Lung Cancer: ದೇಹದಲ್ಲಿ ಈ ಬದಲಾವಣೆಗಳು ಕಂಡ ಕೂಡಲೇ ವೈದ್ಯರನ್ನು ಸಂಪರ್ಕಿಸಿ
Lung Cancer: ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಶ್ವಾಸಕೋಶ ಕ್ಯಾನ್ಸರ್ಗೆ ಒಳಗಾದವರಲ್ಲಿ ಶೇ.85ರಷ್ಟು ಮಂದಿ ಕಾಯಿಲೆಯು ತೀವ್ರ ಸ್ವರೂಪ ಪಡೆದ ಬಳಿಕ ಆಸ್ಪತ್ರೆಗಳಿಗೆ ತೆರಳುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಶ್ವಾಸಕೋಶ ಕ್ಯಾನ್ಸರ್ಗೆ ಒಳಗಾದವರಲ್ಲಿ ಶೇ.85ರಷ್ಟು ಮಂದಿ ಕಾಯಿಲೆಯು ತೀವ್ರ ಸ್ವರೂಪ ಪಡೆದ ಬಳಿಕ ಆಸ್ಪತ್ರೆಗಳಿಗೆ ತೆರಳುತ್ತಿದ್ದಾರೆ. ಶ್ವಾಸಕೋಶದ ಕ್ಯಾನ್ಸರ್ ಪುರುಷರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಧೂಮಪಾನವೇ ಪ್ರಮುಖ ಕಾರಣ ಎಂದು ಅನೇಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: Lady Finger Benefits: ಬೆಂಡೆಕಾಯಿ ಸೇವನೆಯಿಂದಲೂ ಕೂಡ ತೂಕ ಇಳಿಸಿಕೊಳ್ಳಬಹುದು, ಈ ರೀತಿ ಸೇವಿಸಿ
ಕ್ಯಾನ್ಸರ್‌ನ ಗುಣಲಕ್ಷಣಗಳು ಕಂಡ ತಕ್ಷಣ ಬೇಗ ಆಸ್ಪತ್ರೆಗೆ ತೆರಳಬೇಕು. ಆದಷ್ಟು ಬೇಗ ರೋಗ ಗುರುತಿಸಿ ಚಿಕಿತ್ಸೆ ಪಡೆದಲ್ಲಿ ರೋಗದಿಂದ ಗುಣಮುಖರಾದವರಲ್ಲಿ. ನಿರ್ಲಕ್ಷ್ಯ ಮಾಡಿದಲ್ಲಿ ಜೀವಕ್ಕೆ ಅಪಾಯವಾಗುತ್ತದೆ. ಶೇ 40ರಷ್ಟು ಧೂಮಪಾನಿಗಳು ಚೀನಾ, ಭಾರತ ಮತ್ತು ಇಂಡೋನೇಷ್ಯಾದಲ್ಲಿಯೇ ಇದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ನಿರಂತರ ಕೆಮ್ಮು, ಎದೆ ನೋವು, ಕೆಮ್ಮಿದಾಗ ರಕ್ತ ಬರುವುದು, ಉಸಿರಾಟದ ಸಮಸ್ಯೆ, ನಡೆದಾಡುವಾಗ ಜೋಲಿ ಹೋಗುವುದು ಸೇರಿದಂತೆ ವಿವಿಧ ಲಕ್ಷಣಗಳು ಶ್ವಾಸಕೋಶ ಕ್ಯಾನ್ಸರ್ ಇರುವವರಲ್ಲಿ ಕಾಣಿಸಿಕೊಳ್ಳುತ್ತವೆ.
ಕ್ಯಾನ್ಸರ್ ಪ್ರಾಥಮಿಕ ಹಂತದಲ್ಲಿದ್ದರೆ ಶ್ವಾಸಕೋಶದ ಬಾಧಿತ ಭಾಗವನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದು ಹಾಕಲಾಗುತ್ತದೆ. ಪ್ರಕರಣಗಳನ್ನು ಆಧರಿಸಿ ಕೀಮೋಥೆರಪಿ, ರೇಡಿಯೇಷನ್ ಚಿಕಿತ್ಸೆ ನೀಡಲಾಗುತ್ತದೆ. ಕ್ಯಾನ್ಸರ್ ಯಾವ ಹಂತದಲ್ಲಿದೆ ಎಂಬ ಆಧಾರದ ಮೇಲೆ ಚಿಕಿತ್ಸೆ ನಿರ್ಧರಿಸಲಾಗುತ್ತದೆ.
ಪ್ರಾರಂಭಿಕ ಹಂತದಲ್ಲಿ ಶೇ 15ರಷ್ಟು ಮಂದಿಯಲ್ಲಿ ಮಾತ್ರ ರೋಗವನ್ನು ಗುರುತಿಸಲು ಸಾಧ್ಯ. ಶ್ವಾಸಕೋಶ ಕ್ಯಾನ್ಸರ್ ಪೀಡಿತರಲ್ಲಿ ಶೇ 70ರಷ್ಟು ಮಂದಿ ಧೂಮಪಾನಿಗಳಾಗಿರುತ್ತಾರೆ. ಶೇ 20 ರಿಂದ ಶೇ 30ರಷ್ಟು ಮಂದಿ ಪರೋಕ್ಷ ಧೂಮಪಾನ, ವಾಯುಮಾಲಿನ್ಯ ಸೇರಿದಂತೆ ವಿವಿಧ ಕಾರಣಗಳಿಂದ ಈ ಮಾದರಿಯ ಕ್ಯಾನ್ಸರ್ ಬಾಧಿತರಾಗುತ್ತಾರೆ.
ಆಹಾರ ನುಂಗಲು ಕಷ್ಟವಾಗುವುದು, ಭುಜ ಹಾಗೂ ಎದೆ ನೋವು, ಕುತ್ತಿಗೆ ಊದುಕೊಳ್ಳುವುದ, ಮುಖದಲ್ಲಿ ಬಾವು ಬರುವುದು ಕಾಣಿಸಿಕೊಳ್ಳುವುದು ಕ್ಯಾನ್ಸರ್‌ನ ಪ್ರಾಥಮಿಕ ಲಕ್ಷಣಗಳಾಗಿವೆ.
ಇದನ್ನೂ ಓದಿ: Monsoon Diet: ಮಳೆಗಾಲದಲ್ಲಿ ನೀವು ಸೇವಿಸಲೇಬೇಕಾದ ಪೌಷ್ಟಿಕ ಆಹಾರಗಳಿವು
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.