ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಈ ಬಿಳಿ ಕಾಳುಗಳು ನಿಮ್ಮ ಆಹಾರದಲ್ಲಿರಲಿ!
Taming Diabetes: ಮಧುಮೇಹ ಇರುವವರಿಗೆ ಕಡಿಮೆ ಜಿಐ ಅಥವಾ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಹೊಂದಿರುವ ಆಹಾರವನ್ನು ಸೇವಿಸಲು ಸೂಚಿಸಲಾಗುತ್ತದೆ. ಏಕೆಂದರೆ, ಕಡಿಮೆ ಜಿಐ ಸೂಚ್ಯಂಕ ಹೊಂದಿರುವ ಆಹಾರಗಳ ಸೇವನೆಯು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದೇ ವೇಳೆ, ಹೆಚ್ಚಿನ ಜಿಐ ಸೂಚ್ಯಂಕ ಆಹಾರವನ್ನು ಸೇವಿಸುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಅಥವಾ ಸಕ್ಕರೆಯ ಪ್ರಮಾಣವನ್ನು ವೇಗವಾಗಿ ಹೆಚ್ಚಾಗುತ್ತದೆ. ಹೀಗಾಗಿ ಮಧುಮೆಹಿಗಳಿಗೆ ಕಡಿಮೆ ಜಿಐ ಆಹಾರವನ್ನು ತಿನ್ನಲು ಸಲಹೆ ನೀಡುತ್ತಾರೆ. (Health News In Kannada)
ಬೆಂಗಳೂರು: ಅಲಸಂದೆ ಕಡಿಮೆ-ಜಿಐ ಆಹಾರವಾಗಿದೆ. ಇದು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ಇದರ ಸೇವನೆಯು ಮಧುಮೇಹಿಗಳಿಗೆ ಹಲವು ವಿಧಗಳಲ್ಲಿ ಪ್ರಯೋಜನವನ್ನು ನೀಡುತ್ತದೆ. ಅಲಸಂದೆ ಮಧುಮೇಹಿಗಳಿಗೆ ಹೇಗೆ ಪ್ರಯೋಜನಕಾರಿಯಾಗಿದೆ ತಿಳಿದುಕೊಳ್ಳೋಣ ಬನ್ನಿ, (Health News In Kannada)
ಅಲಸಂದೆ ಸೇವನೆಯಿಂದ ಮಧುಮೇಹಿಗಳಿಗಾಗುವ ಪ್ರಯೋಜನಗಳು?
ಕಡಿಮೆ ಜಿಐ ಅಥವಾ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವು ಆಹಾರಗಳನ್ನು ವರ್ಗೀಕರಿಸಲು ಒಂದು ಮಾಪಕವಾಗಿದೆ. ವಿಶೇಷವಾಗಿ, ಮಧುಮೇಹ ಹೊಂದಿರುವ ಜನರಿಗೆ ಈ ಸೂಚ್ಯಂಕವು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಏಕೆಂದರೆ, ಕಡಿಮೆ ಜಿಐ ಸೂಚ್ಯಂಕ ಹೊಂದಿರುವ ಆಹಾರಗಳ ಸೇವನೆಯು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೇ. ಇದೇ ವೇಳೆ, ಹೆಚ್ಚಿನ ಜಿಐ ಸೂಚ್ಯಂಕ ಆಹಾರವನ್ನು ಸೇವಿಸುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಅಥವಾ ಸಕ್ಕರೆಯ ಪ್ರಮಾಣವನ್ನು ವೇಗವಾಗಿ ಹೆಚ್ಚಾಗುತ್ತದೆ. ಇದೇ ಕಾರಣದಿಂದ ಮಧುಮೇಹಿಗಳಿಗೆ ಕಡಿಮೆ ಜಿಐ ಆಹಾರವನ್ನು ತಿನ್ನಲು ಸಲಹೆ ನೀಡುತ್ತಾರೆ.
ಕರಗುವ ನಾರಿನ ಉತ್ತಮ ಮೂಲ
ಅಲಸಂದೆ ಕರಗುವ ಆಹಾರದ ಫೈಬರ್‌ನಲ್ಲಿ ಸಮೃದ್ಧವಾಗಿರುವ ಧಾನ್ಯವಾಗಿದೆ. ಇದು ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಅಧಿಕ ರಕ್ತದ ಸಕ್ಕರೆಯೊಂದಿಗೆ ಉಂಟಾಗುವ ಮಲಬದ್ಧತೆ ಮತ್ತು ಆಸಿಡ್ ರಿಫ್ಲಕ್ಸ್‌ನಂತಹ ಸಮಸ್ಯೆಗಳಿಂದ ಪರಿಹಾರವನ್ನು ನೀಡಲು ಇದು ಸಹಾಯಕವಾಗಿರುತ್ತದೆ.
ಇದನ್ನೂ ಓದಿ-ಕೇವಲ ಒಂದು ಚಮಚೆ ಈ ಬೀಜಗಳ ಸೇವನೆ 30 ದಿನಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಶಾಶ್ವತವಾಗಿ ದೇಹದಿಂದ ಹೊರಹಾಕುತ್ತೆ!
ತೂಕ ಇಳಿಕೆ
ಚಯಾಪಚಯವನ್ನು ಹೆಚ್ಚಿಸುವ ಆಹಾರಗಳಲ್ಲಿ ಅಲಸಂದೆ ಕೂಡ ಶಾಮಿಲಾಗಿದೆ. ಇದರ ಸೇವನೆಯು ಚಯಾಪಚಯ ದರವನ್ನು ಸುಧಾರಿಸುತ್ತದೆ. ಉತ್ತಮ ಚಯಾಪಚಯ ಎಂದರೆ ಉತ್ತಮ ಪ್ರಮಾಣದ ಕೊಬ್ಬನ್ನು ಸುಡುವುದು ಮತ್ತು ತೂಕ ಇಳಿಕೆ ಎಂದರ್ಥ. ಆದ್ದರಿಂದ, ಅಲಸಂದೆ ತಿನ್ನುವುದರಿಂದ ತೂಕ ಇಳಿಕೆಯಾಗುತ್ತದೆ ಎಂದು ಹೇಳಬಹುದು.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ