foods to increase hemoglobin: ರಕ್ತಹೀನತೆಯ ಸಮಸ್ಯೆಯಿಂದ ಅನೇಕ ಆರೋಗ್ಯ ಅಪಾಯಗಳಿವೆ. ಹಿಮೋಗ್ಲೋಬಿನ್...ಇದು ಕೆಂಪು ರಕ್ತ ಕಣಗಳಲ್ಲಿ ಇರುವ ಪ್ರಮುಖ ಪ್ರೋಟೀನ್. ಹಿಮೋಗ್ಲೋಬಿನ್ ಕೊರತೆಯು ರಕ್ತಹೀನತೆಗೆ ಕಾರಣವಾಗುತ್ತದೆ. ರಕ್ತದಲ್ಲಿ ಹಿಮೋಗ್ಲೋಬಿನ್ ಹೇರಳವಾಗಿರುವುದು ಅವಶ್ಯಕ. ಏಕೆಂದರೆ ದೇಹದ ಎಲ್ಲಾ ಅಂಗಗಳಿಗೆ ಆಮ್ಲಜನಕವನ್ನು ಸಾಗಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಹಿಮೋಗ್ಲೋಬಿನ್ ಸಾಕಷ್ಟಿದ್ದರೆ ಮಾತ್ರ ಹೆಂಗಸರು ಮತ್ತು ಪುರುಷರಿಬ್ಬರೂ ಆರೋಗ್ಯಕರವಾಗಿ ಎಲ್ಲಾ ಕೆಲಸಗಳನ್ನು ಮಾಡಬಹುದು.  ಹಿಮೋಗ್ಲೋಬಿನ್ ಮಟ್ಟವು ಕಡಿಮೆಯಾದರೆ, ತೀವ್ರ ದೌರ್ಬಲ್ಯ, ಉಸಿರಾಟದ ತೊಂದರೆ, ತಲೆತಿರುಗುವಿಕೆ, ಆಯಾಸ ಮತ್ತು ತಲೆನೋವು ಮುಂತಾದ ಲಕ್ಷಣಗಳು ಕಂಡುಬರುತ್ತವೆ. ಪ್ರತಿದಿನ ಹಿಮೋಗ್ಲೋಬಿನ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸಲು ಪ್ರಯತ್ನಿಸಿ.


COMMERCIAL BREAK
SCROLL TO CONTINUE READING

ರಕ್ತಹೀನತೆ ಸಮಸ್ಯೆ
ಹಿಮೋಗ್ಲೋಬಿನ್ ರಕ್ತದಲ್ಲಿ ಕಬ್ಬಿಣದ ಭರಿತ ಪ್ರೋಟೀನ್ ಆಗಿದೆ. ಹಾಗಾಗಿ ಹಿಮೋಗ್ಲೋಬಿನ್ ಕಡಿಮೆಯಾದರೆ ರಕ್ತಹೀನತೆಯ ಸಮಸ್ಯೆ ಬರುತ್ತದೆ ಎನ್ನುತ್ತಾರೆ ವೈದ್ಯರು. ಹಿಮೋಗ್ಲೋಬಿನ್ ಕಡಿಮೆಯಾಗುವುದರಿಂದ ಹೃದಯದ ತೊಂದರೆಗಳು ಸಹ ಉಂಟಾಗಬಹುದು. ನಮ್ಮ ದೇಶದಲ್ಲಿ ಶೇಕಡಾ 56 ರಷ್ಟು ಮಹಿಳೆಯರು ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಿಮೋಗ್ಲೋಬಿನ್ ಉತ್ಪಾದನೆಯನ್ನು ಹೆಚ್ಚಿಸಲು ಬಿ ಜೀವಸತ್ವಗಳು, ವಿಟಮಿನ್ ಸಿ ಮತ್ತು ಕಬ್ಬಿಣದಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಲು ತಜ್ಙರು ಸಲಹೆ ನೀಡುತ್ತಾರೆ. ಕೆಲವು ವೈದ್ಯರು ಪೂರಕಗಳನ್ನು ನೀಡುತ್ತಾರೆ.


ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುವ ಕೆಲವು ವಸ್ತುಗಳು ನಮಗೆ ಲಭ್ಯವಿವೆ . ಆದರೆ ಹೆಚ್ಚಿನವರು ಅವುಗಳನ್ನು ತಿನ್ನಲು ಇಷ್ಟಪಡುವುದಿಲ್ಲ. ನಾವು ಇಲ್ಲಿ ಉಲ್ಲೇಖಿಸಿರುವ ಕನಿಷ್ಠ ಎರಡು ಆಹಾರಗಳನ್ನು ಪ್ರತಿದಿನ ಹೇರಳವಾಗಿ ತಿನ್ನಲು ಪ್ರಯತ್ನಿಸಿ. ಇದು ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ರಕ್ತದ ಉತ್ಪಾದನೆಯನ್ನು ಹೆಚ್ಚಿಸುತ್ತದೆ.


ಹಿಮೋಗ್ಲೋಬಿನ್ ಉತ್ಪಾದಿಸುವ ಆಹಾರಗಳು
ಲೆಟಿಸ್, ಬೀಟ್ರೂಟ್, ಸೇಬು, ಕಲ್ಲಂಗಡಿ, ದಾಳಿಂಬೆ, ಖರ್ಜೂರ, ಕುಂಬಳಕಾಯಿ ಬೀಜಗಳು, ಬಾದಾಮಿ, ಒಣದ್ರಾಕ್ಷಿಗಳನ್ನು ಹೇರಳವಾಗಿ ತಿನ್ನಬೇಕು. ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದರಿಂದ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಬಹುದು. ಇದಕ್ಕಾಗಿ ಕಿತ್ತಳೆ, ಸ್ಟ್ರಾಬೆರಿ, ಪಪ್ಪಾಯಿ, ಟೊಮೆಟೊ, ದ್ರಾಕ್ಷಿ, ನಿಂಬೆಹಣ್ಣುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಇಲ್ಲಿ ಹೇಳಿರುವ ಆಹಾರಗಳಲ್ಲಿ ಕನಿಷ್ಠ ಎರಡರಿಂದ ಐದು ಆಹಾರವನ್ನು ಪ್ರತಿದಿನ ತಿನ್ನಲು ಪ್ರಯತ್ನಿಸಿ. ಹಿಮೋಗ್ಲೋಬಿನ್ ಮಟ್ಟವು ಕಡಿಮೆಯಾಗದೆ ದೇಹಕ್ಕೆ ಸಾಕಾಗುತ್ತದೆ.


ಪ್ರತಿದಿನ ಬಾಳೆಹಣ್ಣು , ಹಸಿರು ಬೀನ್ಸ್, ಕೊಲಾರ್ಡ್ ಗ್ರೀನ್ಸ್ ಮತ್ತು ಬ್ರೊಕೊಲಿಯನ್ನು ತಿನ್ನಲು ಪ್ರಯತ್ನಿಸಿ. ಬೀಟ್ರೂಟ್ ಜ್ಯೂಸ್ ಕುಡಿಯುವುದರಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ತ್ವರಿತವಾಗಿ ಹೆಚ್ಚಾಗುತ್ತದೆ. ಅಥವಾ ದಿನಕ್ಕೆ ಒಂದು ಸೇಬು ತಿನ್ನಲು ಪ್ರಯತ್ನಿಸಿ. ದಿನಕ್ಕೆ ಎರಡು ಖರ್ಜೂರವನ್ನು ತಿನ್ನುವುದರಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಬಹುದು. ನಾಲ್ಕು ನೆನೆಸಿದ ಬಾದಾಮಿ ಮತ್ತು ಎರಡು ಒಣದ್ರಾಕ್ಷಿಗಳನ್ನು ತಿನ್ನುವುದರಿಂದ ಹೆಚ್ಚು ಹಿಮೋಗ್ಲೋಬಿನ್ ಉತ್ಪತ್ತಿಯಾಗುತ್ತದೆ. ಇಲ್ಲಿ ನೀಡಿರುವ ಆಹಾರಗಳಲ್ಲಿ ಇವುಗಳನ್ನು ತಿಂದರೂ ರಕ್ತಹೀನತೆಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.