Sugar Control Leaf: ಸಾಮಾನ್ಯವಾಗಿ ಪತ್ರಿಗಿಡ ಎಂದು ಕರೆಯಲಾಗುವ ಬೇಲಪತ್ರಿ ಮರದ ಎಲೆಗಳನ್ನು ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಇದನ್ನು ತಿನ್ನುವುದರಿಂದ ಹಲವು ರೀತಿಯ ಸಮಸ್ಯೆಗಳೂ ದೂರವಾಗುತ್ತವೆ. ಬೆಲ್ಪತ್ರಿ  ಉತ್ಕರ್ಷಣ ನಿರೋಧಕ ಮತ್ತು ಪೌಷ್ಟಿಕಾಂಶಗಳ ಆಗರವಾಗಿದೆ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ, ರೈಬೋಫ್ಲೋಬಿನ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಫೈಬರ್, ವಿಟಮಿನ್ ಬಿ1, ಬಿ6, ಬಿ12 ಗಳಿವೆ. ಹಾಗಾದರೆ ಇದನ್ನು ಹೊರತುಪಡಿಸಿ ಬೇಲ್ಪತ್ರೆ ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಮತ್ತು ಸಕ್ಕರೆ ಪ್ರಮಾಣವನ್ನು ಇದು ಹೇಗೆ ನಿಯಂತ್ರಿಸುತ್ತದೆ ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಈ ಹಸಿರು ಎಲೆ ತಿನ್ನುವುದರಿಂದಾಗುವ ಲಾಭಗಳು
ಮಲಬದ್ಧತೆಯನ್ನು ಹೋಗಲಾಡಿಸಲು ಈ ಹಸಿರು ಎಲೆಗಳು ತುಂಬಾ ಉಪಯುಕ್ತವಾಗಿವೆ. ಮಲಬದ್ಧತೆಯ ಸಮಸ್ಯೆ ಇರುವವರು ಬೆಲ್ಪತ್ರಿ ಎಲೆಗಳನ್ನು ಸ್ವಲ್ಪ ಪ್ರಮಾಣದಲ್ಲಿ ಉಪ್ಪು ಮತ್ತು ಕರಿಮೆಣಸಿನೊಂದಿಗೆ ಅಗಿಯಬಹುದು. ಇದರಿಂದ ನೀವು ಮಲಬದ್ಧತೆಯಿಂದ ಮುಕ್ತಿ ಪಡೆಯಬಹುದು.


ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತವೆ
ಹೊಟ್ಟೆಯನ್ನು ಸ್ವಚ್ಛಗೊಳಿಸಲು ಬೆಲ್ಪತ್ರಿ ಎಲೆಗಳು ತುಂಬಾ ಸಹಾಯಕವಾಗಿವೆ. ಇದು ವಿರೇಚಕ ಗುಣಗಳನ್ನು ಹೊಂದಿದೆ, ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ನಿಮಗೆ ಜೀರ್ಣಕಾರಿ ಸಮಸ್ಯೆಗಳಿದ್ದರೆ, ಬೆಲ್ ಅಥವಾ ಬೆಲ್ಪತ್ರಿ ಎಲೆಗಳನ್ನು ತೆಗೆದುಕೊಳ್ಳಿ.


ಇದನ್ನೂ ಓದಿ-Summer Tips: ಬೇಸಿಗೆ ಕಾಲದಲ್ಲಿ ಲಾವಂಚ ಜ್ಯೂಸ್ ಸೇವನೆಯಿಂದ ಆಗುವ ಲಾಭಗಳು ನಿಮಗೆ ತಿಳಿದಿವೆಯೇ?


ಜೀವನಶೈಲಿಯಲ್ಲಿ  ಬೆಲ್ಪತ್ರಿ ಎಲೆಗಳನ್ನು ಶಾಮೀಲುಗೊಳಿಸಿ
ಇಂದಿನ ಜೀವನಶೈಲಿಯಲ್ಲಿ ನಿಮ್ಮನ್ನು ನೀವು ಫಿಟ್ ಆಗಿಟ್ಟುಕೊಳ್ಳುವುದು ತುಂಬಾ ಮುಖ್ಯ. ಇಂತಹ ಪರಿಸ್ಥಿತಿಯಲ್ಲಿ, ಅನೇಕ ರೀತಿಯ ಸಮಸ್ಯೆಗಳು ಜನರನ್ನು ಸುತ್ತುವರಿಯಲು ಪ್ರಾರಂಭಿಸುತ್ತವೆ. ಇದರಲ್ಲಿ ಮಧುಮೇಹ, ಹೃದಯಾಘಾತ, ಅಧಿಕ ಕೊಲೆಸ್ಟ್ರಾಲ್ ಮುಂತಾದ ಕಾಯಿಲೆಗಳು ಸೇರಿವೆ. ಅಂತಹ ಪರಿಸ್ಥಿತಿಯಲ್ಲಿ, ಬೇಲ್ಪತ್ರೆ ಎಲೆಗಳನ್ನು ತಿನ್ನುವುದರಿಂದ ನೀವು ಖಂಡಿತವಾಗಿಯೂ ಪ್ರಯೋಜನವನ್ನು ಪಡೆಯಬಹುದು.


ಇದನ್ನೂ ಓದಿ-ಕೇವಲ 3 ತಿಂಗಳಲ್ಲಿ ಕೊಲೆಸ್ಟ್ರಾಲ್ ಸಮಸ್ಯೆಗೆ ಗುಡ್ ಬೈ ಹೇಳಬೇಕೆ? ಇಂದಿನಿಂದಲೇ ಈ ಕೆಲಸ ಮಾಡಿ!


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.