ಮೆದುಳು ಕ್ಯಾನ್ಸರ್ ವಿರುದ್ಧದ ಸಮರ; ಭಾರತದಲ್ಲಿ ಶೀಘ್ರ ಪತ್ತೆಮಾಡಬೇಕಾದ ತುರ್ತು ಅಗತ್ಯ
ಮೆದುಳಿನ ಕ್ಯಾನ್ಸರ್ ಒಂದು ಸಂಕೀರ್ಣ ಮತ್ತು ಸಂಭಾವ್ಯ ಮಾರಣಾಂತಿಕ ಸ್ಥಿತಿಯಾಗಿದ್ದು ಅದು ಪ್ರಪಂಚದಾದ್ಯಂತ ಸಾವಿರಾರು ವ್ಯಕ್ತಿಗಳ ಮೇಲೆ ಪರಿಣಾಮ ಬೀರುತ್ತದೆ.ಭಾರತದಲ್ಲಿ, ಮೆದುಳಿನ ಕ್ಯಾನ್ಸರ್ ಹರಡುವಿಕೆಯು ಕಳವಳಕ್ಕೆ ಕಾರಣವಾಗಿದೆ, ಅದರ ರೋಗಲಕ್ಷಣಗಳ ಬಗ್ಗೆ ಹೆಚ್ಚಿನ ಜಾಗೃತಿಯ ಅಗತ್ಯತೆ ಮತ್ತು ಆರಂಭಿಕ ಪತ್ತೆಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ.
ಬೆಂಗಳೂರು: ಮೆದುಳು ಕ್ಯಾನ್ಸರ್ ವಿಶ್ವವ್ಯಾಪಿಯಾಗಿ ಸಾವಿರಾರು ಜನರ ಮೇಲೆ ಪರಿಣಾಮ ಬೀರುವ ಒಂದು ಸಂಕೀರ್ಣ ಮತ್ತು ಸಂಭಾವ್ಯ ಮಾರಣಾಂತಿಕ ಸ್ಥಿತಿಯಾಗಿದೆ. ಭಾರತದಲ್ಲಿ ಮೆದುಳು ಕ್ಯಾನ್ಸರ್ ಹರಡುತ್ತಿರುವುದು ಕಳವಳ ಮೂಡಲು ಕಾರಣವಾಗಿದಲ್ಲದೇ ಅದರ ರೋಗಲಕ್ಷಣಗಳ ಬಗ್ಗೆ ಹೆಚ್ಚಿನ ಜಾಗೃತಿಯ ಅಗತ್ಯ ಮತ್ತು ಶೀಘ್ರ ಪತ್ತೆ ಮಾಡಬೇಕೆಂಬುದನ್ನು ಪ್ರಮುಖವಾಗಿ ಎತ್ತಿ ತೋರಿಸುತ್ತದೆ.
ಮೆದುಳು ಅಥವಾ ಹತ್ತಿರದ ರಚನೆಗಳೊಳಗಿನ ಜೀವಕೋಶಗಳ ಅಸಹಜ ಬೆಳವಣಿಗೆಯನ್ನು ಮೆದುಳು ಕ್ಯಾನ್ಸರ್ ಸೂಚಿಸುತ್ತದೆ. ಮೆದುಳಿನಲ್ಲಿ ಪ್ರಾಥಮಿಕ ಮೆದುಳಿನ ಗೆಡ್ಡೆಗಳು ಹುಟ್ಟುತ್ತವೆ. ದೇಹದ ಇತರ ಭಾಗಗಳಿಂದ ಕ್ಯಾನ್ಸರ್ ಹರಡಿದಾಗ ಸೆಕೆಂಡರಿ ಗೆಡ್ಡೆಗಳು ಕಾಣಿಸಿಕೊಳ್ಳುತ್ತವೆ. ಸಾಮಾನ್ಯ ರೀತಿಯ ಮೆದುಳಿನ ಕ್ಯಾನ್ಸರ್‌ಗಳಲ್ಲಿ ಗ್ಲಿಯೊಮಾಗಳು, ಮೆನಿಂಜಿಯೋಮಾಗಳು, ಮೆಡುಲ್ಲೊಬ್ಲಾಸ್ಟೊಮಾಗಳು ಮತ್ತು ಆಸ್ಟ್ರೋಸೈಟೋಮಾಗಳು ಸೇರಿರುತ್ತವೆ.
ಗೆಡ್ಡೆಯ ಸ್ಥಳ, ಗಾತ್ರ ಮತ್ತು ಬೆಳವಣಿಗೆ ದರ ಆಧರಿಸಿ ಮೆದುಳು ಕ್ಯಾನ್ಸರ್ ಲಕ್ಷಣಗಳು ಬದಲಾಗಬಹುದು. ಆದಾಗ್ಯೂ, ಮೆದುಳು ಕ್ಯಾನ್ಸರ್ ರೋಗಿಗಳ ಚಿಕಿತ್ಸಾ ಫಲಿತಾಂಶಗಳನ್ನು ಸುಧಾರಿಸುವಲ್ಲಿ ಶೀಘ್ರ ಪತ್ತೆ ಮಾಡುವುದು ಪ್ರಮುಖ ಪಾತ್ರ ವಹಿಸುತ್ತದೆ. ಗಮನಿಸಬೇಕಾದ ಕೆಲವು ಸಾಮಾನ್ಯ ಎಚ್ಚರಿಕೆ ಲಕ್ಷಣಗಳು ಇಂತಿವೆ:
ಇದನ್ನೂ ಓದಿ: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ
1. ತಲೆನೋವು: ಆಗಾಗ್ಗೆ ಅಥವಾ ತೀವ್ರವಾದ ತಲೆನೋವು, ವಿಶೇಷವಾಗಿ ಅವು ಕಾಲಾನಂತರದಲ್ಲಿ ಹದಗೆಟ್ಟರೆ ಅಥವಾ ಬೆಳಿಗ್ಗೆ ಸಂಭವಿಸಿದರೆ, ಮೆದುಳಿನಲ್ಲಿ ಗೆಡ್ಡೆ ಇರುವುದನ್ನು ಸೂಚಿಸಬಹುದು
2. ದಿಢೀರ್ ರೋಗಗ್ರಸ್ತವಾಗುವುದು: ವಿವರಿಸಲಾಗದ ರೀತಿಯಲ್ಲಿ ರೋಗಗ್ರಸ್ತವಾಗುವುದು ಅಥವಾ ಸೆಳೆತಗಳು ಮೆದುಳು ಕ್ಯಾನ್ಸರ್‌ನ ಚಿನ್ಹೆಯಾಗಿರಬಹುದು, ವಿಶೇಷವಾಗಿ ರೋಗಗ್ರಸ್ತವಾಗುವುದರ ಹಿಂದಿನ ಇತಿಹಾಸವಿಲ್ಲದ ವ್ಯಕ್ತಿಗಳಲ್ಲಿ ಅವು ಸಂಭವಿಸಿದರೆ ಅದು ಮೆದುಳು ಕ್ಯಾನ್ಸರ್‌ನ ಲಕ್ಷಣವಾಗಿರುವ ಸಾಧ್ಯತೆ ಹೆಚ್ಚು.
3. ಅರಿವಿನ ಅಥವಾ ಗ್ರಹಿಕೆಯಲ್ಲಿನ ಬದಲಾವಣೆಗಳು: ನೆನಪಿನ ಶಕ್ತಿ, ಏಕಾಗ್ರತೆ ಅಥವಾ ಒಟ್ಟಾರೆ ಅರಿವಿನ ಸಾಮರ್ಥ್ಯಗಳಲ್ಲಿ ಹಠಾತ್ ಅಥವಾ ಪ್ರಗತ್ಯಾತ್ಮಕ ಬದಲಾವಣೆಗಳನ್ನು ನಿರ್ಲಕ್ಷಿಸಬಾರದು.
4. ದೃಷ್ಟಿ ಮತ್ತು ಶ್ರವಣ ತೊಂದರೆಗಳು: ಮಸುಕಾದ ದೃಷ್ಟಿ ಅಥವಾ ಎರಡೆರಡು ಕಾಣುವುದು, ಶ್ರವಣ ನಷ್ಟ, ಅಥವಾ ಇತರ ಇಂದ್ರಿಯ ಕಾರ್ಯಗಳಲ್ಲಿನ ಅಡಚಣೆಗಳು ದೃಷ್ಟಿ ಸಂಬAಧಿತ ಅಥವಾ ಶ್ರವಣೇಂದ್ರಿಯ ಸಂಬAಧಿತ ನರಗಳ ಮೇಲೆ ಪರಿಣಾಮ ಬೀರುವ ಮೆದುಳಿನ ಗೆಡ್ಡೆ ಇರುವುದನ್ನು ಸೂಚಿಸಬಹುದು.
5. ಸಮತೋಲನ ಮತ್ತು ಸಮನ್ವಯದ ಸಮಸ್ಯೆಗಳು: ನಡೆಯಲು ತೊಂದರೆ, ಸಮತೋಲನ ಕಳೆದುಕೊಳ್ಳುವುದು ಅಥವಾ ವಿವರಿಸಲಾಗದಂತಹ ಕೆಳಗೆ ಬೀಳುವ ಘಟನೆಗಳು ಮೆದುಳು ಕ್ಯಾನ್ಸರ್‌ನ ಲಕ್ಷಣಗಳಾಗಿರಬಹುದು.
6. ವಾಕರಿಕೆ ಮತ್ತು ವಾಂತಿ: ನಿರಂತರ ವಾಕರಿಕೆ, ವಾಂತಿ, ಅಥವಾ ಬೆಳಗಿನ ಬೇನೆಯಂತಹ ಲಕ್ಷಣಗಳು ಮೆದುಳಿನೊಳಗೆ ಒತ್ತಡ ಹೆಚ್ಚಳದ ಪರಿಣಾಮವಾಗಿರಬಹುದು.
7. ವ್ಯಕ್ತಿತ್ವ ಅಥವಾ ಮನಸ್ಥಿತಿಯಲ್ಲಿ ಬದಲಾವಣೆಗಳು: ಒಬ್ಬ ವ್ಯಕ್ತಿಯಲ್ಲಿ ಸಾಮಾನ್ಯವಾಗಿ ಕಾಣದಂತಹ ಮನಸ್ಥಿತಿ(ಮೂಡ್ ಸ್ವಿಂಗ್ಸ್) ಬದಲಾವಣೆಗಳು, ಕಿರಿಕಿರಿ, ಖಿನ್ನತೆ ಅಥವಾ ಇತರ ವ್ಯಕ್ತಿತ್ವದಲ್ಲಿನ ಬದಲಾವಣೆಗಳು ಮೆದುಳಿನ ಗೆಡ್ಡೆಗಳಿಗೆ ಸಂಬಂಧಿಸಿರಬಹುದು.
ಇದನ್ನೂ ಓದಿ: Loksabha Election 2024: ಬಿಜೆಪಿ ಹಾಲಿ ಸಂಸದರಿಗೆ ಟಿಕೆಟ್ ತಪ್ಪಿದರೆ "ಕೈ" ಗಾಳ
ದುರದೃಷ್ಟವಶಾತ್, ಮಿದುಳಿನ ಕ್ಯಾನ್ಸರ್‌ನ ಹಲವು ರೋಗಲಕ್ಷಣಗಳು ಅನಿರ್ದಿಷ್ಟವಾಗಿರುವುದಲ್ಲದೇ ಇತರ ಪರಿಸ್ಥಿತಿಗಳನ್ನು ಅನುಕರಿಸಬಹುದು. ಆದರೂ ಮೇಲೆ ತಿಳಿಸಲಾದ ಯಾವುದೇ ರೋಗಲಕ್ಷಣಗಳು ಕಾಲಾನಂತರದಲ್ಲಿ ಮುಂದುವರಿದರೆ ಅಥವಾ ಪರಿಸ್ಥಿತಿ ಹದಗೆಟ್ಟರೆ, ತಕ್ಷಣವೇ ವೈದ್ಯಕೀಯ ನೆರವು ಪಡೆಯುವುದು ಬಹಳ ಮುಖ್ಯವಾಗಿರುತ್ತದೆ. ಸಮಯೋಚಿತ ರೋಗನಿರ್ಣಯ ಉತ್ತಮ ಚಿಕಿತ್ಸಾ ಆಯ್ಕೆಗಳನ್ನು ಮತ್ತು ರೋಗ ಕುರಿತು ಸುಧಾರಿತ ಮುನ್ಸೂಚನೆ ಹೊಂದಲು ಅವಕಾಶ ಮಾಡಿಕೊಡುತ್ತದೆ.
ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ದೇಶದಲ್ಲಿ ವಾರ್ಷಿಕವಾಗಿ ಸುಮಾರು 40,000 ಹೊಸ ಮೆದುಳಿನ ಗೆಡ್ಡೆಗಳ ಪ್ರಕರಣಗಳ ರೋಗನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಅಂದಾಜು ಮಾಡಲಾಗಿದೆ. ಮೆದುಳು ಕ್ಯಾನ್ಸರ್ ಎಲ್ಲಾ ವಯೋಮಿತಿಯ ಜನರ ಮೇಲೆ ಪರಿಣಾಮ ಬೀರುತ್ತದೆ, 50 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವಯಸ್ಕರಲ್ಲಿ ಇದು ಕಾಣಿಸಿಕೊಳ್ಳುವ ಸಂಭವ ಹೆಚ್ಚು ಎಂದು ಗಮನಿಸಬಹುದು. ಮೆದುಳು ಕ್ಯಾನ್ಸರ್‌ನ ನಿಖರ ಕಾರಣಗಳು ಇನ್ನೂ ಅಸ್ಪಷ್ಟವಾಗಿಯೇ ಉಳಿದಿವೆ, ಆದರೆ ವಿಕಿರಣದ ಸಂಪರ್ಕ ಹೊಂದುವುದು, ಕುಟುಂಬದಲ್ಲಿ ರೋಗದ ಇತಿಹಾಸ ಮತ್ತು ಕೆಲವು ಆನುವಂಶಿಕ ತೊಂದರೆಗಳಂತಹ ಅಂಶಗಳು ಅದರ ಬೆಳವಣಿಗೆಗೆ ಕೊಡುಗೆ ನೀಡಬಹುದು.
-ಡಾ.ಎಚ್.ಸಂತೋಷ್.
ನರವಿಜ್ಞಾನ ಶಾಸ್ತ್ರ ಸಲಹಾ ತಜ್ಞರು ಮತ್ತು ಮಕ್ಕಳ ನರರೋಗ ಶಾಸ್ತ್ರ ತಜ್ಞರು
ಸ್ಪೆಷಲಿಸ್ಟ್ ಆಸ್ಪತ್ರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.