ಈ ಗಿಡದ ಎಲೆಗಳ ಕುದಿಸಿದ ನೀರು ಸಕ್ಕರೆ ಕಾಯಿಲೆ ನಿಯಂತ್ರಿಸುತ್ತದೆ, ಕಿಡ್ನಿ ಸ್ಟೋನ್ ಸಮಸ್ಯೆಗೂ ರಾಮಬಾಣ!
Taming Diabetes: ಮಾವಿನ ಎಲೆಗಳನ್ನು ಆಯುರ್ವೇದದಲ್ಲಿ ಗಿಡಮೂಲಿಕೆ ಎಂದು ಪರಿಗಣಿಸಲಾಗಿದೆ, ಇದನ್ನು ಸಾವಿರಾರು ವರ್ಷಗಳಿಂದ ಅನೇಕ ರೋಗಗಳ ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಮಾವಿನ ಎಲೆಗಳನ್ನು (Health News In Kannada) ನೀರಿನಲ್ಲಿ ಕುದಿಸಿದ ನಂತರ ನೀವು ಸೇವಿಸಿದರೆ, ನಿಮ್ಮ ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿರುತ್ತದೆ.
Health Care Tips In Kannada: ಮಾವನ್ನು ಹಣ್ಣುಗಳ ರಾಜ ಎಂದು ಕರೆಯಲಾಗುತ್ತದೆ. ಮಾವಿನ ತಳಿಗಳು ವಿಶ್ವಾದ್ಯಂತ ತುಂಬಾ ಪ್ರಸಿದ್ಧವಾಗಿವೆ. ಮಾವು ತಿನ್ನಲು ರುಚಿಕರ ಮಾತ್ರವಲ್ಲ ಆರೋಗ್ಯಕರವೂ ಆಗಿದೆ. ಆದರೆ ಮಾವಿನ ಎಲೆಗಳು ಕೂಡ ನಿಮಗೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ ಎಂಬ ಸಂಗತಿ ಬಹುತೇಕರಿಗೆ ತಿಳಿದಿಲ್ಲ? ಹೀಗಾಗಿ, ಇಂದು ನಾವು ಮಾವಿನ ಎಲೆಗಳನ್ನು ಕುದಿಸಿದ ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳನ್ನು ಹೇಳಲಿದ್ದೇವೆ. ಮಾವಿನ ಎಲೆಗಳನ್ನು ಆಯುರ್ವೇದದಲ್ಲಿ ಗಿಡಮೂಲಿಕೆ ಎಂದು ಪರಿಗಣಿಸಲಾಗಿದೆ, ಇದನ್ನು ಸಾವಿರಾರು ವರ್ಷಗಳಿಂದ ಅನೇಕ ರೋಗಗಳ ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಮಾವಿನ ಎಲೆಗಳನ್ನು (Health News In Kannada) ನೀರಿನಲ್ಲಿ ಕುದಿಸಿದ ನಂತರ ನೀವು ಸೇವಿಸಿದರೆ, ನಿಮ್ಮ ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿರುತ್ತದೆ. ಇದರೊಂದಿಗೆ ನಿಮ್ಮ ತ್ವಚೆ ಮತ್ತು ಕೂದಲು ಕೂಡ ಆರೋಗ್ಯಕರವಾಗಿರುತ್ತದೆ ಆದ್ದರಿಂದ ಮಾವಿನ ಎಲೆಗಳನ್ನು ಕುದಿಸಿದ ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳನ್ನು ತಿಳಿದುಕೊಳ್ಳೋಣ ಬನ್ನಿ.
ಮಾವಿನಿಂದಗುವ ಆರೋಗ್ಯ ಪ್ರಯೋಜನಗಳು
ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಉತ್ತಮ
ಮಾವಿನ ಎಲೆಗಳಲ್ಲಿ ವಿಟಮಿನ್ ಎ ಮತ್ತು ಸಿ ಯಂತಹ ಗುಣಗಳು ಹೇರಳ ಪ್ರಮಾಣದಲ್ಲಿವೆ. ಹೀಗಾಗಿ ಈ ಎಲೆಗಳು ದೇಹದಲ್ಲಿನ ಕಾಲಜನ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಇದು ನಿಮ್ಮ ಕೂದಲು ಮತ್ತು ಚರ್ಮದ ಆರೋಗ್ಯಕ್ಕೆ ಅತ್ಯುತ್ತಮವಾದ ಪ್ರಯೋಜನಗಳನ್ನು ನೀಡುತ್ತದೆ.
ಮೂತ್ರಪಿಂಡದ ಕಲ್ಲಿನ ಸಮಸ್ಯೆಯನ್ನು ನಿವಾರಿಸುತ್ತದೆ
ಮಾವಿನ ಎಲೆಗಳಲ್ಲಿ ಹಳವು ರೀತಿಯ ಪೋಷಕಾಂಶಗಳಿದ್ದು, ಅವು ಹೊಟ್ಟೆಯ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಹೀಗಾಗಿ ಆರೋಗ್ಯಕರ ಕರುಳಿಗಾಗಿ ಮಾವಿನ ಎಲೆಗಳನ್ನು ಸೇವಿಸಿ. ಇದರೊಂದಿಗೆ ಮೂತ್ರಪಿಂಡದ ಹರಳುಗಳ ಸಮಸ್ಯೆಯಿದ್ದರೆ ಅದರ ನೀರನ್ನು ಕುಡಿದರೆ ಅದರಿಂದ ಮುಕ್ತಿ ಪಡೆಯಬಹುದು.
ಇದನ್ನೂ ಓದಿ-ಮೊಸರಿನಲ್ಲಿ ಈ ಒಂದು ಸಂಗತಿಯನ್ನು ಬೆರೆಸಿ ತಿನ್ನಿ, ಚಮತ್ಕಾರ ನೋಡಿ!
ಆಸ್ತಮಾ ಮತ್ತು ಮಧುಮೇಹದಲ್ಲಿ ಉಪಯುಕ್ತ
ನಿಮಗೆ ಅಸ್ತಮಾ ಸಮಸ್ಯೆ ಇದ್ದರೂ ಮಾವಿನ ಎಲೆಗಳನ್ನು ಕುದಿಸಿದ ನೀರನ್ನು ಕುಡಿಯುವುದು ಒಳ್ಳೆಯದು. ಇನ್ನೊಂದೆಡೆ, ನಿಮ್ಮ ರಕ್ತದಲ್ಲಿನ ಸಕ್ಕರೆಯು ನಿಯಂತ್ರಣದಲ್ಲಿರುತ್ತದೆ. ಇದರೊಂದಿಗೆ ನಿಮ್ಮ ಕೆಮ್ಮು ಮತ್ತು ಗಂಟಲು ನೋವಿನ ಸಮಸ್ಯೆಯೂ ನಿವಾರಣೆಯಾಗುತ್ತದೆ. ಒಂದು ವೇಳೆ ನೀವು ಮಾವಿನ ಎಲೆಗಳ ಕುದಿಸಿದ ನೀರನ್ನು ಕುಡಿಯಲು ಬಯಸದಿದ್ದರೆ, ರಾತ್ರಿ 2-4 ಮಾವಿನ ಎಲೆಗಳನ್ನು ನೀರಿನಲ್ಲಿ ನೆನೆಸಿಡಿ. ನಂತರ ನೀವು ಮಾರನೆ ದಿನ ಬೆಳಗ್ಗೆ ಈ ನೀರನ್ನು ಕುಡಿಯಿರಿ.
ಇದನ್ನೂ ಓದಿ-ನೀವು ಗಂಭೀರವಾಗಿ ಪರಿಗಣಿಸದ ಈ ಸಂಗತಿಗಳೂ ಕೂಡ ಕೊಲೆಸ್ಟ್ರಾಲ್ ಹೆಚ್ಚಳಕ್ಕೆ ಕಾರಣ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.