ಕೊರೊನಾ ಲಸಿಕೆ ಬಗ್ಗೆ ಗುಡ್ ನ್ಯೂಸ್ ನೀಡಿದ ವಿಶ್ವ ಆರೋಗ್ಯ ಸಂಸ್ಥೆ...!
ಈ ವರ್ಷಾಂತ್ಯಕ್ಕೆ COVID-19 ಲಸಿಕೆ ಸಿದ್ಧವಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ (WHO) ಮುಖ್ಯಸ್ಥರು ಮಂಗಳವಾರ ವಿವರಿಸಿದ್ದಾರೆ.
ನವದೆಹಲಿ: ಈ ವರ್ಷಾಂತ್ಯಕ್ಕೆ COVID-19 ಲಸಿಕೆ ಸಿದ್ಧವಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ (WHO) ಮುಖ್ಯಸ್ಥರು ಮಂಗಳವಾರ ವಿವರಿಸಿದ್ದಾರೆ.
ಇನ್ನೂ ಎಷ್ಟು ತಿಂಗಳು ಮುಂದುವರೆಯಲಿದೆ ಕರೋನಾ ಕಾಳಗ, ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು?
ಸಾಂಕ್ರಾಮಿಕ ರೋಗದ ಕುರಿತು ಅದರ ಕಾರ್ಯನಿರ್ವಾಹಕ ಮಂಡಳಿಯ ಎರಡು ದಿನಗಳ ಸಭೆಯ ಅಂತ್ಯವನ್ನು ಉದ್ದೇಶಿಸಿ ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ಹೀಗೆ ಹೇಳಿದರು: "ನಮಗೆ ಲಸಿಕೆಗಳು ಬೇಕಾಗುತ್ತವೆ ಮತ್ತು ಈ ವರ್ಷದ ಅಂತ್ಯದ ವೇಳೆಗೆ ನಮಗೆ ಲಸಿಕೆ ಸಿಗಬಹುದೆಂಬ ಭರವಸೆ ಇದೆ' ಎಂದು ತಿಳಿಸಿದರು.
ಕರೋನಾ ಕೊನೆಯ ಸಾಂಕ್ರಾಮಿಕವಲ್ಲ, ಮುಂದಿನ ಸವಾಲಿಗೆ ಜಗತ್ತು ಸಿದ್ಧವಾಗಬೇಕಿದೆ: WHO
ಡಬ್ಲ್ಯುಎಚ್‌ಒ ನೇತೃತ್ವದ ಕೋವಾಕ್ಸ್ ಜಾಗತಿಕ ಲಸಿಕೆ ಸೌಲಭ್ಯದ ಒಂಬತ್ತು ಪ್ರಾಯೋಗಿಕ ಲಸಿಕೆಗಳು 2021 ರ ಅಂತ್ಯದ ವೇಳೆಗೆ 2 ಬಿಲಿಯನ್ ಪ್ರಮಾಣವನ್ನು ವಿತರಿಸುವ ಗುರಿಯನ್ನು ಹೊಂದಿವೆ.