ನವದೆಹಲಿ: ಯಕೃತ್ತು ನಮ್ಮ ದೇಹದ ಅವಿಭಾಜ್ಯ ಅಂಗ ಎಂಬ ಸಂಗತಿ ಎಲ್ಲರಿಗೂ ತಿಳಿದೇ ಇದೆ. ಆಹಾರದಲ್ಲಿರುವ ಪೋಷಕಾಂಶಗಳನ್ನು ದೇಹದಲ್ಲಿ ಶಕ್ತಿಯನ್ನಾಗಿ ಪರಿವರ್ತಿಸುವ ಕಾರ್ಯ ಯಕೃತ್ತು ಮಾಡುತ್ತದೆ. ಇದಕ್ಕಾಗಿ ಅದು ನಮ್ಮ ದೇಹದಲ್ಲಿ ಇರುವ ರಕ್ತವನ್ನು ಫಿಲ್ಟರ್ ಮಾಡುತ್ತದೆ. ಯಕೃತ್ತು ಹಾನಿಗೊಳಗಾಗಿರುವ ಹಲವು ಪ್ರಕರಣಗಳನ್ನು ನೀವು ನೋಡಿರಬಹುದು. ಆದರೆ, ಕೆಲವೊಮ್ಮೆ ತನ್ನ ಯಕೃತ್ತು ಹಾಳಾಗಿದೆ ಎಂಬುದು ದೀರ್ಘಕಾಲದವರೆಗೆ ರೋಗಿಗೆ ತಿಳಿಯುವುದೇ ಇಲ್ಲ.  ಇಂತಹ ಪರಿಸ್ಥಿತಿಯಲ್ಲಿ ಯಕೃತ್ತು ಕ್ಷೀಣಿಸಿದೆ ಅಥವಾ ಹಾನಿಗೊಳಗಾಗಿದೆ ಎಂಬುದನ್ನು ನಾವು ಕೆಲ ಲಕ್ಷಣಗಳಿಂದ ತಿಳಿದುಕೊಳ್ಳಬಹುದು. ಅದರಲ್ಲಿನ ಪ್ರಮುಖ ಲಕ್ಷಣಗಳು ಯಾವುವು ಎಂಬುದನ್ನು ಅರಿತುಕೊಳ್ಳೋಣ ಬನ್ನಿ.

COMMERCIAL BREAK
SCROLL TO CONTINUE READING

1. ವಾಂತಿ
ಪದೇ ಪದೇ ವಾನ್ತಿಯಗುತ್ತಿದ್ದರೆ, ನೀವು ಒಮ್ಮೆ ವೈದ್ಯರನ್ನು ಸಂಪರ್ಕಿಸಬೇಕು, ಏಕೆಂದರೆ ಇದು ಸಾಮಾನ್ಯ ವಾಂತಿಯಾಗಿರುವುದಿಲ್ಲ. ಸತತವಾಗಿ ಹಲವಾರು ದಿನಗಳ ವರೆಗೆ ವಾಂತಿಯ ಸಮಸ್ಯೆ ಮುಂದುವರೆದರೆ ಅದು ಯಕೃತ್ತಿನ ಹಾನಿಯ ಲಕ್ಷಣವಾಗಿದೆ.

2. ಹಠಾತ್ ಹಸಿವು ಕಡಿಮೆಯಾಗುವುದು
ಯಕೃತ್ತು ಹಾನಿಗೊಳಗಾದ ಹೆಚ್ಚಿನ ಜನರು ಹಸಿವಿನ ಕೊರತೆಯ ಬಗ್ಗೆ ದೂರು ನೀಡುತ್ತಾರೆ. ಈ ದೂರು 15 ದಿನಗಳವರೆಗೆ ಮುಂದುವರೆದರೆ, ನೀವು ಅದನ್ನು ಲಘುವಾಗಿ ಪರಿಗಣಿಸಬಾರದು, ಏಕೆಂದರೆ ಇದು ಕೂಡ ಯಕೃತ್ತು ಹಾನಿಗೊಳಗಾದ ಒಂದು ಲಕ್ಷಣವಾಗಿದೆ.

3. ಆಯಾಸ ಉಂಟಾಗುತ್ತದೆ
ಕೆಲವೊಮ್ಮೆ ನಿಮಗೆ ತುಂಬಾ ಆಯಾಸದ ಅನುಭವ ಉಂಟಾಗುತ್ತದೆ ಮತ್ತು ಹಲವು ಉಪಾಯಗಳನ್ನು ಕೈಗೊಂಡರೂ ಕೂಡ ಅದು ಗುಣಮುಖವಾಗುವುದಿಲ್ಲ. ಇಂತಹ ಪರಿಷ್ಟಿತಿಯಲ್ಲಿ ತಕ್ಷಣವೇ ಎಚ್ಚೆತ್ತುಕೊಳ್ಳಿ. ಏಕೆಂದರೆ ಸತದ ಆಯಾಸದ ಭಾವನೆ ಕೂಡ ಯಕೃತ್ತು ಹಾನಿಗೊಳಗಾಗಿದೆ ಎಂಬುದರ ಸಂಕೇತವಾಗಿರಬಹುದು.

4. ಅತಿಸಾರ
ವಾತಾವರಣದಲ್ಲಾಗುವ ಬದಲಾವಣೆಯಿಂದ ಅಥವಾ ಹೊಟ್ಟೆಯ ತೊಂದರೆಯಿಂದ ನೀವು ಅನೇಕ ಬಾರಿ ಅತಿಸಾರದ ಅನುಭವ ಉಂಟಾಗುತ್ತದೆ, ಆದರೆ ಇದು ಸಾಮಾನ್ಯ ಅತಿಸಾರವಾಗಿರದೇ ಇರಬಹುದು ಎಂಬುದನ್ನು ನೆನಪಿನಲ್ಲಿಡಿ. ಇಂತಹ ಪರಿಸ್ಥಿತಿಯಲ್ಲಿ, ನೀವು ಜಾಗ್ರತೆವಹಿಸಬೇಕು, ಏಕೆಂದರೆ ಇದು ಕೂಡ ಯಕೃತ್ತಿನ ಹಾನಿಯ ಒಂದು ಲಕ್ಷಣ.


ಇದನ್ನೂ ಓದಿ-ಶರೀರವನ್ನು ನಿರ್ವಿಷಗೊಳಿಸುವ ಕಾಲ ಸನ್ನಿಹಿತವಾಗಿದೆ ಎನ್ನುತ್ತವೆ ಈ ಸಂಕೇತಗಳು! ನಿರ್ಲಕ್ಷಿಸಬೇಡಿ

5. ತೂಕ ಇಳಿಕೆ
ಇದ್ದಕ್ಕಿದ್ದಂತೆ ದೇಹದ ತೂಕವು ಕಡಿಮೆಯಾಗಲು ಆರಂಭಿಸಿದರೆ ಮತ್ತು ಅದರ ವೇಗವು ನಿರಂತರವಾಗಿ ಹೆಚ್ಚುತ್ತಿದ್ದರೆ, ತಕ್ಷಣವೇ ಎಚ್ಚೆತ್ತುಕೊಳ್ಳಿ, ಏಕೆಂದರೆ ಹಲವು ಬಾರಿ ಯಕೃತ್ತು ಹಾನಿಗೊಳಗಾದರೂ, ತೂಕವು ವೇಗವಾಗಿ ಇಳಿಕೆಯಾಗಲು ಪ್ರಾರಂಭಿಸುತ್ತದೆ.


ಇದನ್ನೂ ಓದಿ-Hair Colour ಬೇಕಿಲ್ಲ, ಈ 5 ಉಪಾಯಗಳಿಂದ ಪರ್ಮನೆಂಟ್ ಆಗಿ ನಿಮ್ಮ ಕೂದಲನ್ನು ಕಪ್ಪಾಗಿಸಿ!

(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಮನೆಮದ್ದು ಹಾಗೂ ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರ ಚಿಕಿತ್ಸೆ ಪಡೆಯಲು ಮರೆಯಬೇಡಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.