ಬೆಂಗಳೂರು: ತೆಂಗಿನ ಎಣ್ಣೆಯ ಪ್ರಯೋಜನಗಳಿಂದಾಗಿ, ಇದು ಕ್ರಮೇಣ ಅಡುಗೆಗೆ ಜನಪ್ರಿಯವಾಗುತ್ತಿದೆ. ತೆಂಗಿನ ಎಣ್ಣೆಯನ್ನು ಭಾರತದ ಕರಾವಳಿ ಪ್ರದೇಶಗಳಲ್ಲಿ ವಿಶೇಷವಾಗಿ ಕೇರಳದಲ್ಲಿ ಅಡುಗೆಗೆ ವ್ಯಾಪಕವಾಗಿ ಬಳಸಲಾಗುತ್ತದೆ. ಅಲ್ಲಿ, ಚಟ್ನಿಗಳು, ತರಕಾರಿಗಳು, ಮೇಲೋಗರಗಳು ಮತ್ತು ವಿವಿಧ ಭಕ್ಷ್ಯಗಳನ್ನು ತಯಾರಿಸಲು ಇದನ್ನು ಪ್ರತಿ ಮನೆಯಲ್ಲೂ ಬಳಸಲಾಗುತ್ತದೆ. ಆದರೆ, ಇದು ಅಧಿಕ ರಕ್ತದ ಸಕ್ಕರೆ ಮಟ್ಟ ಅಥವಾ ಮಧುಮೇಹ ನಿರ್ವಹಣೆಗೆ ಸಹಾಯ ಮಾಡುತ್ತದೆಯೇ? ಹೌದು ಎನ್ನುತ್ತವೆ ಕೆಲ ಅಧ್ಯಯನಗಳು, ಹೇಗೆ ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಮಧುಮೇಹಿಗಳಿಗೆ ತೆಂಗಿನೆಣ್ಣೆ ಸೇವನೆ ಉತ್ತಮ
ತೆಂಗಿನ ಎಣ್ಣೆಯನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸುಲಭವಾಗುತ್ತದೆ ಎಂದು ತೋರಿಸುವ ಅನೇಕ ಅಧ್ಯಯನಗಳಿವೆ. ಅದರ ಸೇವನೆಯಿಂದ, ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವುದು ಸುಲಭವಾಗುತ್ತದೆ. ಇದರ ಸೇವನೆಯಿಂದ ಉತ್ತಮ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿ, ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರುತ್ತದೆ ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ-ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ಹೊರಹಾಕಲು ಚಳಿಗಾಲದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಈ ಉಂಡೆ ಸೇವಿಸಿ!


ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ:
ಮಧುಮೇಹಿಗಳು ತೆಂಗಿನ ಎಣ್ಣೆಯ ಸೇವನೆಯಿಂದ ಪಡೆಯುವ ಪ್ರಮುಖ ಪ್ರಯೋಜನವೆಂದರೆ ಅದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ, ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಲು ಮತ್ತು ಅದನ್ನು ನಿಯಂತ್ರಣದಲ್ಲಿಡಲು ಸುಲಭವಾಗುತ್ತದೆ. ಇದೇ ವೇಳೆ, ಆಗಾಗ್ಗೆ ಹಸಿವು ಮತ್ತು ಸಿಹಿತಿಂಡಿಗಳ ತಿನ್ನುವ ಬಯಕೆಯನ್ನು ಇದು ಕಡಿಮೆಮಾಡುತ್ತದೆ.  ಈ ಕಾರಣದಿಂದಾಗಿ, ಅತಿಯಾಗಿ ತಿನ್ನುವುದು ಮತ್ತು ಹೆಚ್ಚಿನ ಕ್ಯಾಲೋರಿ ಹೊಂದಿರುವ ಆಹಾರವನ್ನು ಸೇವನೆ ತಪ್ಪುತ್ತದೆ


ಇದನ್ನೂ ಓದಿ-ತೂಕ ಇಳಿಕೆಗೆ ಪರದಾಡುತ್ತಿರುವಿರಾ? ಹಸಿ ಶುಂಠಿಯನ್ನು ಈ ನಾಲ್ಕು ವಿಧಗಳಲ್ಲಿ ಸೇವಿಸಿ ನೋಡಿ!


ತೂಕ ಇಳಿಕೆಗೂ ಕೂಡ ಸಹಾಯಕವಾಗಿದೆ
ತೆಂಗಿನ ಎಣ್ಣೆ ದೇಹದ ಕೊಬ್ಬನ್ನು ಕಡಿಮೆ ಮಾಡಲು ಸಹ ಸಹಕಾರಿಯಾಗಿದೆ. ವಿಶೇಷವಾಗಿ, ತೆಂಗಿನ ಎಣ್ಣೆಯು ಹೊಟ್ಟೆ ಮತ್ತು ಸೊಂಟದ ಸುತ್ತ ಸಂಗ್ರಹವಾಗಿರುವ ಕೊಬ್ಬನ್ನು ಸುಡುವಲ್ಲಿ ಪರಿಣಾಮಕಾರಿಯಾಗಿದೆ. ಹಾಗೆಯೇ, ಹೊಟ್ಟೆಯ ಕೊಬ್ಬು ಹೃದಯ ಕಾಯಿಲೆಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ಕೊಬ್ಬರಿ ಎಣ್ಣೆಯನ್ನು ಸೇವಿಸುವುದರಿಂದ ಹೃದಯದ ಕಾಯಿಲೆಗಳಿಂದ ಹೃದಯವನ್ನು ರಕ್ಷಿಸುತ್ತದೆ ಎಂದು ಹೇಳಬಹುದು. ಇದಲ್ಲದೆ, ಮಧುಮೇಹ ನಿರ್ವಹಣೆಗೆ ತೂಕ ಇಳಿಕೆಯೂ ಮುಖ್ಯವಾಗಿದೆ. ಏಕೆಂದರೆ ಬೊಜ್ಜಿನಿಂದ ಮಧುಮೇಹಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತವೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ