Papaya Side Effects: ಪಪ್ಪಾಯಿ ಹಣ್ಣನ್ನು ನಿಯಮಿತವಾಗಿ ತಿನ್ನುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಅದರಲ್ಲೂ ಇದರಲ್ಲಿ ಕಂಡುಬರುವ ಆಯುರ್ವೇದ ಗುಣಗಳು ಜೀರ್ಣಕ್ರಿಯೆಯನ್ನು ಶಕ್ತಿಯುತವಾಗಿಸುವುದು ಮಾತ್ರವಲ್ಲದೆ ಅನೇಕ ರೀತಿಯ ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ ಮತ್ತು ಪೊಟ್ಯಾಸಿಯಂ ಸಮೃದ್ಧವಾಗಿದೆ. 


COMMERCIAL BREAK
SCROLL TO CONTINUE READING

ಎಷ್ಟೋ ಜನರು ಕೂದಲು ಮತ್ತು ಚರ್ಮದ ಸಮಸ್ಯೆಗಳಿಗೆ ಇದನ್ನು ಬಳಸುತ್ತಾರೆ. ಆದರೆ ಈ ಹಣ್ಣನ್ನು ಪ್ರತಿದಿನ ತಿನ್ನುವವರು ಕೆಲವು ತಪ್ಪುಗಳನ್ನು ಮಾಡುತ್ತಾರೆ. ಈ ಹಣ್ಣುಗಳನ್ನು ತಿಂದ ತಕ್ಷಣ ಕೆಲವು ಆಹಾರಗಳನ್ನು ಸೇವಿಸುತ್ತಾರೆ. ಇವುಗಳನ್ನು ಸೇವಿಸುವುದರಿಂದ ದೇಹಕ್ಕೆ ಹಲವು ಅಡ್ಡ ಪರಿಣಾಮಗಳು ಉಂಟಾಗುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಆದರೆ ಈಗ ಈ ಹಣ್ಣುಗಳನ್ನು ತಿಂದ ನಂತರ ಯಾವ ಆಹಾರಗಳನ್ನು ಸೇವಿಸಬಾರದು ಎಂದು ತಿಳಿಯೋಣ.


ಇದನ್ನೂ ಓದಿ: ಹೆಚ್ಚುವರಿ ಕೊಬ್ಬನ್ನು ಇಳಿಸುವ ಯೋಚನೆಯಲ್ಲಿದ್ದಿರಾ ? ಇಲ್ಲಿದೆ ಅದಕ್ಕೆ ಪರಿಹಾರ 


ಹಾಲಿನ ಉತ್ಪನ್ನಗಳು: ಮೊಸರು, ಹಾಲು ಮತ್ತು ಚೀಸ್ ಹೆಚ್ಚಿನ ಪ್ರೋಟೀನ್ ಅನ್ನು ಹೊಂದಿರುತ್ತದೆ. ಪಪ್ಪಾಯಿಯಲ್ಲಿರುವ ಪಪೈನ್ ಕಿಣ್ವವು ಪ್ರೋಟೀನ್‌ಗಳನ್ನು ಹೀರಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಪ್ರತಿದಿನ ಪಪ್ಪಾಯಿ ತಿಂದ ನಂತರ ಹಾಲು ಅಥವಾ ಮೊಸರು ಸೇವಿಸುವುದರಿಂದ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಬರಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು. ಅದರಲ್ಲೂ ಇದನ್ನು ಪ್ರತಿದಿನ ಸೇವಿಸಿದರೆ ಜೀರ್ಣಾಂಗ ವ್ಯವಸ್ಥೆಗೆ ಹಾನಿಯುಂಟಾಗುತ್ತದೆ. ಮಲಬದ್ಧತೆ, ಹೊಟ್ಟೆಯಲ್ಲಿ ಊತ ಮತ್ತು ಗ್ಯಾಸ್ ನಂತಹ ಸಮಸ್ಯೆಗಳು ಉಂಟಾಗುತ್ತವೆ.


ಮೊಟ್ಟೆಗಳು: ಪಪ್ಪಾಯಿ ತಿಂದ ನಂತರ ಅಪ್ಪಿತಪ್ಪಿಯೂ ಮೊಟ್ಟೆಯಿಂದ ಮಾಡಿದ ಆಹಾರ ಸೇವಿಸಬಾರದು ಎನ್ನುತ್ತಾರೆ ಆರೋಗ್ಯ ತಜ್ಞರು. ಇದನ್ನು ಸೇವಿಸುವುದರಿಂದ ಅಜೀರ್ಣ, ವಾಕರಿಕೆ ಮತ್ತು ಹೊಟ್ಟೆಯ ಸಮಸ್ಯೆಗಳ ಸಾಧ್ಯತೆಗಳಿವೆ. ಜೊತೆಗೆ ಕೆಲವರಲ್ಲಿ ವಾಂತಿ ಆಗಬಹುದು ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


ಇದನ್ನೂ ಓದಿ: ಯಕೃತ್ತು ಹಾನಿಗೊಳಗಾಗಿದೆ ಎಂದು ಸೂಚಿಸುತ್ತವೆ ಈ 5 ಸಂಕೇತಗಳು, ನಿರ್ಲಕ್ಷಿಸಬೇಡಿ! 


ಹಣ್ಣಿನ ಸಲಾಡ್ :  ಪಪ್ಪಾಯಿ ಹಣ್ಣನ್ನು ತಿಂದ ನಂತರ ಬೇರೆ ಹಣ್ಣುಗಳನ್ನು ಸೇವಿಸಿದರೆ ಜೀರ್ಣಕ್ರಿಯೆ ಹಾಳಾಗುವ ಸಾಧ್ಯತೆಗಳಿವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಈ ಹಣ್ಣು ಕಾರ್ಬೋಹೈಡ್ರೇಟ್‌ ಮತ್ತು ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿದೆ. ಹಾಗಾಗಿ ಇದು ಗ್ಯಾಸ್ ಮತ್ತು ಹೊಟ್ಟೆ ಉಬ್ಬರಕ್ಕೂ ಕಾರಣವಾಗಬಹುದು.


ತಣ್ಣೀರು: ಪಪ್ಪಾಯಿ ತಿಂದ ತಕ್ಷಣ ತಣ್ಣೀರು ಕುಡಿಯುವುದು ಕೂಡ ಆರೋಗ್ಯಕ್ಕೆ ತುಂಬಾ ಹಾನಿಕಾರಕ ಎನ್ನುತ್ತಾರೆ ಆರೋಗ್ಯ ತಜ್ಞರು. ಇದರಿಂದಾಗಿ ಜೀರ್ಣಕ್ರಿಯೆಯ ಸಮಸ್ಯೆಗಳೂ ಸುಲಭವಾಗಿ ಬರುತ್ತವೆ. ಆದರೆ ಪಪ್ಪಾಯಿ ತಿಂದ ನಂತರ ಬೆಚ್ಚಗಿನ ನೀರು ಕುಡಿಯುವುದರಿಂದ ಹೊಟ್ಟೆಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.