ಕೊರೊನಾ ವೈರಸ್ ಬಳಿಕ ಇದೀಗ ಮತ್ತೊಂದು ಚೀನಾ ವೈರಸ್ ಹಾವಳಿ ಹೆಚ್ಚಾಗುವ ಲಕ್ಷಣಗಳು ಕಾಣುತ್ತಿದ್ದು, ಈಗಾಗಲೇ ಎಲ್ಲಾ ಕಡೆಗಳಲ್ಲಿ ಹೆಲ್ತ್ ಎಮರ್ಜೆನ್ಸಿ ತಯಾರಿ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಧಾರವಾಡದಲ್ಲಿ ಕೂಡ ಸಿದ್ದತೆಗಳು ನಡೆಯುತ್ತಿವೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ...
 
ಇತ್ತೀಚೆಗೆ ಚೀನಾದಲ್ಲಿ ನಿಮೋನಿಯಾ ಮಾದರಿಯ ಜ್ವರದ ವೈರಸ್​ ವೊಂದು ಕಾಣಿಸಿಕೊಂಡಿದೆ. ಇದೇ ಚೀನಾದಲ್ಲಿ ಹುಟ್ಟಿಕೊಂಡ ಕೋವಿಡ್ ವೈರಸ್​ ಗೆ ಜಗತ್ತು ಅಲ್ಲೊಲ್ಲ ಕಲ್ಲೊಲ್ಲ ಆಗಿತ್ತು. ಹೀಗಾಗಿ ಚೀನಾದಲ್ಲಿ ಮತ್ತೊಂದು ವೈರಸ್ ಪತ್ತೆ ಬಗ್ಗೆ ವರದಿಯಾಗುತ್ತಿದ್ದಂತೆ ಭಾರತವೂ ಸಹ ಅಲರ್ಟ್ ಆಗಿದೆ. ಅದಕ್ಕೆ ಪೂರಕವಾಗಿಯೇ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಇತ್ತೀಚೆಗ ಜ್ವರ, ನೆಗಡಿ, ಕೆಮ್ಮು ಸಾಮಾನ್ಯವಾಗಿ ಹೋಗಿದೆ. ಧಾರವಾಡ ಜಿಲ್ಲೆಯಲ್ಲಂತೂ ನೂರಾರು ಜನ, ನಿತ್ಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಜ್ವರ, ನೆಗಡಿ, ಕೆಮ್ಮು ಇರುವವರೇ ಬರುತ್ತಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರದ ಮಾರ್ಗಸೂಚಿ ಅನ್ವಯ, ಧಾರವಾಡ ಜಿಲ್ಲೆಯಲ್ಲಿ ಮುಂದೆ ಒದಗಿ ಬರಬಹುದಾದ ಹೆಲ್ತ್ ಎಮರ್ಜನ್ಸಿ ಎದುರಿಸಲು ಹುಬ್ಬಳ್ಳಿಯ ಕಿಮ್ಸ್, ಧಾರವಾಡದ ಜಿಲ್ಲಾ ಆಸ್ಪತ್ರೆಯೂ ಸೇರಿದಂತೆ ಎಲ್ಲ ತಾಲೂಕು ಆಸ್ಪತ್ರೆಗಳನ್ನು ಸಜ್ಜು ಮಾಡಿಟ್ಟುಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ- ಚಳಿಗಾಲದಲ್ಲಿ ನಿಮ್ಮ ಮೂಳೆಗಳನ್ನು ಬಳಪಡಿಸಲು ಈ 7 ಸೂಪರ್‌ಫುಡ್‌ಗಳನ್ನು ತಪ್ಪದೇ ಸೇವಿಸಿ
 
ಇಡೀ ಜಗತ್ತು ಕೋವಿಡ್​ ನಲ್ಲಿ ಸಿಲುಕಿದ್ದಾಗ, ಅದಕ್ಕೆ ಧಾರವಾಡ ಜಿಲ್ಲೆಯೂ ಹೊರತಾಗಿರಲಿಲ್ಲ. ಒಂದೆಡೆ ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಗಳ ಗಡಿಗಳೊಂದಿಗೆ ಹೊಂದಿಕೊಂಡಿರುವ ಧಾರವಾಡ ಸರ್ಕಾರಿ ಆಸ್ಪತ್ರೆಗಳಿಗೆ ಆ ಜಿಲ್ಲೆಗಳವರೂ ಬರುತ್ತಾರೆ. ಹೀಗಾಗಿ ಕೋವಿಡ್ ಬಂದಾಗ, ಧಾರವಾಡ ಜಿಲ್ಲಾ ಆಸ್ಪತ್ರೆ, ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ತಾಲೂಕು ಆಸ್ಪತ್ರೆಗಳನ್ನು ಸಹ ಆಕ್ಸಿಜನ್ ವ್ಯವಸ್ಥೆ ಸಹಿತ ಅಪಡೆಟ್ ಮಾಡಲಾಗಿತ್ತು. ಅದು ಈಗ ಇಂತಹ ಹೆಲ್ತ್ ಎಮರ್ಜನಿ ಸಮಯದಲ್ಲಿ ಕೈ ಹಿಡಿಯುತ್ತಿದೆ. 


ಇದನ್ನೂ ಓದಿ- ಈ ಅಡುಗೆ ಸಾಮಾಗ್ರಿಗಳಿಂದ ಮಲಬದ್ಧತೆ ನಿವಾರಣೆಯಾಗುತ್ತದೆ, ಅವುಗಳನ್ನು ಹೇಗೆ ಬಳಸಬೇಕೆಂದು ತಿಳಿಯಿರಿ


ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ 125 ಬೆಡ್​ ಗಳಿಗೆ ಕೇಂದ್ರೀಕೃತ ಆಕ್ಸಿಜನ್ ವ್ಯವಸ್ಥೆ ಇದೆ. 6 ಕೆಎಲ್ ಸಾಮರ್ಥ್ಯದ ಲಿಕ್ವಿಡ್ ಆಕ್ಸಿಜನ್ ಟ್ಯಾಂಕ್, 1000 ಪಿಎಸ್​ಎ ಮತ್ತು 500 ಎಲ್​ ಪಿ ಎಂ ಸಾಮರ್ಥ್ಯದ ಆಕ್ಸಿಜನ್ ಜನರೇಷನ್ ಯುನಿಟ್​ ಗಳಿವೆ. ಸದ್ಯ ಜ್ವರ, ನೆಗಡಿ, ಕೆಮ್ಮು ಪ್ರಕರಣಗಳು ಬರುತ್ತಿದ್ದು, ಅವು ತೀವ್ರ ಸ್ವರೂಪ ಇಲ್ಲ. ಅಂತಹ ಸಂದರ್ಭ ಬಂದಲ್ಲಿ, ಎಲ್ಲವನ್ನೂ ಎದುರಿಸಲು ಧಾರವಾಡ ಜಿಲ್ಲಾಸ್ಪತ್ರೆಯೂ ಸಜ್ಜಾಗಿದೆ. 
 
ಒಟ್ಟಾರೆಯಾಗಿ ಚೀನಾದಲ್ಲಿ ಸಣ್ಣದೊಂದು ವೈರಸ್ ಬಂದ್ರೂ ಕೂಡ, ಈಗ ನಿರ್ಲಕ್ಷ್ಯ ಮಾಡುವಂತಿಲ್ಲ. ಯಾಕಂದ್ರೆ ಕೋವಿಡ್ ಅಂತ ಪಾಠವನ್ನೇ ಕಲಿಸಿದೆ. ಹೀಗಾಗಿ ಮುಂದೆ ಎದುರಾಗಬಹುದಾದ ಹೆಲ್ತ್ ಎಮರ್ಜನ್ಸಿ ಎದುರಿಸುವುದಕ್ಕೆ ಸಜ್ಜಾಗಿದ್ದು, ಸದ್ಯ ಜ್ವರ, ನೆಗಡಿ, ಕೆಮ್ಮು ಪ್ರಕರಣಗಳಿಗೆ ಔಷಧೋಪಚಾರವೂ ಸಮರೋಪಾದಿಯಲ್ಲಿ ನಡೆದಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.