ಕಿಡ್ನಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವುದುನ್ನು ತೋರಿಸುತ್ತದೆ ಈ ಲಕ್ಷಣಗಳು
ತಜ್ಞರ ಪ್ರಕಾರ, ಮೂತ್ರಪಿಂಡಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ದೈನಂದಿನ ಕೆಲಸದ ಮೇಲೆ ಪರಿಣಾಮ ಬೀರುತ್ತದೆ. ಇದರೊಂದಿಗೆ, ಇದು ದೈಹಿಕ ಸಾಮರ್ಥ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ನವದೆಹಲಿ : ಮೂತ್ರಪಿಂಡದ ಕಾಯಿಲೆಗಳು (Kidney disease) ದಿನ ಕಳೆಯುತ್ತಿದ್ದಂತೆಯೇ ಗಂಭೀರವಾಗಬಹುದು. ಹಾಗಾಗಿ ಇ ಬಗ್ಗೆ ವಿಶೇಷ ಕಾಳಜಿ ವಹಿಸುವ ಅಗತ್ಯವಿರುತ್ತದೆ. ತಜ್ಞರ ಪ್ರಕಾರ, ಮೂತ್ರಪಿಂಡಕ್ಕೆ ಸಂಬಂಧಿಸಿದ (Kidney problems) ಯಾವುದೇ ಸಮಸ್ಯೆ ದೈನಂದಿನ ಕೆಲಸದ ಮೇಲೆ ಪರಿಣಾಮ ಬೀರುತ್ತದೆ. ಇದರೊಂದಿಗೆ, ಇದು ದೈಹಿಕ ಸಾಮರ್ಥ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಮೂತ್ರಪಿಂಡದ ಕಾರ್ಯವು ನಮ್ಮ ದೇಹದಲ್ಲಿನ ರಕ್ತವನ್ನು ಫಿಲ್ಟರ್ ಮಾಡುವುದು. ಮೂತ್ರಪಿಂಡವು (Kidney problems) ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಅದು ರಕ್ತವನ್ನು ಫಿಲ್ಟರ್ ಮಾಡುವ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಮೂತ್ರಪಿಂಡದ ಕಾಯಿಲೆಯಲ್ಲಿ(Kidney Disease), ಮೂತ್ರಪಿಂಡವು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಸಮಸ್ಯೆ ಗಂಭೀರ ಸ್ವರೂಪವನ್ನು ಪಡೆಯಬಹುದು. ಇದರಿಂದಾಗಿ ಮೂತ್ರಪಿಂಡ ವೈಫಲ್ಯದ ಅಪಾಯವೂ ಎದುರಾಗುತ್ತದೆ .
ಇದನ್ನೂ ಓದಿ : Weight Loss Tips: ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಲು ಆಲೂಗಡ್ಡೆಯನ್ನು ಈ ರೀತಿ ಸೇವಿಸಿ
ಕಿಡ್ನಿ ಸಮಸ್ಯೆಗಳಿದ್ದರೆ ಈ ಲಕ್ಷಣಗಳು ಕಾಣಿಸುತ್ತವೆ :
ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದರೆ, ದೇಹದಲ್ಲಿನ ರಕ್ತವನ್ನು ಫಿಲ್ಟರ್ ಮಾಡಲು ಸಾಧ್ಯವಾಗುವುದಿಲ್ಲ. ಇದು ದೇಹದಲ್ಲಿ ತುರಿಕೆ, ಸ್ನಾಯು ಸೆಳೆತ, ಹಸಿವಿನ ಕೊರತೆ, ವಾಕರಿಕೆ ಮತ್ತು ವಾಂತಿ, ಪಾದಗಳ ಊತ, ಅತಿಯಾದ ಮೂತ್ರ ವಿಸರ್ಜನೆ ಅಥವಾ ಮೂತ್ರ ವಿಸರ್ಜಿಸಲು ಅಸಮರ್ಥತೆಯನ್ನು ಉಂಟುಮಾಡಬಹುದು. ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದಾಗಿ ನಿದ್ರಿಸುವುದು ಕೂಡಾ ಕಷ್ಟವಾಗಬಹುದು.
ಈ ಕಾರಣಗಳಿಂದಾಗಿ ಈ ಸಮಸ್ಯೆ ಉಂಟಾಗಬಹುದು :
ಅಧಿಕ ರಕ್ತದೊತ್ತಡದಿಂದ ಅಂದರೆ ಅಧಿಕ ರಕ್ತದೊತ್ತಡ (High Blood Pressure) ಅಥವಾ ಮಧುಮೇಹದಿಂದ ಮೂತ್ರಪಿಂಡದ ಸಮಸ್ಯೆಗಳು ಉಂಟಾಗಬಹುದು. ಇದಲ್ಲದೆ, ಧೂಮಪಾನ ಕೂಡಾ ಕಿಡ್ನಿ ಸಮಸ್ಯೆಗೆ (Kidney Problem) ಕಾರಣವಾಗಬಹುದು. ಅಧಿಕ ತೂಕವು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ : Hair Care Tips: ತಲೆಹೊಟ್ಟಿನಿಂದ ಕೂದಲು ಹಾಳಾಗಿದೆಯೇ? ತ್ವರಿತ ಪರಿಹಾರಕ್ಕಾಗಿ ಈ 5 ಮನೆಮದ್ದನ್ನು ಟ್ರೈ ಮಾಡಿ
ಈ ವಿಧಾನಗಳನ್ನು ಅನುಸರಿಸಿ :
ಸಮತೋಲಿತ ಆಹಾರವನ್ನು ಸೇವಿಸುವ ಮೂಲಕ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯು ಹೆಚ್ಚಾಗದಂತೆ ಕಾಪಾಡಬಹುದು. ಅಲ್ಲದೆ ಕಿಡ್ನಿ ಸಮಸ್ಯೆಯಿರುವಾಗ ಉಪ್ಪನ್ನು (Salt) ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು .
1 . ಮದ್ಯಪಾನ ಅಥವಾ ಧೂಮಪಾನವನ್ನು ತಪ್ಪಿಸಿ. ಈ ಎರಡೂ ಅಂಶಗಳು ರೋಗವನ್ನು ಉಲ್ಬಣಗೊಳಿಸಬಹುದು.
2 . ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯ ಸಮಸ್ಯೆಯಲ್ಲಿ ತೂಕ ಹೆಚ್ಚಾಗಬಹುದು. ಇದಕ್ಕಾಗಿ, ಆಹಾರ ತಜ್ಞರ ಸಲಹೆಯ ಮೇರೆಗೆ ತೂಕವನ್ನು ನಿಯಂತ್ರಿಸಲು ಕ್ರಮಗಳನ್ನು ತೆಗೆದುಕೊಳ್ಳಿ.
3.ದೈಹಿಕ ಚಟುವಟಿಕೆಯು ಈ ರೋಗವು ಗಂಭೀರ ಸ್ವರೂಪವನ್ನು ತೆಗೆದುಕೊಳ್ಳುವುದನ್ನು ತಡೆಯುತ್ತದೆ. 30 ನಿಮಿಷಗಳ ಕಾಲ ನಿಯಮಿತವಾಗಿ ವ್ಯಾಯಾಮ (Exercise) ಮಾಡುವುದರಿಂದ ಪ್ರಯೋಜನವಾಗುತ್ತದೆ.
4. ಮಧುಮೇಹದ ಸಮಸ್ಯೆ ಇದ್ದರೆ, ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಿ (Sugar level). ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯ ಸಮಯದಲ್ಲಿ ಮಧುಮೇಹದ ಸಮಸ್ಯೆಯು ರೋಗವನ್ನು ಉಲ್ಬಣಗೊಳಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.