ಚಳಿಗಾಲದಲ್ಲಿ ತೇವಾಂಶದ ಕೊರತೆಯಿಂದ ಕಣ್ಣಿನ ಸಮಸ್ಯೆ, ಈ ರೀತಿ ಕಾಳಜಿ ವಹಿಸಿ
ಋತುವಿಗೆ ತಕ್ಕಂತೆ ಚರ್ಮದ ಬಗ್ಗೆ ಕಾಳಜಿ ವಹಿಸುವಂತೆ ಚಳಿಗಾಲದಲ್ಲಿ ನಿಮ್ಮ ಕಣ್ಣಿನ ಆರೈಕೆ ಮರೆಯದಿರಿ.
ಚಳಿಗಾಲದಲ್ಲಿ, ದೇಹದ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಜ್ವರ, ಕೆಮ್ಮು ಚಳಿಗಾಲದಲ್ಲಿ ಸಾಮಾನ್ಯವಾಗಿರುತ್ತದೆ. ಹಾಗೆಯೇ ಚಳಿಗಾಲದಲ್ಲಿ ಚರ್ಮದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗಿರುತ್ತದೆ. ಚರ್ಮದ ಯಾವುದೇ ರೀತಿಯ ಸಮಸ್ಯೆಗಳಿಗೆ ಬಳಿಕವೂ ನಾವು ಚಿಕಿತ್ಸೆ ತೆಗೆದುಕೊಳ್ಳಬಹುದು. ಆದರೆ ಕಣ್ಣಿನ ಆರೈಕೆ ಮರೆಯದಿರಿ.
ತುರಿಕೆ, ಶುಷ್ಕತೆ ಸಾಮಾನ್ಯ ಸಮಸ್ಯೆ:
ಚಳಿಗಾಲದಲ್ಲಿ ಕೆಲವರು ಕಣ್ಣಿನ ಸಮಸ್ಯೆ ಎದುರಿಸುತ್ತಾರೆ. ಚಳಿಗಾಲದಲ್ಲಿ ಕಡಿಮೆ ತೇವಾಂಶದ ಕಾರಣ, ಕಣ್ಣಿನಲ್ಲಿ ಶುಷ್ಕತೆ, ತುರಿಕೆ ಸಾಮಾನ್ಯ ಸಮಸ್ಯೆಯಾಗಿದೆ. ಕಣ್ಣಿನಲ್ಲಿ ತೇವಾಂಶ ಕಾಯ್ದುಕೊಳ್ಳುವುದರಿಂದ ಚಳಿಗಾಲದಲ್ಲಿ ಕಣ್ಣಿನ ರಕ್ಷಣೆ ಮಾಡಬಹುದು ಎನ್ನುತ್ತಾರೆ ತಜ್ಞರು.
ಬರ್ಮಿಂಗ್ಹ್ಯಾಮ್ ನಲ್ಲಿ ಅಲಬಾಮ ವಿಶ್ವವಿದ್ಯಾನಿಲಯದ ನೇತ್ರವಿಜ್ಞಾನ ವಿಭಾಗದ ಬೋಧಕರಾದ ಮರಿಸಾ ಲೋಕಿ, ಅವರ ಆರೋಗ್ಯ ದಿನದ ವರದಿಯಲ್ಲಿ "ಸರಾಸರಿಯಾಗಿ, ತಂಪಾದ ವಾತಾವರಣದಲ್ಲಿ ತೇವಾಂಶ ಕಡಿಮೆಯಾಗುತ್ತದೆ. ಜೊತೆಗೆ, ಹೆಚ್ಚಿನ ಜನರು ತಮ್ಮ ಮನೆಗಳಲ್ಲಿ ಅಥವಾ ಕಚೇರಿಗಳಲ್ಲಿ ಹೀಟರ್ ಬಳಸುತ್ತಾರೆ." ಹೀಗಾಗಿಯೇ ಕಣ್ಣಿನಲ್ಲಿ ತೇವಾಂಶದ ಕೊರತೆ ಕಂಡು ಬರುತ್ತದೆ ಎಂದು ತಿಳಿಸಿದ್ದಾರೆ.
ಅಧ್ಯಯನವು ಏನು ಹೇಳುತ್ತದೆ?
ಈ ಅಧ್ಯಯನದಲ್ಲಿ, ತೇವಾಂಶವನ್ನು ಕಾಯ್ದುಕೊಳ್ಳುವ ವಿಧಾನಗಳ ಬಗ್ಗೆ ಮಾಹಿತಿಯನ್ನು ಪಡೆಯಲಾಗಿದೆ, ಹೀಗಾಗಿ ಚಳಿಗಾಲದಲ್ಲಿ ಕಡಿಮೆ ತೇವಾಂಶದ ಕಾರಣ, ಕಣ್ಣಿನಲ್ಲಿ ಶುಷ್ಕತೆ ಎದುರಿಸಲು ಅಗತ್ಯವಿಲ್ಲ. ನೀವು ಬಿಸಿ ಸ್ಥಳಗಳಲ್ಲಿ ಸಮಯವನ್ನು ಕಳೆಯುತ್ತಿದ್ದರೆ, ಸಾಕಷ್ಟು ದ್ರವವನ್ನು ಸೇವಿಸಿ. ಇದು ನಿಮ್ಮ ದೇಹವನ್ನು ಆರೋಗ್ಯವಾಗಿರಿಸುವುದರೆ ಜೊತೆಗೆ ನಿಮ್ಮ ಕಣ್ಣಿನಲ್ಲಿ ತೇವಾಂಶವನ್ನು ಇಡಲು ಸಹಾಯ ಮಾಡುತ್ತದೆ ಎಂದು ಲೋಕಿ ತಿಳಿಸಿದ್ದಾರೆ.
ಹೀಟರ್ ಉಷ್ಣಾಂಶ ನಿಮ್ಮ ಮುಖದ ಮೇಲೆ ನೇರವಾಗಿ ಬೀಳದಂತೆ ನೋಡಿಕೊಳ್ಳಿ. ಏಕೆಂದರೆ ಇದು ನಿಮ್ಮ ಕಣ್ಣುಗಳ ತೇವಾಂಶವನ್ನು ಒಣಗಿಸಬಹುದು. ಧೂಳಿನ ಕಣಗಳು ಅಥವಾ ಶೀತ ಗಾಳಿಯಿಂದ ಕಣ್ಣುಗಳನ್ನು ರಕ್ಷಿಸಲು ಕನ್ನಡಕ ಮತ್ತು ಕ್ಯಾಪ್ ಅನ್ನು ಬಳಸಬೇಕೆಂದು ವರದಿಯಲ್ಲಿ ಹೇಳಲಾಗಿದೆ.