Type 3 diabetes symptoms : ಮಧುಮೇಹ  ಕಾಯಿಲೆಯಲ್ಲಿ ಹಲವು ವಿಧಗಳಿವೆ. ಟೈಪ್ 1 ಮತ್ತು ಟೈಪ್ 2 ಡಯಾಬಿಟಿಸ್ ಬಗ್ಗೆ ನೀವು ಕೇಳಿರಬಹುದು. ಆದರೆ, ಟೈಪ್ 3 ಮಧುಮೇಹ ಅತ್ಯಂತ ಮಾರಕ ರೋಗವಾಗಿದೆ. ಟೈಪ್ 3Cಯಲ್ಲಿ, ದೇಹದಲ್ಲಿ ಇನ್ಸುಲಿನ್ ಪ್ರಮಾಣವು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಮತ್ತು ದೇಹದಲ್ಲಿ ಹಾರ್ಮೋನ್‌ಗಳ ಜೊತೆಗೆ ಜೀರ್ಣವಾಗುವ ಪ್ರೋಟೀನ್‌ನ ಪ್ರಮಾಣವೂ ಕಡಿಮೆಯಾಗುತ್ತದೆ. ಟೈಪ್ 3 ಸಿ ಮಧುಮೇಹದ ರೋಗಲಕ್ಷಣಗಳು, ರೋಗದ ಕಾರಣಗಳು ಮತ್ತು ಅದನ್ನು ಹೇಗೆ ತಪ್ಪಿಸಬಹುದು ಎನ್ನುವ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.  


COMMERCIAL BREAK
SCROLL TO CONTINUE READING

ಟೈಪ್ 3 ಸಿ ಮಧುಮೇಹದ ಲಕ್ಷಣಗಳು :
ಟೈಪ್ 3 ಸಿ ಮಧುಮೇಹವನ್ನು ವೈದ್ಯಕೀಯ ಇತಿಹಾಸದ ಆಧಾರದ ಮೇಲೆ ಅಥವಾ ನರವೈಜ್ಞಾನಿಕ ಪರೀಕ್ಷೆಗಳ ಆಧಾರದ ಮೇಲೆ ನಿರ್ಣಯ ಮಾಡಲಾಗುತ್ತದೆ. ಇದಲ್ಲದೆ, ವೈದ್ಯರು ಸಿಟಿ ಸ್ಕ್ಯಾನ್ ಅಥವಾ ಎಂಆರ್ ಐ ಮೂಲಕ ರೋಗವನ್ನು ಪತ್ತೆಹಚ್ಚುತ್ತಾರೆ. ಟೈಪ್ 3 ಸಿ ಮಧುಮೇಹವನ್ನು ಹೊಂದಿದ್ದರೆ, ಆಲ್ಝೈಮರ್ ನಂಥಹ ರೋಗಲಕ್ಷಣಗಳು ಕೂಡಾ ಕಾಣಿಸಿಕೊಳ್ಳಬಹುದು. ಉದಾಹರಣೆಗೆ ಮರೆವು, ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ತೊಂದರೆ, ನಡವಳಿಕೆಯಲ್ಲಿ ಬದಲಾವಣೆ ಮತ್ತು ದೈನಂದಿನ ಕೆಲಸಗಳನ್ನು ಮಾಡಲು ಕಷ್ಟವಾಗುವುದು ಇತ್ಯಾದಿ. 


ಇದನ್ನೂ ಓದಿ : Benefits Of Jaggery: ಬಿಪಿಯಿಂದ ರಕ್ತಹೀನತೆಯವರೆಗೆ ಹಲವು ಸಮಸ್ಯೆಗಳ ನಿವಾರಣೆಗೆ ಬೆಲ್ಲವೇ ಮದ್ದು


ಟೈಪ್ 3 ಸಿ ಮಧುಮೇಹದ ಕಾರಣಗಳು :
ಅಧಿಕ ರಕ್ತದೊತ್ತಡದ ರೋಗಿಗಳಾಗಿದ್ದರೆ, ಟೈಪ್ 3 ಸಿ ಮಧುಮೇಹದ ಅಪಾಯ ಹೆಚ್ಚಿರುತ್ತದೆ. ಅಧಿಕ ತೂಕ ಹೊಂದಿರುವ ಜನರು ಕೂಡಾ ಟೈಪ್ 3 ಸಿ ಮಧುಮೇಹದ ಅಪಾಯವನ್ನು ಎದುರಿಸುತ್ತಾರೆ. ಕುಟುಂಬದಲ್ಲಿ ಯಾರಿಗಾದರೂ ಮಧುಮೇಹ ಇದ್ದರೆ, ಟೈಪ್ 3 ಸಿ ಮಧುಮೇಹದ ಅಪಾಯ ಕಾಡಬಹುದು. ಇದಲ್ಲದೆ, ನೀವು ಪಿಸಿಓಎಸ್ ರೋಗಿಯಾಗಿದ್ದರೆ ಅಥವಾ ಖಿನ್ನತೆಗೆ ಒಳಗಾಗಿದ್ದರೆ ಕೂಡಾ ಟೈಪ್ 3 ಸಿ ಮಧುಮೇಹವನ್ನು ಹೊಂದಿರುವ ಸಾಧ್ಯತೆ ಹೆಚ್ಚಿರುತ್ತದೆ.   


ಟೈಪ್ 3 ಸಿ ಮಧುಮೇಹವನ್ನು ತಡೆಯುವುದು ಹೇಗೆ  ?
ಟೈಪ್ 3 ಸಿ ಮಧುಮೇಹವನ್ನು ತಪ್ಪಿಸಲು ಬಯಸಿದರೆ, ಪ್ರತಿದಿನವೂ  ವಾಕಿಂಗ್ ಮಾಡಬೇಕು. ಪ್ರತಿದಿನ ಹೆಚ್ಚು ಹೆಚ್ಚು ನೀರನ್ನು ಕುಡಿಯಬೇಕು. ಹೆಚ್ಚಿನ ಸಕ್ಕರೆ ಅಂಶವನ್ನು ಹೊಂದಿರುವ  ಆಹಾರ ಮತ್ತು  ಪಾನೀಯಗಳನ್ನು ತ್ಯಜಿಸಬೇಕು. ಧೂಮಪಾನ ಮತ್ತು ಮದ್ಯಪಾನದಿಂದ  ದೂರವಿರಬೇಕು. ಫೈಬರ್ ಭರಿತ ಆಹಾರವನ್ನು ಸೇವಿಸಬೇಕು. ಇದಲ್ಲದೆ,  ಪ್ರೋಟೀನ್ ಮತ್ತು ವಿಟಮಿನ್ ಡಿ ಸಮೃದ್ಧ ಆಹಾರವನ್ನು ತೆಗೆದುಕೊಳ್ಳಬಹುದು. ಒಬ್ಬ ವ್ಯಕ್ತಿಯು ಟೈಪ್ 2 ಡಯಾಬಿಟಿಸ್ ಹೊಂದಿದ್ದು, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಮಾಡದಿದ್ದರೆ, ಟೈಪ್ 3 ಸಿ ಮಧುಮೇಹವನ್ನು ಪಡೆಯುವ ಅಪಾಯ ಹೆಚ್ಚಾಗಿರುತ್ತದೆ. 


ಇದನ್ನೂ ಓದಿ : Benefits Of Green Peas: ಡಯಾಬಿಟಿಸ್, ಕೊಲೆಸ್ಟ್ರಾಲ್ ಕಾಯಿಲೆಗಳಿಗೆ ರಾಮಬಾಣ ಹಸಿರು ಬಟಾಣಿ


ಯಾರಿಗೆ ಟೈಪ್ 3 ಸಿ ಮಧುಮೇಹ ಅಪಾಯ ಕಾಡುತ್ತದೆ ? :  
ಮೇದೋಜ್ಜೀರಕ ಗ್ರಂಥಿಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ, ಟೈಪ್ 3 ಸಿ ಮಧುಮೇಹದ ಅಪಾಯ ಹೆಚ್ಚಾಗಿರುತ್ತದೆ. ಮೇದೋಜ್ಜೀರಕ ಗ್ರಂಥಿಯಲ್ಲಿ ಗೆಡ್ಡೆ ಇದ್ದರೆ ಅಥವಾ ಅದು ಕೆಲಸ ಮಾಡುವುದನ್ನು ನಿಲ್ಲಿಸಿದರೆ, ಟೈಪ್ 3 ಸಿ ಮಧುಮೇಹ  ಅಪಾಯ ಹೆಚ್ಚೇ ಕಾಡುತ್ತದೆ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.