ಫ್ಯಾಟಿ ಲಿವರ್ ನಿಮ್ಮದ್ದಾಗಿದ್ದರೆ ದೇಹದ ಈ ನಾಲ್ಕು ಭಾಗಗಳಲ್ಲಿ ಕಾಣಿಸಿಕೊಳ್ಳುತ್ತದೆ ಊತ
Fatty Liver Symptoms: ಫ್ಯಾಟಿ ಲಿವರ್ ನಿಂದಾಗಿ ಯಕೃತ್ತು ಹಾನಿಯಾಗುವ ಅಪಾಯವಿರುತ್ತದೆ.ಈ ಸಮಸ್ಯೆಯು ಗಂಭೀರವಾದಾಗ, ದೇಹದ ಅನೇಕ ಸ್ಥಳಗಳಲ್ಲಿ ಊತದ ಸಮಸ್ಯೆ ಪ್ರಾರಂಭವಾಗುತ್ತದೆ.
Fatty Liver Symptoms : ಫ್ಯಾಟಿ ಲಿವರ್ ಸಮಸ್ಯೆ ಭಾರತದಲ್ಲಿ ತುಂಬಾ ಸಾಮಾನ್ಯವಾಗಿದೆ. ಈ ಪರಿಸ್ಥಿತಿಯಲ್ಲಿ, ಕೊಬ್ಬು ಯಕೃತ್ತಿನಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ. ದೇಶದಲ್ಲಿ ಹೆಚ್ಚಿನ ಜನರು ಫ್ಯಾಟಿ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಈ ಬಗ್ಗೆ ಗಮನ ಹರಿಸದಿದ್ದರೆ, ಇದು ಯಕೃತ್ತಿನ ವೈಫಲ್ಯ ಮತ್ತು ಕ್ಯಾನ್ಸರ್ ಗೆ ಕಾರಣವಾಗಬಹುದು.ಫ್ಯಾಟಿ ಲಿವರ್ ಒಂದು ಗಂಭೀರ ಕಾಯಿಲೆಯಾಗಿದೆ. ಇದಕ್ಕೆ ಹಲವು ಕಾರಣಗಳಿವೆ.ಅವುಗಳಲ್ಲಿ ಬೊಜ್ಜು ಪ್ರಮುಖವಾಗಿದೆ.ಇದರಿಂದ ಅಧಿಕ ರಕ್ತದೊತ್ತಡದ ಸಮಸ್ಯೆಯೂ ಹೆಚ್ಚುತ್ತದೆ.ಫ್ಯಾಟಿ ಲಿವರ್ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಬಹುದು. ಯಕೃತ್ತು ಕೊಬ್ಬಿನಿಂದ ಊದಿಕೊಂಡಾಗ,ಅದು ಸಿರೋಸಿಸ್ ಗೆ ಕಾರಣವಾಗುತ್ತದೆ. ಇದರಿಂದಾಗಿ ಯಕೃತ್ತು ಹಾನಿಯಾಗುವ ಅಪಾಯವಿರುತ್ತದೆ.ಈ ಸಮಸ್ಯೆಯು ಗಂಭೀರವಾದಾಗ, ದೇಹದ ಅನೇಕ ಸ್ಥಳಗಳಲ್ಲಿ ಊತದ ಸಮಸ್ಯೆ ಪ್ರಾರಂಭವಾಗುತ್ತದೆ.
ಪಾದಗಳಲ್ಲಿ ಊತ :
ಪಾದಗಳಲ್ಲಿ ಆಗಾಗ ಊತ ಕಾಣಿಸುತಿದ್ದರೆ ಅದು ಫ್ಯಾಟಿ ಲಿವರ್ ನ ಸಂಕೇತವಾಗಿರಬಹುದು.ಪೋರ್ಟಲ್ ಹೈಪರ್ ಟೆನ್ಶನ್ ನಿಂದಾಗಿ ರಕ್ತದೊತ್ತಡ ಹೆಚ್ಚಾಗುತ್ತದೆ. ಇದರಿಂದಾಗಿ ಸುತ್ತಮುತ್ತಲಿನ ಅಂಗಗಳಲ್ಲಿ ದ್ರವವು ಸಂಗ್ರಹಗೊಳ್ಳುತ್ತದೆ. ಪಾದಗಳು ಮತ್ತು ಕಣಕಾಲುಗಳು ಊದಿಕೊಳ್ಳಲು ಪ್ರಾರಂಭಿಸುತ್ತವೆ.
ಇದನ್ನೂ ಓದಿ : Health Tips: ನಿಮ್ಮ ಬೆನ್ನುಮೂಳೆಯನ್ನು ಬಲಪಡಿಸಲು ಈ ಆಹಾರವನ್ನು ಸೇವಿಸಿ
ಹೊಟ್ಟೆಯಲ್ಲಿ ಊತ:
ಯಕೃತ್ತಿನ ಕಾಯಿಲೆಯಿದ್ದಾಗ ಮೊದಲ ರೋಗಲಕ್ಷಣವು ಹೊಟ್ಟೆಯಲ್ಲಿ ಕಂಡುಬರುತ್ತದೆ.ಈ ಕಾರಣದಿಂದಾಗಿ, ಕಿಬ್ಬೊಟ್ಟೆಯ ಕುಳಿಯಲ್ಲಿ ದ್ರವವು ರೂಪುಗೊಳ್ಳಲು ಪ್ರಾರಂಭಿಸುತ್ತದೆ.ಯಕೃತ್ತಿನಲ್ಲಿ ಊತ ಮತ್ತು ಗಾಯಗಳಿಂದಾಗಿ, ಅದರೊಳಗಿನ ರಕ್ತನಾಳಗಳಲ್ಲಿನ ಒತ್ತಡವು ಹೆಚ್ಚಾಗುತ್ತದೆ.ಈ ಸ್ಥಿತಿಯಲ್ಲಿ, ಹೊಟ್ಟೆಯ ಯಕೃತ್ತಿನ ರಕ್ತನಾಳಗಳಿಂದ ದ್ರವವು ಸೋರಿಕೆಯಾಗಲು ಪ್ರಾರಂಭಿಸುತ್ತದೆ.ಇದರಿಂದಾಗಿ ಹೊಟ್ಟೆಯಲ್ಲಿ ಊತ ಕಾಣಿಸಿಕೊಳ್ಳುತ್ತದೆ.
ಮುಖ ಮತ್ತು ಕೈಗಳಲ್ಲಿ ಊತ :
ಫ್ಯಾಟಿ ಲಿವರ್ ನ ಪರಿಣಾಮ ಮುಖ ಮತ್ತು ಕೈಗಳ ಮೇಲೂ ಕಾಣಿಸುತ್ತದೆ. ಈ ಕಾರಣದಿಂದಾಗಿ, ಮುಖ ಮತ್ತು ಕೈಗಳು ಊದಿ ಕೊಳ್ಳುತ್ತವೆ.
ಇದನ್ನೂ ಓದಿ : Green Tea: ಗ್ರೀನ್ ಟೀ ಕುಡಿಯಿರಿ ಈ ಭರಪೂರ ಪ್ರಯೋಜನಗಳನ್ನು ಪಡೆಯಿರಿ...!
ಗೈನೆಕೊಮಾಸ್ಟಿಯಾದ ಸಮಸ್ಯೆ :
ಫ್ಯಾಟಿ ಲಿವರ್ ಹಾರ್ಮೋನುಗಳ ಮೇಲೂ ಪರಿಣಾಮ ಬೀರುತ್ತದೆ.ಅದರ ಮಟ್ಟ ಹೆಚ್ಚಾದಾಗ ಅದು ಗೈನೆಕೊಮಾಸ್ಟಿಯಾಕ್ಕೆ ಕಾರಣವಾಗಬಹುದು.ಈ ಸ್ಥಿತಿಯು ವಿಶೇಷವಾಗಿ ಪುರುಷರಲ್ಲಿ ಕಂಡುಬರುತ್ತದೆ.ಹೀಗಾದಾಗ ಎದೆಯ ಅಂಗಾಂಶಗಳು ಬೆಳೆಯಲು ಪ್ರಾರಂಭಿಸುತ್ತವೆ. ಹಾರ್ಮೋನ್ ಸಮತೋಲನದಲ್ಲಿ ಏರುಪೇರಾದಾಗ ಹೀಗಾಗುತ್ತದೆ. ಇದರಿಂದಾಗಿ ಲೈಂಗಿಕ ಬಯಕೆಯ ಕೊರತೆ,ಬಂಜೆತನ ಇತ್ಯಾದಿ ಸಮಸ್ಯೆಗಳಿಗೆ ಕಾರಣವಾಗಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.