ಬೆಂಗಳೂರು : ಪ್ರಸ್ತುತ, ತಪ್ಪು ಆಹಾರ ಪದ್ಧತಿ ಮತ್ತು ಅಸಮತೋಲಿತ ಜೀವನಶೈಲಿಯಿಂದ ಜನರಲ್ಲಿ ಬಿಪಿ ಸಮಸ್ಯೆ ಹೆಚ್ಚುತ್ತಿದೆ. ಇತ್ತೀಚಿನ ದಿನಗಳಲ್ಲಿ ಬಿಪಿ ಸಮಸ್ಯೆ ವಯಸ್ಸಾದವರಲ್ಲಿ ಮಾತ್ರವಲ್ಲ ಯುವಜನರಲ್ಲಿಯೂ ಕಂಡು ಬರುತ್ತಿದೆ. ಅಧಿಕ ಬಿಪಿ ಆರೋಗ್ಯಕ್ಕೆ ಅಪಾಯಕಾರಿ ಎಂದು ಸಾಮಾನ್ಯವಾಗಿ ಜನರು ಭಾವಿಸುತ್ತಾರೆ. ಆದರೆ ಅದು ಹಾಗಲ್ಲ. ಕಡಿಮೆ ರಕ್ತದೊತ್ತಡ ಕೂಡಾ ದೇಹಕ್ಕೆ ಸಾಕಷ್ಟು ಅಪಾಯಕಾರಿಯಾಗಿದೆ. ದೇಹದ ಸಾಮಾನ್ಯ ರಕ್ತದೊತ್ತಡವು 120/80 mmHg ಆಗಿರಬೇಕು. ಆದರೆ ರಕ್ತದೊತ್ತಡವು 90/60 mmHg ಗಿಂತ ಕಡಿಮೆಯಾದರೆ, ಅದನ್ನು ಕಡಿಮೆ ರಕ್ತದೊತ್ತಡ ಎಂದು ಕರೆಯಲಾಗುತ್ತದೆ. ರಕ್ತದೊತ್ತಡ ಕಡಿಮೆಯಾದಾಗ, ಮೆದುಳು, ಶ್ವಾಸಕೋಶಗಳು ಮತ್ತು ಮೂತ್ರಪಿಂಡಗಳಿಗೆ ರಕ್ತ ಪೂರೈಕೆಯು ಸರಿಯಾಗಿ ಆಗುವುದಿಲ್ಲ. ಇದರಿಂದಾಗಿ ಈ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ಇದನ್ನು ಸಮಯಕ್ಕೆ ಸರಿಯಾಗಿ ನಿಯಂತ್ರಿಸದಿದ್ದರೆ, ಹೃದಯಾಘಾತ, ಪಾರ್ಶ್ವವಾಯು ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಸಾಧ್ಯತೆಗಳು ಹೆಚ್ಚಾಗುತ್ತವೆ. 


COMMERCIAL BREAK
SCROLL TO CONTINUE READING

ರಕ್ತದೊತ್ತಡ ಕಡಿಮೆಯಾದಾಗ, ದೇಹದಲ್ಲಿ ಅನೇಕ ಲಕ್ಷಣಗಳು ಮತ್ತು ಚಿಹ್ನೆಗಳು ಕಂಡುಬರುತ್ತವೆ. 
ಕಡಿಮೆ ರಕ್ತದೊತ್ತಡದ ಲಕ್ಷಣಗಳು :
ತಲೆತಿರುಗುವಿಕೆ
ಕಣ್ಣು ಕತ್ತಲಾಗುವುದು 
ಆಯಾಸ ಮತ್ತು ದೌರ್ಬಲ್ಯ
ಪ್ರಜ್ಞಾಹೀನತೆ
ವಾಂತಿ-ವಾಕರಿಕೆ
ಹಠಾತ್ ತೀವ್ರ ತಲೆನೋವು
ಉಸಿರಾಟದ ತೊಂದರೆ


ಇದನ್ನೂ ಓದಿ : ಆಸಿಡಿಟಿ ಇದ್ದಾಗ ಈ ಬೇಳೆಯನ್ನೇ ತಿನ್ನಬೇಕು ! ತಿನ್ನುವ ಸರಿಯಾದ ವಿಧಾನವೂ ಗೊತ್ತಿರಲಿ


ಕಡಿಮೆ ರಕ್ತದೊತ್ತಡಕ್ಕೆ ಮನೆಮದ್ದುಗಳು : 
ಉಪ್ಪು : ಬಿಪಿ ಸಮಸ್ಯೆಯಲ್ಲಿ ಉಪ್ಪಿನ ಸೇವನೆ ಪ್ರಯೋಜನಕಾರಿ. ಬಿಪಿ ಕಡಿಮೆ ಇದ್ದರೆ ಒಂದು ಲೋಟ ನೀರಿಗೆ ಒಂದು ಚಮಚ ಉಪ್ಪನ್ನು ಬೆರೆಸಿ ಕುಡಿಯಿರಿ. ಇದರೊಂದಿಗೆ ರಕ್ತದೊತ್ತಡವು ಸಾಮಾನ್ಯವಾಗಲು ಪ್ರಾರಂಭವಾಗುತ್ತದೆ. ಬೇಕಾದರೆ ಅದರಲ್ಲಿ ನಿಂಬೆ ರಸವನ್ನು ಕೂಡಾ ಸಹ ಸೇರಿಸಬಹುದು.


ಕಾಫಿ : 
ಇದ್ದಕ್ಕಿದ್ದಂತೆ ಬಿಪಿ ಕಡಿಮೆಯಾದರೆ ತಕ್ಷಣ ಕಾಫಿ ಮಾಡಿ ಕುಡಿಯಬೇಕು.  ಇದರಲ್ಲಿರುವ ಕೆಫೀನ್ ರಕ್ತದೊತ್ತಡವನ್ನು ಸಾಮಾನ್ಯಗೊಳಿಸಲು ಸಹಾಯ ಮಾಡುತ್ತದೆ. ಕಾಫಿ ಲಭ್ಯವಿಲ್ಲದಿದ್ದರೆ, ಚಹಾವನ್ನು ಕುಡಿಯುವುದು ಉತ್ತಮ ಪರ್ಯಾಯವಾಗಿದೆ.


ಇದನ್ನೂ ಓದಿ : Health Tips: ಗ್ಯಾಸ್ಟ್ರಿಕ್ ತಲೆನೋವಿಗೆ ಮನೆಯಲ್ಲಿಯೇ ಇದೆ ಮನೆಮದ್ದು..!   


ಸಿಹಿ : 
ರಕ್ತದೊತ್ತಡ ಕಡಿಮೆಯಿದ್ದರೆ, ಸಿಹಿಯಾದ ಟಾಫಿ ಅಥವಾ ಚಾಕೊಲೇಟ್ ಅನ್ನು ಸೇವಿಸಬಹುದು. ಇದು ರಕ್ತದೊತ್ತಡವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದರೆ ಮಧುಮೇಹ ಇದ್ದರೆ ವೈದ್ಯರ ಸಲಹೆ ಮೇರೆಗೆ ಡಾರ್ಕ್ ಚಾಕೊಲೇಟ್ ಸೇವಿಸಬಹುದು. ಆದರೆ, ಅದನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು.


ತುಳಸಿ ಎಲೆಗಳು : 
ತುಳಸಿ ಎಲೆಗಳು ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಅನ್ನು ಹೇರಳವಾಗಿ ಹೊಂದಿರುತ್ತವೆ. ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಇದು ಯುಜೆನಾಲ್ ಎಂಬ ಉತ್ಕರ್ಷಣ ನಿರೋಧಕವನ್ನು ಹೊಂದಿರುತ್ತದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಬಿಪಿ ಕಡಿಮೆಯಿದ್ದರೆ, 4 ರಿಂದ 5 ತುಳಸಿ ಎಲೆಗಳನ್ನು ಅಗಿಯಿರಿ . ಇದು ನಿಮಗೆ ತಕ್ಷಣದ ಪರಿಹಾರವನ್ನು ನೀಡುತ್ತದೆ.


ಇದನ್ನೂ ಓದಿ : ತೂಕ ನಷ್ಟಕ್ಕೆ ತುಂಬಾ ಪ್ರಯೋಜನಕಾರಿ ಬಾದಾಮಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.