ನವದೆಹಲಿ : ಇಡೀ ದೇಶವೇ ಕರೋನಾ (Coronavirus) ಹಾವಳಿಯಿಂದ ತತ್ತರಿಸಿದೆ. ಈ ಮಧ್ಯೆ ಕರೋನ ಹೊಸ ರೂಪಾಂತರವಾದ ಒಮಿಕ್ರಾನ್‌ ಗೆ (Omicron) ಸಂಬಂಧಿಸಿದಂತೆ ಹೊಸ ಹೊಸ ವಿಷಯಗಳು ಹೊರ ಬರುತ್ತಿವೆ. ಕರೋನಾದ ಹೊಸ ರೂಪಾಂತರದ ಮೊದಲ ಲಕ್ಷಣಗಳು  ರೋಗಿಯ ಕಣ್ಣುಗಳಿಂದ ಕಾಣಿಸಿಕೊಳ್ಳಲು ಪ್ರಾರಂಭಿಸಬಹುದು ಎನ್ನುತ್ತಾರೆ ವೈದ್ಯರು. ಹೊಸ ರೂಪಾಂತರದ ಸೋಂಕಿನಲ್ಲಿ ಕೆಮ್ಮಿನಿಂದ ಅತಿಸಾರದವರೆಗಿನ ಎಲ್ಲಾ ರೋಗಲಕ್ಷಣಗಳು ಕಂಡುಬರುತ್ತವೆ. ಆದರೆ ಕೆಲವೊಮ್ಮೆ ಇದು ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತಂದೊಡ್ಡಬಹುದು. 


COMMERCIAL BREAK
SCROLL TO CONTINUE READING

ವಿಶ್ವ ಆರೋಗ್ಯ ಸಂಸ್ಥೆ (WHO) 'ಕಣ್ಣಿನ ಸಮಸ್ಯೆಗಳನ್ನು' ಅಪರೂಪದ ಅಥವಾ ಸಾಮಾನ್ಯ ಲಕ್ಷಣಗಳೆಂದು ಪಟ್ಟಿ ಮಾಡಿದೆ. ಇದು ಕಣ್ಣುಗಳಿಗೆ ಸಂಬಂಧಿಸಿದ ಒಂದು ಅಥವಾ ಹೆಚ್ಚಿನ ರೋಗಲಕ್ಷಣಗಳನ್ನು ಒಳಗೊಂಡಿರಬಹುದು. ವರದಿಯ ಪ್ರಕಾರ, ಕಣ್ಣುಗಳು ಗುಲಾಬಿ ಬಣ್ಣಕ್ಕೆ ತಿರುಗುವುದು, ಬಿಳಿ ಭಾಗದಲ್ಲಿ ಊತ, ಕಾಂಜಂಕ್ಟಿವಿಟಿಸ್ ಇದು ಓಮಿಕ್ರಾನ್ ಲಕ್ಷಣಗಳಾಗಿರಬಹುದು. 


ಇದನ್ನೂ ಓದಿ :   Men's Health Tips : ಪುರುಷರ ಈ 5 ಸಮಸ್ಯೆಗಳಿಗೆ ತುಂಬಾ ಪ್ರಯೋಜನಕಾರಿ ಲವಂಗದ ಎಣ್ಣೆ!


ಅಧ್ಯಯನದಲ್ಲಿ ಹೊರಬಿದ್ದ ವಿಚಾರ :  
ಇದಲ್ಲದೆ, ಕಣ್ಣುಗಳಲ್ಲಿ ಕೆಂಪು, ಉರಿ ಮತ್ತು ನೋವು ಇವುಗಳು ಹೊಸ ರೂಪಾಂತರದ (Omicron symptoms) ಸೋಂಕಿನ ಲಕ್ಷಣಗಳಾಗಿವೆ. ರೋಗಲಕ್ಷಣಗಳು ಮಸುಕಾಗಿರುವ ದೃಷ್ಟಿ, ಕಣ್ಣುಗಳಲ್ಲಿ ನೀರು ಬರುವುದು ಮತ್ತು ಬೆಳಕಿನ ಸೂಕ್ಷ್ಮತೆಯಂತಹ ಲಕ್ಷಣಗಳು ಒಮಿಕ್ರಾನ್ ನಲ್ಲಿ (Omicron) ಕಂಡು ಬರುತ್ತವೆ. ಇನ್ನು ಅಧ್ಯಯನದ ಪ್ರಕಾರ 5 ಪ್ರತಿಶತದಷ್ಟು ಕರೋನಾ ರೋಗಿಗಳು ಕಾಂಜಂಕ್ಟಿವಿಟಿಸ್‌ನಿಂದ ಬಳಲುತ್ತಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ.


ಇದು ಕರೋನಾ (Coronavirus) ಸೋಂಕಿನ ಆರಂಭಿಕ ಲಕ್ಷಣವಾಗಿರಬಹುದು ಎಂದು ಭಾರತೀಯ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಒಂದು ಅಧ್ಯಯನದ ಪ್ರಕಾರ, 35.8% ಆರೋಗ್ಯವಂತ ಜನರಿಗೆ ಹೋಲಿಸಿದರೆ 44 ಪ್ರತಿಶತದಷ್ಟು ಕೋವಿಡ್ (COVID-19) ರೋಗಿಗಳು ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಾರೆ. BMJ Open Ophthalmologyಯಲ್ಲಿ  ಪ್ರಕಟವಾದ ಅಧ್ಯಯನದ ಪ್ರಕಾರ, ಕೋವಿಡ್ -19 ರ 83 ರೋಗಿಗಳಲ್ಲಿ, 17 ಪ್ರತಿಶತದಷ್ಟು ಜನರು ಕಣ್ಣುಗಳಲ್ಲಿ ಉರಿ,  ಮತ್ತು 16 ಪ್ರತಿಶತದಷ್ಟು ಜನರು ಕಣ್ಣುಗಳಲ್ಲಿ ನೋವು ಕಾಣಿಸಿಕೊಂಡಿದೆ. ರೋಗಿಯು ಸೋಂಕಿನಿಂದ ಚೇತರಿಕೆ ಕಾಣುತ್ತಿದ್ದಂತೆಯೇ, ಕಣ್ಣುಗಳ ಸ್ಥಿತಿಯೂ ಸುಧಾರಿಸಬಹುದು. ಅದೇ ಸಮಯದಲ್ಲಿ, 'ಕಿಂಗ್ಸ್ ಕಾಲೇಜ್ ಸ್ಟಡಿ ಆಫ್ ಲಾಂಗ್ ಕೋವಿಡ್' ಪ್ರಕಾರ, ಶೇಕಡಾ 15 ರಷ್ಟು ಜನರಲ್ಲಿ ಸೋಂಕಿನ ಒಂದು ತಿಂಗಳ ನಂತರ ಕಾಂಜಂಕ್ಟಿವಿಟಿಸ್ ಅಥವಾ ಕಣ್ಣು ಕೆಂಪಾಗುವಂಥಹ ರೋಗಲಕ್ಷಣಗಳು ಕಂಡು ಬಂದಿದೆ. 


ಇದನ್ನೂ ಓದಿ :   ಬೆಳಿಗ್ಗೆ ಎದ್ದ ಕೂಡಲೇ ಈ 4 ಎಲೆಗಳನ್ನು ತಿನ್ನುವುದು ಶುಗರ್ ರೋಗಿಗಳಿಗೆ ಸಹಾಯಕ


ಕಣ್ಣಿನ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡುವುದು ಹೇಗೆ?
ಕರೋನಾದಿಂದ (Coronavirus)ಬಳಲುತ್ತಿರುವ ಕೆಲವರಿಗೆ, ಕಣ್ಣಿನ ಸಂಬಂಧಿತ ರೋಗಲಕ್ಷಣಗಳು ನೋವಿನಿಂದ ಕೂಡಿರುವುದಿಲ್ಲ. ಇನ್ನು ಕೆಲವರಿಗೆ ಹೆಚ್ಚಿನ ಸಮಸ್ಯೆಗಳನ್ನು ತಂದೊಡ್ಡಬಹುದು. ಈ ಕಣ್ಣಿನ ಸಮಸ್ಯೆಗಳಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಬಹುದು. ಇದಕ್ಕಾಗಿ ನೀರನ್ನು ಬಿಸಿ ಮಾಡಿ ನಂತರ ಅದನ್ನು ತಣ್ಣಗಾಗಲು ಬಿಡಿ. ಇದರ ನಂತರ, ಸ್ವಚ್ಛವಾದ ಹತ್ತಿ ಪ್ಯಾಡ್ನೊಂದಿಗೆ ತೇವಗೊಳಿಸುವುದರ ಮೂಲಕ ಕಣ್ಣುಗಳನ್ನು ಎಚ್ಚರಿಕೆಯಿಂದ ಒರೆಸಿ.ಬೇಕಾದರೆ ಕೆಲವು ನಿಮಿಷಗಳ ಕಾಲ ಕಣ್ಣಿನ ಮೇಲೆ ತಂಪಾದ ಬಟ್ಟೆಯನ್ನು ಹಾಕಬಹುದು. ಆದರೆ ನೆನಪಿರಲಿ ಸಮಸ್ಯೆ ತೀವ್ರವಾಗಿದ್ದರೆ, ವೈದ್ಯರನ್ನು ಸಂಪರ್ಕಿಸಬೇಕು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.