ನೋಡಲು ಗಾತ್ರದಲ್ಲಿ ಚಿಕ್ಕದಾದರೂ ಆರೋಗ್ಯದ ಪಾಲಿಗೆ ವರದಾನ ಈ ಚಿಕ್ಕ ಬೀಜಗಳು!
Chia Seeds Health Benefits: ಋತುಮಾನ ಯಾವುದೇ ಇದ್ದರೂ ಕೂಡ ಚಿಯಾ ಬೀಜಗಳು ದೇಹವನ್ನು ತಂಪಾಗಿರಿಸಲು ತುಂಬಾ ಸಹಕಾರಿಯಾಗಿವೆ. ಇದರ ಜೊತೆಗೆ ಚಿಯಾ ಬೀಜಗಳ ಸೇವನೆ ಹಲವು ಆರೋಗ್ಯಕರ ಲಾಭಗಳನ್ನು ಹೊಂದಿವೆ. ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಚಿಯಾ ಬೀಜಗಳ ಸೇವನೆ ತುಂಬಾ ಹಿತಕಾರಿಯಾಗಿದೆ. ಹಾಗಾದರೆ ಬನ್ನಿ ಚಿಯಾ ಬೀಜಗಳ ಸೇವನೆ ಇತರ ಯಾವ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿವೆ ತಿಳಿದುಕೊಳ್ಳೋಣ. Health News In Kannada
Chia Seeds Health Benefits - ಚಿಯಾ ಬೀಜಗಳು ಬೇಸಿಗೆಯಲ್ಲಿ ಹೊಟ್ಟೆಗೆ ತುಂಬಾ ಪ್ರಯೋಜನಕಾರಿಯಾಗಿವೆ. ಪ್ರತಿನಿತ್ಯ ಇವುಗಳನ್ನು ಸೇವಿಸುವುದರಿಂದ ಹೊಟ್ಟೆ ತಂಪಾಗಿರುತ್ತದೆ. ಇದರ ಆರೋಗ್ಯ ಪ್ರಯೋಜನಗಳಿಂದಾಗಿ ಇದನ್ನು ಸೂಪರ್‌ಫುಡ್ ಎಂದೂ ಸಹ ಕರೆಯುತ್ತಾರೆ. ಆರೋಗ್ಯ ಪ್ರಯೋಜನಗಳ ಜೊತೆಗೆ, ಇದು ತೂಕ ಇಳಿಕೆಗೂ ಕೂಡ ತುಂಬಾ ಸಹಕಾರಿಯಾಗಿದೆ. ಚಿಯಾ ಬೀಜಗಳು ಮತ್ತು ಆರೋಗ್ಯಕ್ಕೆ ಅದರಿಂದಾಗುವ ಲಾಭಗಳ ಕುರಿತು ತಿಲಿದುಕೊಳ್ಳೋಣ ಬನ್ನಿ, (Health News In Kannada)
ಚಿಯಾ ಸೀಡ್ ಅಂದರೇನು?
ಚಿಯಾ ಬೀಜಗಳು ಮಿಂಟ್ ಪ್ರಜಾತಿಗೆ ಸೇರಿವೆ. ಮೆಕ್ಸಿಕೋದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಇದನ್ನೂ ಸಂಪೂರ್ಣ ಸಿರಿಧಾನ್ಯದ ರೂಪದಲ್ಲಿ ಸೇವಿಸಲಾಗುತ್ತದೆ. ಅಂದರೆ, ಇದು ಕಾರ್ಬೋಹೈಡ್ರೇಟ್ ಸಮೃದ್ಧವಾಗಿದೆ. ನೀರಿನಲ್ಲಿ ಇವುಗಳನ್ನು ನೆನೆಸಿದಾಗೆ ಇವು ದಪ್ಪ ಜೆಲ್ಲಿ ಬೀಜಗಳಾಗಿ ಪರಿವರ್ತನೆಯಾಗುತ್ತವೆ.
1. ಕರುಳಿನ ಆರೋಗ್ಯಕ್ಕೆ ಲಾಭಕಾರಿ - ಇದು ನೀರಿನಲ್ಲಿ ನೆನೆಯುವ ಫೈಬರ್ ಯುಕ್ತ ಪದಾರ್ಥವಾಗಿದೆ. ಇದು ಒಂದಲ್ಲ ಹಲವು ರೀತಿಯಲ್ಲಿ ಕರುಳಿನ ಆರೋಗ್ಯಕ್ಕೆ ಲಾಭಕಾರಿಯಾಗಿವೆ. ಕರುಳಿಗೆ ಒಳ್ಳೆಯ ಬ್ಯಾಕ್ಟೀರಿಯಾ ಪೂರೈಕೆಯನ್ನು ಇವು ಸುನೀಸ್ಚಿತಗೊಳಿಸುತ್ತವೆ ಹಾಗೂ ದೇಹದಿಂದ ವ್ಯಾಜ್ಯ ಪದಾರ್ಥಗಳ ಹೊರಹಾಕುವಿಕೆಯನ್ನು ನಿಯಂತ್ರಿಸುತ್ತದೆ.
2. ಇವುಗಳಲ್ಲಿ ಕ್ಯಾಲ್ಸಿಯಂ ಹೇರಳ ಪ್ರಮಾಣದಲ್ಲಿರುತ್ತದೆ - ಒಂದು ವೇಳೆ ನಿಮಗೆ ಡೇರಿ ಉತ್ಪನ್ನಗಳು ಇಷ್ಟವಿಲ್ಲ ಎಂದಾದರೆ, ಚಿಯಾ ಬೀಜಗಳ ಸೇವನೆ ನಿಮ್ಮ ದೇಹದ ಮೂಳೆಗಳ ಆರೋಗ್ಯ ಬಲವರ್ಧನೆಗೆ ಉತ್ತಮ ಆಯ್ಕೆಯಾಗಿದೆ.
3. ಒತ್ತಡ ಕಡಿಮೆ ಮಾಡಲು ಸಹಕಾರಿ - ಚಿಯಾ ಬೀಜಗಳು ಟ್ರಿಪ್ಟೋಫ್ಯಾನ್ ಹಾಗೂ ಮೇಗ್ನಿಸಿಯಂನ ಆಗರವಾಗಿದೆ. ಇದು ಒತ್ತಡದ ಮಟ್ಟವನ್ನು ನಿಯಂತ್ರಿಸುವಲ್ಲಿ ಕೆಲಸ ಮಾಡುತ್ತದೆ ಮತ್ತು ನಿದ್ರೆಯನ್ನು ಕಾಪಾಡುವಲ್ಲಿ ಸಹಕಾರಿಯಾಗಿದೆ.
ಇದನ್ನೂ ಓದಿ-ದೇಹದಲ್ಲಿ ಹೆಚ್ಚಾದ ಕೊಲೆಸ್ಟ್ರಾಲ್ ವೇಗವಾಗಿ ಕಡಿಮೆಯಾಗುತ್ತೆ, ಆಹಾರದಲ್ಲಿ 5 ಸೂಪರ್ ಫುಡ್ ಶಾಮೀಲುಗೊಳಿಸಿ!
ಚಿಯಾ ಬೀಜಗಳ ಸೇವನೆಯಿಂದ ತೂಕ ಇಳಿಕೆಯಾಗುತ್ತದೆಯೇ?
ವಾಟರ್ ರಿಟೈನ್ಶನ್ ನಲ್ಲಿ ಸಹಕಾರಿಯಾಗಿದೆ. ಇದೆ ಕಾರಣದಿಂದ ಇದನ್ನು ಉತ್ತಮ ಪ್ರೋಟೀನ್ ಹೊಂದಿರುವ ಒಂದು ಉಪಹಾರ ಎಂದು ಪರಿಗಣಿಸಲಾಗುತ್ತದೆ. ಇದರ ಸೇವನೆಯಿಂದ ಹೊಟ್ಟೆ ತುಂಬಿದ ಭಾಸವಾಗುತ್ತದೆ. ಅನಾರೋಗ್ಯಕರ ಸ್ನ್ಯಾಕಿಂಗ್ ಸೇವನೆಯನ್ನು ಇದು ಕಡಿಮೆ ಮಾಡುತ್ತದೆ.
ಇದನ್ನೂ ಓದಿ-ನೀವೂ ಸಕ್ಕರೆ ಕಾಯಿಲೆಯಿಂದ ತೊಂದರೆಗೊಳಗಾಗಿದ್ದರೆ, ನಿತ್ಯ ಈ ಒಣ ಎಲೆ ಅಗೆಯಿರಿ!
ನೆನಪಿರಲಿ: ಹಾಗೆ ನೋಡಿದರೆ ಚಿಯಾ ಬೀಜಗಳು ಆರೋಗ್ಯಕ್ಕೆ ತುಂಬಾ ಲಾಭಕಾರಿಯಾಗಿವೆ. ಆದರೆ, ಕೆಲವರಿಗೆ ಇವುಗಳ ಸೇವನೆ ಕಿರಿಕಿರಿಯುಂಟು ಮಾಡಬಹುದು. ಹೀಗಿರುವಾಗ ಇವುಗಳನ್ನು ಸೇವಿಸುವ ಮುನ್ನ ನಿಮ್ಮ ಡೈಟೀಶಿಯನ್ ಅಥವಾ ವೈದ್ಯರ ಸಲಹೆಯನ್ನು ಪಡೆದುಕೊಳ್ಳಲು ಮರೆಯಬೇಡಿ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.