ನವದೆಹಲಿ: ತೂಕ ಇಳಿಕೆ ಮಾಡಲು ನೀವು ಬೇವಿನ ಹೂವುಗಳು ಮತ್ತು ನಿಂಬೆಯನ್ನು ಸಹ ಬಳಸಬಹುದು. ಆಯುರ್ವೇದದಲ್ಲಿ ಬೇವಿಗೆ ವಿಶೇಷ ಪ್ರಾಮುಖ್ಯತೆ ಇದೆ ಎಂದು ಎಲ್ಲರಿಗೂ ತಿಳಿದಿದೆ. ಇದರ ಬಳಕೆಯಿಂದ ತ್ವಚೆಯ ಸಮಸ್ಯೆಯಿಂದ ಹಿಡಿದು ತೂಕ  ಹೆಚ್ಚಾಗುವ ಸಮಸ್ಯೆಯನ್ನು ನೀಗಿಸಬಹುದು, ಆದರೆ ನೀವು ಎಂದಾದರೂ ತೂಕ ಇಳಿಸಲು ಬೇವಿನ ಹೂವುಗಳನ್ನು ಬಳಸಿದ್ದೀರಾ? ನೀವು ಬೇವಿನ ಹೂವುಗಳ ಚಹಾವನ್ನು ಸೇವಿಸಿದರೆ, ನಿಮ್ಮ ತೂಕವು ವೇಗವಾಗಿ ಇಳಿಕೆಯಾಗಲು ಆರಂಭಿಸುತ್ತದೆ.

COMMERCIAL BREAK
SCROLL TO CONTINUE READING

ತೂಕ ಇಳಿಸಿಕೊಳ್ಳಲು ಬೇವಿನ ಹೂವಿನ ಚಹಾವನ್ನು ಸೇವಿಸಬಹುದು. ಆದರೆ, ಈ ಚಹಾ ತಯಾರಿಸಲು ನಿಮಗೆ ಹೆಚ್ಚು ಪರಿಶ್ರಮ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಮೊದಲು ನೀವು ತಾಜಾ ಬೇವಿನ ಹೂವುಗಳನ್ನು ತೆಗೆದುಕೊಳ್ಳಿ. ಈಗ ಈ ಹೂವುಗಳನ್ನು ಚೆನ್ನಾಗಿ ತೊಳೆದುಕೊಳ್ಳಿ. ಇದರ ನಂತರ ಅದನ್ನು 1 ಕಪ್ ನೀರಿನಲ್ಲಿ ಚೆನ್ನಾಗಿ ಕುದಿಸಿ. ಈ ಚಹಾ ಸಿದ್ಧವಾಗಲಿದೆ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಈ ಚಹಾವನ್ನು ಸೇವಿಸುವುದರಿಂದ ದೇಹದ ತೂಕ ಇಳಿಕೆಯಾಗುತ್ತದೆ.


ಇದನ್ನೂ ಓದಿ-ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿ ನೀಡುತ್ತೇ ಮೊಸರು, ಈ 3 ವಿಧಗಳಲ್ಲಿ ಬಳಸಿ!

ಜೇನುತುಪ್ಪದ ಜೊತೆಗೆ ಬೇವಿನ ಹೂವುಗಳನ್ನು ಬಳಸಿ ಹೊಟ್ಟೆ ಕೊಬ್ಬು ಕರಗಿಸಿಕೊಳ್ಳಬಹುದು
ಇದಲ್ಲದೇ ಬೇವಿನ ಹೂವು ಮತ್ತು ಜೇನುತುಪ್ಪವನ್ನು ಒಟ್ಟಿಗೆ ಬಳಸುವುದರಿಂದ ತೂಕವನ್ನು ಇಳಿಕೆ ಮಾಡಿಕೊಳ್ಳಬಹುದು. ಈ ಎರಡರ ಸಂಯೋಜನೆಯು ನಿಮ್ಮ ದೇಹದ ತೂಕವನ್ನು ತ್ವರಿತವಾಗಿ ಕಡಿಮೆ ಮಾಡಲು ತುಂಬಾ ಪರಿಣಾಮಕಾರಿಯಾಗಿದೆ. ಇದನ್ನು ಬಳಸಲು, ಕೆಲವು ಬೇವಿನ ಹೂವುಗಳನ್ನು ತೆಗೆದುಕೊಳ್ಳಿ. ಈಗ ಅವುಗಳನ್ನು ಚೆನ್ನಾಗಿ ಪುಡಿಮಾಡಿ. ಇದರ ನಂತರ 1 ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಮಿಶ್ರಣವನ್ನು ಸೇವಿಸುವುದರಿಂದ ಹೊಟ್ಟೆಯ ಕೊಬ್ಬು ತ್ವರಿತವಾಗಿ ಕಡಿಮೆಯಾಗುತ್ತದೆ. ಇದರೊಂದಿಗೆ, ನೀವು ಬೇವಿನ ಚಹಾಕ್ಕೆ ನಿಂಬೆಯನ್ನೂ ಸಹ ಸೇರಿಸಬಹುದು.


ಇದನ್ನೂ ಓದಿ-ಮಧುಮೇಹದಿಂದ ಹಿಡಿದು ತೂಕ ಇಳಿಕೆಯವರೆಗೆ ಹಲವು ಕಾಯಿಲೆಗಳಿಗೆ ರಾಮಬಾಣ ಈ ನೀರು!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.