Health Tipes: ಕರುನಾಡಿನಲ್ಲಿ ನಾನಾ ಪದ್ದತಿ ನಾನಾ ಆಚಾರ ವಿಚಾರ ಹೊಂದಿರುವ ನಾಡಗಿದೆ. ಅದರಲ್ಲೂ ಊಟ ಪದ್ದತಿಯು ಒಂದಾಗಿದೆ. ಮಲೆನಾಡು, ಕರಾವಳಿ, ಬಯಲು ಸೀಮೆ ಹೀಗೆ ಒಂದೊಂದು ಕಡೆಗಳಲ್ಲಿ ವಿಭಿನ್ನ ಆಹಾರಗಳನ್ನು ಸೇವಿಸುತ್ತಾರೆ.ಅದರಲ್ಲೂ ರಾಯಚೂರು, ಗುಲ್ಬರ್ಗ, ಬೀದರ್, ಹುಬ್ಬಳ್ಳಿ-ಧಾರವಾಡ ಕಡೆಗಳಲ್ಲಿ ಜೋಳ ರೊಟ್ಟಿ ಆಹಾರ ಸೇವೆನೆ ಹೆಚ್ಚು ಮಾಡುತ್ತಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Coconut Health Benefits: ತೆಂಗು - ಇಂಗು ಇದ್ದರೆ ಮಂಗ ಸಹ ಚೆನ್ನಾಗಿ ಅಡುಗೆ ಮಾಡಬಲ್ಲದು: ಆದ್ರೆ ತೆಂಗಿನ ಕಾಯಿ ಉಪಯೋಗ ಬಲ್ಲಿರಾ..


ಹೆಚ್ಚು ಸೇವಿಸುವ ಜೋಳ ರೊಟ್ಟಿಯಲ್ಲಿ ಮೆಗ್ನೀಷಿಯಂ ಮತ್ತು ಕ್ಯಾಲ್ಸಿಯಂ ಅಂಶವು ಹೇರಳವಾಗಿದೆ. ಆದ್ದರಿಂದ ಇದರ ಸೇವನೆಯಿಂದ ಆರೋಗ್ಯಕ್ಕೆ ಪ್ರಯೋಜನಗಳು ಒದಗಲಿವೆ. ಜೋಳ ರೊಟ್ಟಿ ಸೇವನೆಯಿಂದ ಕೊಲೆಸ್ಟ್ರಾಲ್ ಅಂಶವನ್ನು ತೆಗೆದು ಹಾಕುವುದರ ಜೊತೆಗೆ ಕಾಲಕ್ರಮೇಣ ತೂಕ ಇಳಿಸುತ್ತದೆ. 


ಈ ರೊಟ್ಟಿಯಲ್ಲಿ ಅಪಾರ ಪ್ರಮಾಣದಲ್ಲಿ ಟ್ಯಾನಿನ್ ಅಂಶ ಕಂಡು ಬಂದಿದೆ. ಹಾಗಾಗಿ ಮಧುಮೇಹವನ್ನು ತಡೆಯುತ್ತದೆ. ಯಾವುದೇ ಭಯವಿಲ್ಲದೇ ಮಧುಮೇಹಿಗಳು ಜೋಳದ ರೊಟ್ಟಿ ಯನ್ನು ಸೇವಿಸಬಹುದಾಗಿದೆ. ಇದರ ಜೊತೆಯಲ್ಲಿ ರಕ್ತದ ಒತ್ತಡವನ್ನು ನಿಯಂತ್ರಣ ಮಾಡಿ ಹೃದಯದ ಆರೋಗ್ಯಕ್ಕೂ ಸಹಕಾರಿಯಾಗಿದೆ. 


ಇದನ್ನೂ ಓದಿ: Dry Fish Benefit: ನಂಬುತ್ತಿರೋ ಬಿಡುತ್ತೀರೋ ಗೊತ್ತಿಲ್ಲ.. ಒಣ ಮೀನು ಮಾತ್ರ ಆರೋಗ್ಯಕ್ಕೆ ತುಂಬಾ ಉಪಯೋಗಕಾರಿ!


ಕೆಲವೊಂದು ಬಾರಿ ಜ್ವರ ಹೆಚ್ಚಾದಾಗ ಅನ್ನ ಸೇವಿಸಲು ಕಷ್ಟ ಆಗಬಹುದು ಆ ವೇಳೆ ಜೋಳ ರೊಟ್ಟಿ ಸೇವೆನೆ ಉಪಯುಕ್ತ ಆಹಾರವಾಗಿದೆ. ಹಾಗೆಯೇ ಈ ರೊಟ್ಟಿ ಸೇವನೆಯಿಂದ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ