ್ಣವಾಗಿ ಆನಂದಿಸಬಹುದು.ಮಧುಮೇಹ ರೋಗಿಗಳಿಗೆ ಸಂಪೂರ್ಣವಾಗಿ ಸುರಕ್ಷಿತ ಮತ್ತು ಆರೋಗ್ಯಕರವಾಗಿರುವಂಥಹ ಸಿಹಿತಿಂಡಿಗಳು ಯಾವುವು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ. 


ಇದನ್ನೂ ಓದಿ :  ಕ್ಯಾಲ್ಸಿಯಂ ಕೊರತೆ ಮೂಳೆಗಳ ಮೇಲೆ ಮಾತ್ರವಲ್ಲ ಮಿದುಳಿನ ಮೇಲೂ ಆಳವಾದ ಪರಿಣಾಮ ಬೀರುತ್ತೆ; ಇದಕ್ಕೆ ಏನು ಮಾಡಬೇಕು ಗೊತ್ತಾ?


ಬಾದಾಮಿ-ಅಂಜೂರದ ಬರ್ಫಿ :
ಬಾದಾಮಿ ಮತ್ತು ಅಂಜೂರದ ಬರ್ಫಿ ಪೌಷ್ಟಿಕಾಂಶ-ಭರಿತ ಸಿಹಿಯಾಗಿದ್ದು, ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ.ಇದು ನೈಸರ್ಗಿಕ ಸಿಹಿಯನ್ನು ಹೋದಿರುತ್ತದೆ. ಹಾಗಾಗಿ ಇದನ್ನು ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಹೆಚ್ಚಾಗುವುದಿಲ್ಲ. 


ತೆಂಗಿನಕಾಯಿ ಲಡ್ಡು : 
ತೆಂಗಿನಕಾಯಿಯಿಂದ ಮಾಡಿದ ಲಡ್ಡು ಮಧುಮೇಹ ರೋಗಿಗಳಿಗೂ ಸುರಕ್ಷಿತವಾಗಿದೆ.ಇದನ್ನು ಸಿಹಿಗೊಳಿಸಲು ಸಕ್ಕರೆಯ ಬದಲಿಗೆ ಖರ್ಜೂರವನ್ನು ಬಳಸಬಹುದು.ಇದರೊಂದಿಗೆ, ತೆಂಗಿನಕಾಯಿಯಲ್ಲಿ ಫೈಬರ್ ಇರುತ್ತದೆ, ಇದು ರಕ್ತದಲ್ಲಿನ ಸಕ್ಕರೆಯನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ. 


ಡ್ರೈ ಫ್ರುಟ್ ಚಾಕೊಲೇಟ್ : 
ಡಾರ್ಕ್ ಚಾಕೊಲೇಟ್ ಕಡಿಮೆ ಸಕ್ಕರೆಯನ್ನು ಹೊಂದಿದ್ದು, ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಅದನ್ನು ವಾಲ್‌ನಟ್, ಗೋಡಂಬಿ ಮತ್ತು ಬಾದಾಮಿಯೊಂದಿಗೆ ಬೆರೆಸಿ ಆರೋಗ್ಯಕರವಾಗಿ ಮಾಡಬಹುದು. 


ಇದನ್ನೂ ಓದಿ :  ಮಲಬದ್ದತೆ ನಿವಾರಣೆಗೆ ಇಲ್ಲಿದೆ ಸುಲಭ ರಾಮಬಾಣ...! 


ರಾಗಿ ಹಲ್ವಾ :
ಜೋಳ ಮತ್ತು ಬಜ್ರಾ ಹಲ್ವಾ ಪೌಷ್ಟಿಕಾಂಶದ ಸಿಹಿಯಾಗಿದ್ದು, ಇದನ್ನು ಸಕ್ಕರೆಯ ಬದಲಿಗೆ ಬೆಲ್ಲ ಅಥವಾ ಖರ್ಜೂರದೊಂದಿಗೆ ಸಿಹಿಗೊಳಿಸಬಹುದು. ಈ ಧಾನ್ಯಗಳು ಫೈಬರ್ ಮತ್ತು ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಇದು ಮಧುಮೇಹ ರೋಗಿಗಳಿಗೆ ಉತ್ತಮ ಆಯ್ಕೆಯಾಗಿದೆ. 


ಹಣ್ಣಿನ ಚಾಟ್ :
ಹಣ್ಣುಗಳಿಂದ ತಯಾರಿಸಿದ ಚಾಟ್ ಸಿಹಿತಿಂಡಿಗಳಿಗೆ ಆರೋಗ್ಯಕರ ಪರ್ಯಾಯವಾಗಿದೆ.ಇದನ್ನು ಸೇಬು, ಕಿತ್ತಳೆ ಮತ್ತು ದಾಳಿಂಬೆ ಬೀಜಗಳಂತಹ  ಸೀಜನಲ್ ಹಣ್ಣುಗಳೊಂದಿಗೆ ತಯಾರಿಸಬಹುದು. ಇದು ನೈಸರ್ಗಿಕ ಮಾಧುರ್ಯ ಮತ್ತು ಫೈಬರ್ ನ ಮೂಲವಾಗಿದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತದೆ.  


ಮಧುಮೇಹ ರೋಗಿಗಳಿಗೆ ಆರೋಗ್ಯಕರ ಸಿಹಿ ಆಯ್ಕೆಗಳು ಲಭ್ಯವಿದ್ದರೂ, ಯಾವುದನ್ನಾದರೂ ಅತಿಯಾಗಿ ತಿನ್ನುವುದು ಹಾನಿಕಾರಕವಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ