Kidney Health: ನೀವು ಸೇವಿಸುವ ಈ ಆಹಾರಗಳೇ ಕಿಡ್ನಿ ಆರೋಗ್ಯವನ್ನು ಕೆಡಿಸುತ್ತದೆ
Kidney Health:ಆಹಾರದಲ್ಲಿ ಜೀರ್ಣಿಸಿಕೊಳ್ಳಲು ಕಷ್ಟವಾಗುವ ಕೆಲವು ಅಂಶಗಳಿರುತ್ತವೆ. ಇದರಿಂದಾಗಿ ಮೂತ್ರಪಿಂಡದ ತೊಂದರೆಗಳು ಪ್ರಾರಂಭವಾಗುತ್ತವೆ. ಈ ಹಿನ್ನೆಲೆಯಲ್ಲಿ ಕೆಲವೊಂದು ಆಹಾರಗಳನ್ನು ಇತಿ ಮಿತಿಯಲ್ಲಿ ಸೇವಿಸಬೇಕಾಗುತ್ತದೆ.
Kidney Health : ಕಿಡ್ನಿ ದೇಹದ ಒಂದು ಪ್ರಮುಖ ಭಾಗವಾಗಿದೆ. ನಾವು ಸೇವಿಸುವ ಆಹಾರದಲ್ಲಿರುವ ಕೊಳೆಯನ್ನು ಶೋಧಿಸುವ ಕೆಲಸವನ್ನು ಕಿಡ್ನಿ ಮಾಡುತ್ತದೆ. ಇದು ಮೂತ್ರದ ಮೂಲಕ ಹೊರಬರುತ್ತದೆ. ಕಿಡ್ನಿ ವೈಫಲ್ಯದಿಂದಲೂ ಹಲವು ರೀತಿಯ ಸಮಸ್ಯೆಗಳು ಆರಂಭವಾಗುತ್ತವೆ. ಆಹಾರದಲ್ಲಿ ಜೀರ್ಣಿಸಿಕೊಳ್ಳಲು ಕಷ್ಟವಾಗುವ ಕೆಲವು ಅಂಶಗಳಿರುತ್ತವೆ. ಇದರಿಂದಾಗಿ ಮೂತ್ರಪಿಂಡದ ತೊಂದರೆಗಳು ಪ್ರಾರಂಭವಾಗುತ್ತವೆ. ಈ ಹಿನ್ನೆಲೆಯಲ್ಲಿ ಕೆಲವೊಂದು ಆಹಾರಗಳನ್ನು ಇತಿ ಮಿತಿಯಲ್ಲಿ ಸೇವಿಸಬೇಕಾಗುತ್ತದೆ.
ಈ ಪದಾರ್ಥಗಳು ಮೂತ್ರಪಿಂಡವನ್ನು ಹಾಳುಮಾಡುತ್ತವೆ :
ಬಾಳೆಹಣ್ಣು :
ಬಾಳೆಹಣ್ಣು ಪೊಟ್ಯಾಸಿಯಮ್ನಲ್ಲಿ ಸಮೃದ್ಧವಾಗಿದೆ. ಇದರಿಂದಾಗಿ ನಿತ್ಯ ಬಾಳೆಹಣ್ಣು ಸೇವಿಸಿದರೆ ಮೂತ್ರಪಿಂಡದ ಸಮಸ್ಯೆಗಳು ಎದುರಾಗುವ ಸಾಧ್ಯತೆ ಹೆಚ್ಚು. ಒಂದು ವೇಳೆ ಮೂತ್ರಪಿಂಡದ ಕಾಯಿಲೆಯಿಂದ ತೊಂದರೆಗೀಡಾಗಿದ್ದರೆ, ಅಂಥಹ ಸಂದರ್ಭದಲ್ಲಿ ತಪ್ಪಿಯೂ ಬಾಳೆಹಣ್ಣನ್ನು ಸೇವಿಸಬಾರದು. ಇದನ್ನು ಸೇವಿಸುವುದರಿಂದ ಸಮಸ್ಯೆಗಳು ಉಂಟಾಗಬಹುದು.
ಇದನ್ನೂ ಓದಿ : ಶರೀರದಲ್ಲಿ ಈ ಬದಲಾವಣೆಗಳು ಕಂಡುಬಂದರೆ, ಮದ್ಯ ಸೇವನೆ ತಕ್ಷಣ ನಿಲ್ಲಿಸಿ!
ಸಿಪ್ಪೆ ಸಮೇತ ತಿನ್ನುವ ಆಲೂಗಡ್ಡೆ :
ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಜನರು ಸಿಪ್ಪೆ ಸುಲಿಯದೇ ಆಲೂಗಡ್ಡೆ ಸೇವಿಸುತ್ತಾರೆ. ಇದನ್ನು ಸೇವಿಸುವುದರಿಂದ ಮೂತ್ರಪಿಂಡವು ಕ್ರಮೇಣ ಹದಗೆಡಲು ಪ್ರಾರಂಭಿಸುತ್ತದೆ. ಅದಕ್ಕಾಗಿಯೇ ಆಲೂಗಡ್ಡೆಯನ್ನು ಯಾವಾಗಲೂ ಸಿಪ್ಪೆ ಸುಲಿದ ನಂತರವೇ ತಿನ್ನಬೇಕು.
ಟೊಮೆಟೊ :
ಪ್ರತಿದಿನ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊಗಳನ್ನು ಸೇವಿಸಿದರೆ, ಅದು ನಿಮ್ಮನ್ನು ತೊಂದರೆಗೆ ಸಿಲುಕಿಸುತ್ತದೆ. ಏಕೆಂದರೆ ಟೊಮೆಟೊದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪೊಟ್ಯಾಸಿಯಮ್ ಇರುತ್ತದೆ. ಇದು ನಿಮ್ಮ ಮೂತ್ರಪಿಂಡಗಳನ್ನು ಹಾನಿಗೊಳಿಸುತ್ತದೆ.
ಹಾಲು ಮತ್ತು ಮೊಸರು :
ಮೂತ್ರಪಿಂಡದ ತೊಂದರೆ ಇರುವವರು ಹಾಲು ಮತ್ತು ಡೈರಿ ಉತ್ಪನ್ನಗಳನ್ನು ತಿನ್ನಬಾರದು. ಡೈರಿ ಉತ್ಪನ್ನಗಳನ್ನು ಸೇವಿಸುವುದರಿಂದ ಮೂತ್ರಪಿಂಡದ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತದೆ. ಇದರಿಂದಾಗಿ ನಿಮ್ಮ ಸಮಸ್ಯೆ ಹೆಚ್ಚಾಗಬಹುದು.
ಇದನ್ನೂ ಓದಿ : Diabetes: ನಿತ್ಯ ಈ ಒಂದು ಪದಾರ್ಥ ಹಾಲಿನಲ್ಲಿ ಬೆರೆಸಿ ಸೇವಿಸಿ ಮಧುಮೇಹ ನಿಯಂತ್ರಿಸಿ
ಬೇಳೆ :
ಬೇಳೆಕಾಳುಗಳಲ್ಲಿ ಹಲವು ರೀತಿಯ ಪೌಷ್ಟಿಕಾಂಶಗಳಿರುತ್ತವೆ. ಇದು ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತಂದೊಡ್ಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ ಕಾರಣ ಬೇಳೆಕಾಳುಗಳ ಸೇವನೆಯನ್ನು ಕಡಿಮೆ ಮಾಡಬೇಕು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.