High Cholesterol: ಕೇವಲ ಒಂದೇ ಒಂದು ವಾರದಲ್ಲಿ ಹೈ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತೆ ಈ 4 ತರಕಾರಿ
Vegetables For High Cholesterol: ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಂತೆ ಆರೋಗ್ಯ ಸಮಸ್ಯೆಗಳು ಕೂಡ ಉಲ್ಬಣಗೊಳ್ಳುತ್ತವೆ. ನಿಮ್ಮ ದೈನಂದಿನ ಆಹಾರದಲ್ಲಿ ಕೆಲವು ತರಕಾರಿಗಳನ್ನು ಸೇರಿಸುವ ಮೂಲಕ ನೀವು ಈ ಸಮಸ್ಯೆಯಿಂದ ಒಂದೇ ಒಂದು ವಾರದಲ್ಲಿ ಪರಿಹಾರ ಪಡೆಯಬಹುದು.
Vegetables For High Cholesterol: ಪ್ರಸ್ತುತ ಬದಲಾದ ಜೀವನಶೈಲಿಯಲ್ಲಿ ಕೊಲೆಸ್ಟ್ರಾಲ್ ಸಮಸ್ಯೆ ಕೂಡ ಸಾಮಾನ್ಯವಾಗಿ ಬಿಟ್ಟಿದೆ. ದೇಹದಲ್ಲಿ ನಮ್ಮ ರಕ್ತನಾಳಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂದರೆ ಎಲ್‌ಡಿಎಲ್ ಮಟ್ಟವು ಹೆಚ್ಚಾದಾಗ ಇದು ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವೂ ಕೂಡ ಹೆಚ್ಚಾಗುತ್ತವೆ.
ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಳಕ್ಕೆ ನಮ್ಮ ಅನಾರೋಗ್ಯಕರ ಜೀವನಶೈಲಿ, ಆಹಾರ ಪದ್ದತಿಯೇ ಮುಖ್ಯ ಕಾರಣ. ಹಾಗಾಗಿ, ನಮ್ಮ ದೈನಂದಿನ ಜೀವನದಲ್ಲಿ ಆರೋಗ್ಯಕರ ಆಹಾರ ಪದ್ದತಿಯಿಂದ ರೂಢಿಸಿಕೊಳ್ಳುವುದರಿಂದ ಹಲವು ರೋಗಗಳಿಂದ ದೂರ ಉಳಿಯಬಹುದು. ತಜ್ಞರ ಪ್ರಕಾರ, ನಮ್ಮ ಡಯಟ್ ನಲ್ಲಿ ಈ ನಾಲ್ಕೇ ನಾಲ್ಕು ತರಕಾರಿಗಳನ್ನು ಸೇರಿಸುವುದರಿಂದ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕೇವಲ ಒಂದೇ ವಾರದಲ್ಲಿ ಕಡಿಮೆ ಮಾಡಬಹುದು ಎಂದು ಹೇಳಲಾಗುತ್ತದೆ.
ಹೈ ಕೊಲೆಸ್ಟ್ರಾಲ್ ನಿಯಂತ್ರಿಸುವ ತರಕಾರಿಗಳೆಂದರೆ:
ಈರುಳ್ಳಿ:
ಪ್ರತಿ ಭಾರತೀಯ ಅಡುಗೆ ಮನೆಯಲ್ಲಿ ಈರುಳ್ಳಿ ತರಕಾರಿಗಳ ರಾಜ ಎಂದೇ ಹೇಳಬಹುದು. ಇದನ್ನು ಹಸಿಯಾಗಿಯೂ ಸೇವಿಸಬಹುದು, ಫ್ರೈ ಮಾಡಿಯೂ ತಿನ್ನಬಹುದು. ಇದರಲ್ಲಿ ಕ್ಯಾಲೋರಿ ಕಡಿಮೆ ಇದ್ದು, ಅದರಲ್ಲಿರುವ ಫೈಬರ್ ದೇಹದಲ್ಲಿ ಶೇಖರಣೆ ಆಗಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ- ಬೆಳಗ್ಗೆ ಎದ್ದ ತಕ್ಷಣ ಈ ನೀರನ್ನು ಕುಡಿದರೆ ಅಂದುಕೊಂಡಿದಕ್ಕಿಂತ ವೇಗವಾಗಿ ಕರಗುತ್ತೆ ಸೊಂಟದ ಬೊಜ್ಜು!
ಬೆಂಡೆ ಕಾಯಿ:
ನಮ್ಮಲ್ಲಿ ಬಹುತೇಕ ಜನರಿಗೆ ಬೆಂಡೆಕಾಯಿ ಎಂದರೆ ಬಲು ಪ್ರೀತಿ. ಬೆಂಡೆಕಾಯಿಯಲ್ಲಿ ಹೆಚ್ಚು ಕರಗುವ ಫೈಬರ್ ಮತ್ತು ಕಡಿಮೆ ಕ್ಯಾಲೋರಿ ಹೊಂದಿರುವ ತರಕಾರಿ. ನಿಯಮಿತವಾಗಿ ನಿಮ್ಮ ಆಹಾರದಲ್ಲಿ ಬೆಂಡೆಕಾಯಿಯನ್ನು ಸೇವಿಸುವುದರಿಂದ ರಕ್ತನಾಳಗಳಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಆರೋಗ್ಯಕರವಾಗಿ ಕಡಿಮೆ ಮಾಡಬಹುದು.
ಬದನೆಕಾಯಿ:
ಬದನೆಕಾಯಿ ಭರ್ತಾ ಬಹುತೇಕ ಜನರ ಪ್ರಿಯ ಭಕ್ಷ್ಯ. ಹೆಚ್ಚು ಕರಗುವ ಫೈಬರ್ ಮತ್ತು ಕಡಿಮೆ ಕ್ಯಾಲೋರಿ ಆಹಾರವಾಗಿರುವ ಬದನೆಕಾಯಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅಷ್ಟೇ ಅಲ್ಲ, ಇದು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಅತ್ಯುತ್ತಮ ಆಹಾರ.
ಇದನ್ನೂ ಓದಿ- ಗಂಟೆಗಟ್ಟಲೆ ಕಂಪ್ಯೂಟರ್ ಮುಂದೆ ಕೆಲಸ ಮಾಡ್ತೀರಾ? ಕಣ್ಣಿನ ಒತ್ತಡ ಕಡಿಮೆ ಮಾಡಲು ಇಲ್ಲಿದೆ ತಜ್ಞರ ಸಲಹೆ
ಬೆಳ್ಳುಳ್ಳಿ:
ಆಹಾರದ ರುಚಿಯನ್ನು ಹೆಚ್ಚಿಸಬಲ್ಲ ಬೆಳ್ಳುಳ್ಳಿ ಅತ್ಯುತ್ತಮ ಔಷಧೀಯ ಗುಣಗಳನ್ನು ಹೊಂದಿದೆ. ಕೆಲವರಿಗೆ ಇದರ ವಾಸನೆ ಇಷ್ಟವಾಗದೇ ಇರಬಹುದು. ಆದರೆ, ಬೆಳ್ಳುಳ್ಳಿ ಸೇವನೆಯು ನಿಮ್ಮನ್ನು ಹಲವು ಕಾಯಿಲೆಗಳಿಂದ ದೂರ ಉಳಿಯುವಂತೆ ಮಾಡುತ್ತದೆ. ಇದರಲ್ಲಿ ಆಂಟಿಹೈಪರ್ಲಿಪಿಡೆಮಿಯಾ ಗುಣಲಕ್ಷಣಗಳು ಸಮೃದ್ಧವಾಗಿದ್ದು ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.