ನೀವು ಮಾಡುವ ಈ ತಪ್ಪಿನಿಂದಲೇ ಮುಖ ತುಂಬಾ ಮೊಡವೆ ಮೂಡುತ್ತದೆ
Skin Care Routine Mistakes:ಕಾಳಜಿಯ ಭರಾಟೆಯಲ್ಲಿ ನಾವು ಮಾಡುವ ತಪ್ಪಿನಿಂದಲೇ ಹೀಗೆ ಮುಖದ ಸೌಂದರ್ಯ ಹಾಳಾಗುತ್ತದೆ. ಮೊಡವೆಯಾಗುತ್ತಿದೆ ಎಂದು ದೂರುವ ಬದಲು ಮೊಡವೆ ಯಾಕೆ ಆಗುತ್ತಿದೆ ಎಂದು ಕಂಡು ಹಿಡಿಯುವುದು ಬಹಳ ಮುಖ್ಯ.
Skin Care Routine Mistakes : ತ್ವಚೆಯ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಕೆಲವೊಮ್ಮೆ ಎಷ್ಟೇ ಕಾಳಜಿ ವಹಿಸಿದರೂ ಮುಖ ತುಂಬಾ ಮೊಡವೆಗಳು ಮೂಡುತ್ತವೆ. ಅಂದರೆ ಕಾಳಜಿಯ ಭರಾಟೆಯಲ್ಲಿ ನಾವು ಮಾಡುವ ತಪ್ಪಿನಿಂದಲೇ ಹೀಗೆ ಮುಖದ ಸೌಂದರ್ಯ ಹಾಳಾಗುತ್ತದೆ. ಮೊಡವೆಯಾಗುತ್ತಿದೆ ಎಂದು ದೂರುವ ಬದಲು ಮೊಡವೆ ಯಾಕೆ ಆಗುತ್ತಿದೆ ಎಂದು ಕಂಡು ಹಿಡಿಯುವುದು ಬಹಳ ಮುಖ್ಯ.
ತಪ್ಪಾದ ಸ್ಕಿನ್ ಕೇರ್ ಉತ್ಪನ್ನಗಳನ್ನು ಬಳಸುವುದು :
ಸ್ಕಿನ್ ಕೇರ್ ಪ್ರಾಡಕ್ಟ್ ಗಳನ್ನು ಬಳಸುವ ಮೊದಲು ನಿಮ್ಮ ಚರ್ಮವು ಎಣ್ಣೆಯುಕ್ತ, ಶುಷ್ಕ ಅಥವಾ ಸಾಮಾನ್ಯವಾಗಿದೆಯೇ ಎನ್ನುವುದನ್ನು ತಿಳಿದುಕೊಳ್ಳುವುದು ಬಹಳಕ ಮುಖ್ಯ. ಚರ್ಮಕ್ಕೆ ಅನುಗುಣವಾಗಿ ಕ್ರೀಂ ಲೋಶನ್ ಗಳನ್ನು ಆಯ್ಕೆ ಮಾಡುವುದು ಬಿಟ್ಟು ಜಾಹೀರಾತಿನ ಗೀಳಿಗೆ ಬಿದ್ದು ಪ್ರಾಡಕ್ಟ್ ಗಳನ್ನು ಖರೀದಿಸಿದರೆ ಅದರ ಪರಿಣಾಮ ತ್ವಚೆಯ ಮೇಲೆ ಕಾಣಿಸುತ್ತದೆ.
ಇದನ್ನೂ ಓದಿ : ಅತಿಯಾಗಿ ತೆಂಗಿನ ನೀರು ಕುಡಿಯುತ್ತಿದ್ದೀರಾ? ಇದು ನಿಮ್ಮ ಜೀವಕ್ಕೆ ಅಪಾಯ.!
ಹಾನಿಕಾರಕ ಮೇಕಪ್ ಉತ್ಪನ್ನಗಳ ಬಳಕೆ :
ಮುಖದ ಅಂದವನ್ನು ಹೆಚ್ಚಿಸುವ ಕಾರಣದಿಂದ ಮೇಕಪ್ ಬಳಸುವುದು ಸಾಮಾನ್ಯ. ಅನೇಕ ಬಗೆಯ ಅನೇಕ ಬ್ರಾಂಡ್ ಗಳ ಮೇಕಪ್ ಉತ್ಪನ್ನಗಳಿವೆ. ಈ ಪ್ರಾಡಕ್ಟ್ ಗಳಲ್ಲಿ ರಾಸಾಯನಿಕದ ಪ್ರಮಾಣವು ಬಹಳ ಹೆಚ್ಚಾಗಿರುತ್ತದೆ. ಇದಲ್ಲದೇ ದೀರ್ಘಕಾಲ ಮೇಕಪ್ ಮಾಡುವುದರಿಂದ ಚರ್ಮಕ್ಕೆ ಆಮ್ಲಜನಕ ಸಿಗದೇ ಮೊಡವೆಗಳು ಹುಟ್ಟಿಕೊಳ್ಳುತ್ತವೆ.
ಮುಖದ ಮೇಲೆ ತಪ್ಪು ಕ್ಲೆನ್ಸರ್ ಅನ್ನು ಬಳಸುವುದು :
ಯಾವುದೇ ಪ್ರಾಡಕ್ಟ್ ಬಳಸುವಾಗಲೂ ಯಾವ ಪ್ರಾಡಕ್ಟ್ ಬಳಸುತ್ತೇವೆ, ಯಾಕೆ ಬಳಸುತ್ತೇವೆ ಎನ್ನುವುದು ನಮಗೆ ತಿಳಿದಿರಬೇಕು. ಮಾರುಕಟ್ಟೆಯಲ್ಲಿ ಲಭ್ಯವಿದೆ ಎನ್ನುವ ಕಾರಣಕ್ಕೆ ಖರೀದಿಸಿ ತಂದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದೇ ರೀತಿ ಸರಿಯಾದ ಕ್ಲೆನ್ಸರ್ ಆಯ್ಕೆ ಕೂಡಾ ಬಹಳ ಮುಖ್ಯ. ಫೋಮ್ ಕ್ಲೆನ್ಸರ್ ಅನ್ನು ಬಳಸಬಾರದು. ಹಾಗೆಯೇ ಚರ್ಮದ ಎಫ್ಫೋಲಿಯೇಟ್ಗಾಗಿ ಕ್ಲೆನ್ಸರ್ ಅನ್ನು ಬಳಸಬಾರದು. ಹೀಗೆ ಮಾಡುವುದರಿಂದ ತ್ವಚೆ ಒಡೆಯುವುದು ಪ್ರಾರಂಭವಾಗುತ್ತದೆ. ನೀವು ಉತ್ತಮ ಫಲಿತಾಂಶವನ್ನು ಪಡೆಯಲು ಬಯಸಿದರೆ, ನೀರು ಆಧಾರಿತ ಕ್ಲೆನ್ಸರ್ ಅನ್ನು ಮಾತ್ರ ಮುಖಕ್ಕೆ ಹಚ್ಚಿ.
ಇದನ್ನೂ ಓದಿ : ಈ ಅಪಾಯಕಾರಿ ಕಾಯಿಲೆಯಿಂದ ಶರೀರಕ್ಕೆ ಪಾರ್ಶ್ವವಾಯುವಿನ ಅಪಾಯ, 3 ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!
ವೇಸ್ಟ್ ಬಟ್ಟೆಯಿಂದ ಮೇಕಪ್ ತೆಗೆಯುವುದು :
ಮೇಕಪ್ ತೆಗೆಯಲು ಮಾತ್ರ ವೈಪ್ಸ್ ಬಳಸುವುದು ತಪ್ಪಲ್ಲ. ಬಟ್ಟೆ ಮೂಲಕ ಮೇಕಪ್ ತೆಗೆದ ನಂತರ ಫೇಸ್ ವಾಶ್ ಅನ್ನು ಸಹ ಬಳಸಬೇಕು. ಇದು ಮುಖದ ಮೇಲಿನ ಎಲ್ಲಾ ರೀತಿಯ ರಾಸಾಯನಿಕಗಳನ್ನು ತೆಗೆದುಹಾಕುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.