ಬೆಂಗಳೂರು : ಮಾಂಸ, ಮೊಟ್ಟೆ ಮತ್ತು ಮೀನುಗಳು ಪ್ರೋಟೀನ್‌ನ ಸಮೃದ್ಧ ಮೂಲಗಳಾಗಿವೆ. ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ, ಇವೂ ಪೌಷ್ಟಿಕಾಂಶದ ಅವಶ್ಯಕತೆಯು ಪೂರೈಸಲ್ಪಡುತ್ತದೆ. ಆದರೆ ಸಸ್ಯಾಹಾರಿಗಳು ಈ ವಸ್ತುಗಳನ್ನು ತಿನ್ನಲು ಸಾಧ್ಯವಿಲ್ಲ. ಹಾಗಾಗಿ ಅವರು  ಪರ್ಯಾಯಗಳನ್ನು ಹುಡುಕಬೇಕಾಗುತ್ತದೆ. ಸಸ್ಯಾಹಾರಿಗಳು ಕೆಲವು ಹಣ್ಣುಗಳನ್ನು ತಿನ್ನುವ ಮೂಲಕ ದೇಹದ ಪ್ರೋಟೀನ್ ಕೊರತೆಯನ್ನು ನೀಗಿಸಬಹುದು. ಇದಕ್ಕಾಗಿ ಮಾಂಸಾಹಾರವನ್ನೇ ಅವಲಂಬಿಸಬೇಕಾಗಿಲ್ಲ.  


COMMERCIAL BREAK
SCROLL TO CONTINUE READING

ಪ್ರೋಟೀನ್ ಭರಿತ ಹಣ್ಣುಗಳು : 
1. ಕಿತ್ತಳೆ : 
ಕಿತ್ತಳೆ ವಿಟಮಿನ್ ಸಿಯ ಸಮೃದ್ದ ಮೂಲ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಸ್ನಾಯುಗಳನ್ನು ಬಲಪಡಿಸುವ ಪ್ರೋಟೀನ್ ಅನ್ನು ಸಹ ಹೊಂದಿದೆ. ಈ ಎಲ್ಲಾ ಕಾರಣಗಳಿಂದ ಕಿತ್ತಳೆಯನ್ನು ನಿಯಮಿತವಾಗಿ ಸೇವಿಸಿಬೇಕು. 


ಇದನ್ನೂ ಓದಿ : ಯಾವುದು ಆರೋಗ್ಯಕ್ಕೆ ಒಳ್ಳೆಯದು ಬಿಳಿ ಪೇರಳೆಯೋ ? ಕೆಂಪು ಪೇರಳೆಯೋ ?


2. ಪೇರಳೆ : 
ಸಾಮಾನ್ಯವಾಗಿ ಪೇರಳೆಯನ್ನು ಜೀರ್ಣಕ್ರಿಯೆಗೆ ಪ್ರಮುಖ ಹಣ್ಣು ಎಂದು ಪರಿಗಣಿಸಲಾಗುತ್ತದೆ. ಆದರೆ, ಇದರಲ್ಲಿ ಪ್ರೋಟೀನ್ ಕೂಡಾ ಭರಪೂರವಾಗಿದೆ. ಕತ್ತರಿಸಿದ ಒಂದು ಬಟ್ಟಲು ಪೇರಳೆಯಲ್ಲಿ ಸುಮಾರು 4.2 ಗ್ರಾಂ ಪ್ರೋಟೀನ್ ಕಂಡುಬರುತ್ತದೆ.


3. ಆವಕಾಡೊ :
ಆವಕಾಡೊವನ್ನು ಪ್ರೋಟೀನ್‌ನ ಪ್ರಮುಖ ಮೂಲವೆಂದು ಪರಿಗಣಿಸಲಾಗುತ್ತದೆ,  ಒಂದು ಬೌಲ್ ಆವಕಾಡೊ ಸೇವಿಸಿದರೆ, ದೇಹವು ಸುಮಾರು 4 ಗ್ರಾಂ ಪ್ರೋಟೀನ್ ಅನ್ನು ಪಡೆಯುತ್ತದೆ. ಇದರಲ್ಲಿ ಹಲವು ಪೌಷ್ಟಿಕ ಅಂಶಗಳು ಕೂಡಾ ಇವೆ. 


ಇದನ್ನೂ ಓದಿ : ಈ ಎರಡು ವಸ್ತುಗಳನ್ನು ಬಳಸಿದರೆ ಒಂದೇ ಗಂಟೆಯಲ್ಲಿ ಬಿಳಿ ಕೂದಲು ಕಪ್ಪಾಗುವುದು ! ಒಮ್ಮೆ ಟ್ರೈ ಮಾಡಿ


4. ಕಿವಿ : 
ಕಿವಿಯ ರುಚಿ ಎಲ್ಲರನ್ನೂ ಆಕರ್ಷಿಸುತ್ತದೆ. ಹಾಗೆಯೇ ಇದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಒಂದು ಕಿವಿ ತಿನ್ನುವುದರಿಂದ ಸುಮಾರು 2.1 ಗ್ರಾಂ ಪ್ರೋಟೀನ್ ಸಿಗುತ್ತದೆ. ಇದಲ್ಲದೇ ಇನ್ನೂ ಹಲವು ಪೋಷಕಾಂಶಗಳು  ಕೂಡಾ ದೇಹವನ್ನು ಸೇರುತ್ತವೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.